Apple MacBook M3: ಬರುತ್ತಿದೆ ಹೊಸ ಸರಣಿಯ ಆ್ಯಪಲ್ ಮ್ಯಾಕ್​ಬುಕ್

|

Updated on: Jul 20, 2023 | 9:30 AM

ಈ ಬಾರಿ ಆ್ಯಪಲ್, ಮ್ಯಾಕ್​ಬುಕ್ ಸರಣಿಯಲ್ಲಿ M3 ಪ್ರೊಸೆಸರ್ ಬಳಸುವ ನಿರೀಕ್ಷೆಯಿದೆ. ಹೊಸ ಪ್ರೊಸೆಸರ್ ಅನ್ನು ಸ್ವತಃ ಆ್ಯಪಲ್ ಅಭಿವೃದ್ಧಿಪಡಿಸುತ್ತಿದೆ. ಆ್ಯಪಲ್ ಮ್ಯಾಕ್​ಬುಕ್ ಸರಣಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಅದಕ್ಕೆ ಪೂರಕವಾಗಿ ಹೊಸ ಹೊಸ ಮಾದರಿಗಳು ಮಾರುಕಟ್ಟೆಗೆ ಲಗ್ಗೆ ಇರಿಸುತ್ತಿವೆ.

ಆ್ಯಪಲ್ ಹೊಸ ಐಫೋನ್ 15 ಸರಣಿಯನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ನಡೆಸಿದೆ. ಅದಕ್ಕಾಗಿ ಸೆಪ್ಟೆಂಬರ್​ ತಿಂಗಳಲ್ಲಿ ವಿಶೇಷ ಈವೆಂಟ್ ನಡೆಸುವ ನಿರೀಕ್ಷೆಯಿದೆ. ಐಫೋನ್ 15 ಸರಣಿಯಲ್ಲಿ ಹೊಸದಾಗಿ ನಾಲ್ಕು ಮಾದರಿಗಳು ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ. ಅದಾದ ಬಳಿಕ, ಅಕ್ಟೋಬರ್​ನಲ್ಲಿ ಆ್ಯಪಲ್ ಮ್ಯಾಕ್​ಬುಕ್ ನೂತನ ಸರಣಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಬಾರಿ ಆ್ಯಪಲ್, ಮ್ಯಾಕ್​ಬುಕ್ ಸರಣಿಯಲ್ಲಿ M3 ಪ್ರೊಸೆಸರ್ ಬಳಸುವ ನಿರೀಕ್ಷೆಯಿದೆ. ಹೊಸ ಪ್ರೊಸೆಸರ್ ಅನ್ನು ಸ್ವತಃ ಆ್ಯಪಲ್ ಅಭಿವೃದ್ಧಿಪಡಿಸುತ್ತಿದೆ. ಆ್ಯಪಲ್ ಮ್ಯಾಕ್​ಬುಕ್ ಸರಣಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಅದಕ್ಕೆ ಪೂರಕವಾಗಿ ಹೊಸ ಹೊಸ ಮಾದರಿಗಳು ಮಾರುಕಟ್ಟೆಗೆ ಲಗ್ಗೆ ಇರಿಸುತ್ತಿವೆ.

Follow us on