‘ಆಶಿಕಾ ಕುಡಿದು ರಂಪಾಟ ಮಾಡಿಲ್ಲ’; ಸ್ಪಷ್ಟನೆ ನೀಡಿದ ನಿರ್ದೇಶಕ ಪವನ್ ಒಡೆಯರ್
ನಟ ಆಶಿಕಾ ರಂಗನಾಥ್ ಕುಡಿದು ರಂಪಾಟ ಮಾಡಿದ್ದಾರೆಂದು ಹೇಳಿ ವಿಡಿಯೋ ಒಂದು ವೈರಲ್ ಆಗಿತ್ತು. ಈ ಕುರಿತಾಗಿ ನಿರ್ದೇಶಕ ಪವನ್ ಒಡೆಯರ್ ಸ್ಪಷ್ಟನೆ ನೀಡಿದ್ದಾರೆ.
ನಟಿ ಆಶಿಕಾ ರಂಗನಾಥ್ (Ashika Ranganath) ಕುಡಿದು ರಂಪಾಟ ಮಾಡಿದ್ದಾರೆಂದು ಹೇಳಿ ಶುಕ್ರವಾರ (ನ. 18) ವಿಡಿಯೋ ಒಂದು ವೈರಲ್ ಆಗಿತ್ತು. ಹೀಗೆ ಎಲ್ಲೆಡೆ ವೈರಲ್ ಆದ ವಿಡಿಯೋದಿಂದಾಗಿ ಆಶಿಕಾ ರಂಗನಾಥ್ ಅಪ್ಸೆಟ್ ಆಗಿದ್ದಾರೆ. ‘ಹೀಗಾದ್ರೆ ನಾನು ಸಿನಿಮಾ ಪ್ರಮೋಶನ್ಗೆ ಬರಲ್ಲ’ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಈ ಹರಿದಾಡುತ್ತಿರುವ ವಿಡಿಯೋ ಕುರಿತಾಗಿ ನಿರ್ದೇಶಕ ಪವನ್ ಒಡೆಯರ್ ಸ್ಪಷ್ಟನೆ ನೀಡಿದ್ದಾರೆ. ‘ಅದು ಆಶಿಕಾ ರಂಗನಾಥ್ ಕುಡಿದು ರಂಪಾಟ ಮಾಡಿರೋದಲ್ಲ. ‘ರೇಮೊ’ ಚಿತ್ರದ ಬಹಳ ಪ್ರಮುಖ ದೃಶ್ಯಕ್ಕಾಗಿ ಅವರು ನೈಜವಾಗಿ ಅಭಿನಯಿಸಿರೋದು. ನೀವು ಬೇಕಿದ್ರೆ ವಿಡಿಯೋವನ್ನು ಗಮನಿಸಿದರೆ ಚಿತ್ರೀಕರಣದ ಸಾಮಾಗ್ರಿಗಳನ್ನು ಗಮನಿಸಬಹುದು’ ಎಂದಿದ್ದಾರೆ. ‘ಇದು ನಿಜವಾಗಿಯೂ ಆಶಿಕಾ ರಂಗನಾಥ್ ತಪ್ಪಲ್ಲ, ನಮ್ಮ ಚಿತ್ರದ ಮಾರ್ಕೆಟಿಂಗ್ ತಂಡದಿಂದ ತಪ್ಪಾಗಿದೆ’ ಎಂದು ಸ್ಪಷ್ಟನೆ ನೀಡಿದರು.
ಮತ್ತಷ್ಟು ಮನರಂಜನೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
