ಅಯೋಧ್ಯೆ, ಡಿ.30: ಪ್ರಧಾನಿ ನರೇಂದ್ರ ಮೋದಿ (narendra modi) ಅವರು ಇಂದು ರಾಮಜನ್ಮ ಭೂಮಿ ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಲಿದ್ದಾರೆ. ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಮೂಲಕ ರಾಮಮಂದಿರದ ಲೋರ್ಕಾಪಣೆಗೆ ಇದು ಮುನ್ನಡಿಯನ್ನು ಬರೆಯಲಿದೆ. ಇಂದು ಅಯೋಧ್ಯೆಯಲ್ಲಿ ವಾಲ್ಮೀಕಿ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಇನ್ನು ಹೊಸ ಅಮೃತ್ ಭಾರತ್ ಮತ್ತು ವಂದೇ ಭಾರತ್ ರೈಲುಗಳಿಗೂ ಹಸಿರು ನಿಶಾನೆ ತೋರಿಸಲಿದ್ದಾರೆ. ಇನ್ನು ಈ ಕಾರ್ಯಕ್ರಮಕ್ಕೆ ಮೋದಿ ಅವರನ್ನು ಸ್ವಾಗತಿಸಲು ಅಯೋಧ್ಯೆಯಲ್ಲಿ ಸಲಕ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣವನ್ನು ಹೂವಿನಿಂದ ಅಲಂಕರಿಸಲಾಗಿದ್ದು, ಜೊತೆಗೆ ರಾಮನ ದೊಡ್ಡ ಕಟೌಟ್ನ್ನು ಹಾಕಲಾಗಿದೆ. ಅಯೋಧ್ಯೆಯ ಅನೇಕ ಕಡೆಗಳಲ್ಲಿ ರಾಮನ ಚಿತ್ರಗಳನ್ನು ಚಿತ್ರಿಸಲಾಗಿದೆ. ಅಯೋಧ್ಯೆಯ ರಸ್ತೆಗಳಿಂದ ಹಿಡಿದು ಘಾಟ್‌ಗಳವರೆಗೆ ಅದ್ಭುತವಾಗಿ ಅಲಂಕರಿಸಲಾಗಿದೆ. ಪ್ರಧಾನಿ ಆಗಮನದ ಬಗ್ಗೆ ಅಯೋಧ್ಯೆಯ ಜನರು ಸಾಕಷ್ಟು ಸಂತೋಷ ವ್ಯಕ್ತಪಡಿಸಿದ್ದಾರೆ. ಸಂತರು ಹಾಗೂ ಜನಸಾಮಾನ್ಯರಲ್ಲಿ ಸಂತಸದ ಅಲೆ ತೆಲಾಡುತ್ತಿದ್ದಾರೆ. ಇದರ ಜತೆಗೆ ಅಯೋಧ್ಯೆಯಲ್ಲಿ ಬಿಗಿ ಭದ್ರತಾ ವ್ಯವಸ್ಥೆಯನ್ನೂ ಮಾಡಲಾಗಿದೆ. ವಿವಿಧೆಡೆ ಪೊಲೀಸರನ್ನು ನಿಯೋಜಿಸಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:57 am, Sat, 30 December 23