ಕುಮಾರಸ್ವಾಮಿಗೆ ಮಧ್ಯರಾತ್ರಿ ಆಗಿದ್ದೇನು? ಹೆಚ್ಡಿಕೆ ಗೋಲ್ಡನ್ ಅವರ್ ಬಗ್ಗೆ ವಿವರಿಸಿದ ಡಾಕ್ಟರ್
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಂಪೂರ್ಣ ಗುಣಮುಖರಾಗಿ ಇಂದು (ಸೆಪ್ಟೆಂಬರ್ 3, ಭಾನುವಾರ) ಡಿಸ್ಚಾರ್ಜ್ ಆಗಿದ್ದಾರೆ. ಕುಮಾರಸ್ವಾಮಿ ಅವರಿಗೆ ಆಗಸ್ಟ್ 30ರ ಮಧ್ಯರಾತ್ರಿ ಆಗಿದ್ದೇನು? ಹೆಚ್ಡಿಕೆ ಗೋಲ್ಡನ್ ಅವರ್ ಬಗ್ಗೆ ಚಿಕಿತ್ಸೆ ನೀಡಿದ್ದ ಡಾಕ್ಟರ್ ಹೇಳಿದ್ದಿಷ್ಟು
ಬೆಂಗಳೂರು, (ಸೆಪ್ಟೆಂಬರ್ 03): ಅನಾರೋಗ್ಯದಿಂದ ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ(HD Kumaraswamy) ಸಂಪೂರ್ಣ ಗುಣಮುಖರಾಗಿ ಇಂದು (ಸೆಪ್ಟೆಂಬರ್ 3, ಭಾನುವಾರ) ಡಿಸ್ಚಾರ್ಜ್ ಆಗಿದ್ದಾರೆ. ಕುಮಾರಸ್ವಾಮಿ ಅವರಿಗೆ ಲಘುವಾಗಿ ಸ್ಟ್ರೋಕ್ ಆಗಿತ್ತು ಎಂದು ಚಿಕಿತ್ಸೆ ನೀಡಿದ್ದ ವೈದ್ಯರು ಹೇಳಿದ್ದಾರೆ. ಕುಮಾರಸ್ವಾಮಿ ಅವರು ಕೂಡಲೇ ಆಸ್ಪತ್ರೆಗೆ ಬಂದಿದ್ದರಿಂದ ಕ್ಷೇಮವಾಗಿದ್ದಾರೆ. ಇನ್ನು ಕುಮಾರಸ್ವಾಮಿ ಅವರ ಗೋಲ್ಡನ್ ಅವರ್ ಬಗ್ಗೆ ಚಿಕಿತ್ಸೆ ನೀಡಿದ್ದ ವೈದ್ಯ ಚಿನ್ಮಯ್ ನಾಗೇಶ್ ಟಿವಿ9 ಜೊತೆ ಮಾತನಾಡಿದ್ದು, ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ