ದೆಹಲಿ ಆಟೋ ಚಾಲಕರ ಮನೆಯಲ್ಲಿ ಊಟ ಮಾಡಿದ ಅರವಿಂದ್ ಕೇಜ್ರಿವಾಲ್ ದಂಪತಿ

|

Updated on: Dec 10, 2024 | 8:50 PM

ದೆಹಲಿ ವಿಧಾನಸಭಾ ಚುನಾವಣೆಗೂ ಮುನ್ನ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಆಟೋರಿಕ್ಷಾ ಚಾಲಕರಿಗೆ 10 ಲಕ್ಷ ರೂ.ವರೆಗಿನ ಜೀವ ವಿಮಾ, ಹೆಣ್ಣು ಮಕ್ಕಳ ಮದುವೆಗೆ 1 ಲಕ್ಷ ರೂ. ಹಣ ಮತ್ತು ಮಕ್ಕಳ ಶಿಕ್ಷಣಕ್ಕೆ ಬೆಂಬಲ ಸೇರಿದಂತೆ 5 ಹೊಸ ಗ್ಯಾರಂಟಿಗಳನ್ನು ಘೋಷಿಸಿದ್ದಾರೆ.

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ದೆಹಲಿ ವಿಧಾನಸಭೆಯ ಪ್ರಸ್ತುತ ಅವಧಿಯು 2025ರ ಫೆಬ್ರವರಿ 23ರಂದು ಕೊನೆಗೊಳ್ಳುತ್ತದೆ. ಹೀಗಾಗಿ, ಈಗಾಗಲೇ ಚುನಾವಣಾ ಪ್ರಚಾರ ಶುರುವಾಗಿದೆ. ಇಂದು ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್ ಆಟೋ ಚಾಲಕರಿಗೆ 5 ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ಇಂದು ಅವರು ಆಟೋ ಚಾಲಕರ ಮನೆಯಲ್ಲಿ ತಮ್ಮ ಪತ್ನಿ ಸುನೀತಾ ಜೊತೆ ಊಟ ಮಾಡಿದ್ದಾರೆ.

ಅರವಿಂದ್ ಕೇಜ್ರಿವಾಲ್ ನೀಡಿದ ಭರವಸೆಯಂತೆ ಎಲ್ಲಾ ಆಟೋರಿಕ್ಷಾ ಚಾಲಕರು 10 ಲಕ್ಷದವರೆಗಿನ ವಿಮಾ ರಕ್ಷಣೆಯನ್ನು ಪಡೆಯುತ್ತಾರೆ. ಆಟೋ ಚಾಲಕರ ಹೆಣ್ಣು ಮಕ್ಕಳ ಮದುವೆಗೆ 1 ಲಕ್ಷ ರೂ. ಆರ್ಥಿಕ ನೆರವು ನೀಡಲಾಗುವುದು. ಆಟೋರಿಕ್ಷಾ ಚಾಲಕರ ಸಮವಸ್ತ್ರಕ್ಕೆ ಎರಡು ವರ್ಷಕ್ಕೆ 2,500 ರೂ. ನೀಡಲಾಗುವುದು. ಆಟೋ ಚಾಲಕರ ಮಕ್ಕಳಿಗಾಗಿ ಕೋಚಿಂಗ್ ತರಗತಿಗಳನ್ನು ಸಹ ಸರ್ಕಾರ ಪರಿಶೀಲಿಸಲಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ