ಆರ್ಯನ್ ಖಾನ್​ಗೆ ಅಪ್ಪನಂತೆ ನಟನಾಗುವ ಬಯಕೆಯಿಲ್ಲ, ನಿರ್ದೇಶಕನಾಗುವ ಹೆಬ್ಬಯಕೆ ಇದೆ!

Edited By: ಅರುಣ್​ ಕುಮಾರ್​ ಬೆಳ್ಳಿ

Updated on: Oct 04, 2021 | 4:19 PM

ಮಾರ್ಷಲ್ ಆರ್ಟ್ಸ್ ನಲ್ಲಿ ಪರಿಣಿತಿ ಹೊಂದಿರುವ ಜ್ಯೂನಿಯರ್ ಖಾನ್ ಟೇಕ್ವೊಂಡೊನಲ್ಲಿ ಬ್ಲ್ಯಾಕ್ ಬೆಲ್ಟ್ ಹೊಂದಿದ್ದಾರೆ. 2010 ರಲ್ಲಿ ಅವರು ಮಹಾರಾಷ್ಟ್ರ ಟೇಕ್ವೊಂಡೊ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದರಂತೆ.

ಬಾಲಿವುಡ್ ನಟ ಶಾರುಖ್ ಖಾನ್ ಅವರು ಮಗ ಆರ್ಯನ್ ಖಾನ್ ಹಿತಕರವಲ್ಲದ ವಿಷಯಕ್ಕೆ ಸುದ್ದಿಯಲ್ಲಿದ್ದಾರೆ. ಸೀನಿಯರ್ ಖಾನ್, ಮಗನ ವಿಷಯದಲ್ಲಿ ಆಗಿರುವ ಈ ಬೆಳವಣಿಗೆಯಿಂದ ಚಿಂತಿತರಾಗಿದ್ದಾರೆ. ನೋಡಲು ಥೇಟ್ ಅಪ್ಪನಂತೆಯೇ ಇರುವ ಆರ್ಯನ್ ಎದುರು ಉಜ್ವಲವಾದ ಭವಿಷ್ಯವಿದೆ. ಅಪ್ಪನಂತೆಯೇ ಆರ್ಯನ್ ಸಹ ಸಿನಿಮಾ ನಟರಾಗುತ್ತಾರೆ ಅಂತ ಎಲ್ಲರೂ ಭಾವಿಸಿದ್ದಾರೆ. ಆದರೆ ಆರ್ಯನ್ ಗೆ ನಟನೆಗಿಂತ ಸಿನಿಮಾ ಮೇಕಿಂಗ್ನಲ್ಲಿ ಹೆಚ್ಚು ಆಸಕ್ತಿ. ಅದಕ್ಕಾಗಿ ಅವರು ಅಮೇರಿಕಾದ ದಕ್ಷಿಣ ಕೆರೊಲಿನಾನಲ್ಲಿ ವ್ಯಾಸಂಗವನ್ನೂ ಮಾಡುತ್ತಿದ್ದಾರೆ. ಅವರ ಆರಂಭಿಕ ವಿದ್ಯಾಭ್ಯಾಸ ಆಗಿದ್ದು ಲಂಡನ್ನ ಸೆವೆನ್ ಓಕ್ಸ್ ನಲ್ಲಿ. ಆರ್ಯನ್ ಫಿಟ್ನೆಸ್ ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ ಮತ್ತು ಸ್ಪೋರ್ಟ್ಸ್​ನಲ್ಲೂ ಆಸಕ್ತಿಯಿದೆ.

ಮಾರ್ಷಲ್ ಆರ್ಟ್ಸ್ ನಲ್ಲಿ ಪರಿಣಿತಿ ಹೊಂದಿರುವ ಜ್ಯೂನಿಯರ್ ಖಾನ್ ಟೇಕ್ವೊಂಡೊನಲ್ಲಿ ಬ್ಲ್ಯಾಕ್ ಬೆಲ್ಟ್ ಹೊಂದಿದ್ದಾರೆ. 2010 ರಲ್ಲಿ ಅವರು ಮಹಾರಾಷ್ಟ್ರ ಟೇಕ್ವೊಂಡೊ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದರಂತೆ.

ಆರ್ಯನ್ ಈಗಾಗಲೇ ಸಿನಿಮಾನಲ್ಲಿ ನಟಿಸಿದ್ದಾರೆ ಅಂತ ಹೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ಅವರ ತಂದೆ ಸಹ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಂಡಿರುವ ‘ಕಭಿ ಖುಷಿ ಕಭಿ ಗಮ್’ ಚಿತ್ರದಲ್ಲಿ ಅವರು ಶಾರುಖ್ ಬಾಲಕನಾಗಿದ್ದಾಗಿನ ಪಾತ್ರವನ್ನು ನಿರ್ವಹಿಸಿದ್ದರು. ಆದಾದ ಮೇಲೆ ‘ಕಭಿ ಅಲ್ವಿದಾ ನಾ ಕಹೇ ನಾ,’ ಚಿತ್ರದಲ್ಲೂ ಬಾಲನಟನ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು.

ಹೆಚ್ಚಿನ ಸಮಯವನ್ನು ವಿದೇಶಗಳಲ್ಲೇ ಕಳೆಯುವ ಆರ್ಯನ್​ಗೆ ಭಾರತದಲ್ಲಿ ಹೆಚ್ಚು ಸ್ನೇಹಿತರಿಲ್ಲ. ಆದರೆ, ತನ್ನ ತಂಗಿ ಸುಹಾನಾ ಖಾನ್ ಅವರ ಗೆಳತಿಯರಾಗಿರುವ ಶರಣ್ಯ ಕಪೂರ್, ಅನನ್ಯ ಪಾಂಡೆ, ನವ್ಯ ನವೇಲಿ ನಂದಾ ಮತ್ತು ಆಹಾನ್ ಪಾಂಡೆ ಮೊದಲಾದವರೊಂದಿಗೆ ಸಮಯ ಕಳೆಯುತ್ತಾರೆ, ಪಾರ್ಟಿ ಮಾಡುತ್ತಾರೆ. ಟೀ-ಶರ್ಟ್ ಮತ್ತು ಜೀನ್ಸ್ ಅವರ ಮೆಚ್ಚಿನ ಉಡುಗೆ.

ಇದನ್ನೂ ಓದಿ:  ಡ್ರಗ್ಸ್​ ಕೇಸ್​: ಎನ್​ಸಿಬಿ ಕಚೇರಿಯಲ್ಲಿ ಗಪ್​ಚುಪ್​ ಆಗಿ ಕುಳಿತ ಶಾರುಖ್​ ಪುತ್ರ ಆರ್ಯನ್​ ಖಾನ್​; ಇಲ್ಲಿದೆ ವಿಡಿಯೋ

Loading...
Unable to load recommendations.
Follow Us
TV9 Web

TV9 Kannada

Read More