Apple Vision Pro: ಆ್ಯಪಲ್ ವಿಆರ್ ಹೆಡ್​ಸೆಟ್ ವಿಶನ್ ಪ್ರೊ ಬೆಲೆ ಭಾರತದಲ್ಲಿ ₹2,88,700!!

Edited By:

Updated on: Jun 07, 2023 | 12:10 PM

ಸಾಕಷ್ಟು ರೋಚಕತೆ ಸೃಷ್ಟಿಸಿದ್ದ ಆ್ಯಪಲ್ ವಿಷನ್‌ ಪ್ರೊ ಕಂಪನಿಯ ಭವಿಷ್ಯದ ಪ್ರಾಡಕ್ಟ್‌ ಆಗಿದೆ. ವರ್ಚ್ಯುಯಲ್‌ ರಿಯಾಲಿಟಿ ಬಯಸುವವರಿಗೆ ಈ ಕನ್ನಡಕದಂತಹ ವಿಷನ್‌ ಪ್ರೊ ಹೊಸ ಅನುಭವ ನೀಡಲಿದೆ.

ಸಾಕಷ್ಟು ರೋಚಕತೆ ಸೃಷ್ಟಿಸಿದ್ದ ಆ್ಯಪಲ್ ವಿಷನ್‌ ಪ್ರೊ ಕಂಪನಿಯ ಭವಿಷ್ಯದ ಪ್ರಾಡಕ್ಟ್‌ ಆಗಿದೆ. ವರ್ಚ್ಯುಯಲ್‌ ರಿಯಾಲಿಟಿ ಬಯಸುವವರಿಗೆ ಈ ಕನ್ನಡಕದಂತಹ ವಿಷನ್‌ ಪ್ರೊ ಹೊಸ ಅನುಭವ ನೀಡಲಿದೆ. ಈ ವಿಶೇಷವಾದ ಆ್ಯಪಲ್ ವಿಷನ್ ಪ್ರೊ ಬಳಕೆದಾರರಿಗೆ ಉತ್ತಮ ಅನುಭವ ನೀಡಲಿದ್ದು, ಧರಿಸುವವರು ತಮ್ಮ ಸುತ್ತಮುತ್ತಲಿನ ಬಗ್ಗೆ ಜಾಗೃತರಾಗಲು ಸಹ ಅನುವು ಮಾಡಿಕೊಡುತ್ತದೆ. ಹಾಗೂ ಕಣ್ಣು ಮತ್ತು ಧ್ವನಿ ಆಯ್ಕೆಯ ಕಂಟ್ರೋಲ್‌ ಬೆಂಬಲವನ್ನು ಹೊಂದಿದ್ದು, ಬಹು ಸೆನ್ಸರ್‌ಗಳು ಹಾಗೂ ಕ್ಯಾಮೆರಾಗಳಿಂದ ಪ್ಯಾಕ್‌ ಆಗಿದೆ. ಇದು M2 ಚಿಪ್‌ನಿಂದ ಕಾರ್ಯನಿರ್ವಹಿಸಲಿದ್ದು, R1 ಎಂಬ ಹೊಸ M2 ಚಿಪ್ ಆಧರಿಸಿ ಕೆಲಸ ಮಾಡುತ್ತದೆ. ಆ್ಯಪಲ್ ಪ್ರಕಾರ ಇದು 12 ಕ್ಯಾಮೆರಾಗಳು, 5 ಸೆನ್ಸಾರ್‌ಗಳು ಮತ್ತು ಆರು ಮೈಕ್ರೊಫೋನ್‌ಗಳನ್ನು ಬೆಂಬಲಿಸುತ್ತದೆ. ಈ ವಿಶೇಷ ಡಿವೈಸ್‌ಗೆ $3,499 ಅಂದರೆ ಭಾರತದಲ್ಲಿ ಇದರ ಬೆಲೆ ಸುಮಾರು 2,88,700 ರೂ. ಇರಬಹುದು.

Published on: Jun 07, 2023 12:01 PM