Ashika Ranganath: ಕುಡಿದು ಕಿರಿಕ್​ ಮಾಡಿಕೊಂಡ್ರಾ ಆಶಿಕಾ ರಂಗನಾಥ್​? ವಿಡಿಯೋ ವೈರಲ್​

| Updated By: ಮದನ್​ ಕುಮಾರ್​

Updated on: Nov 18, 2022 | 11:17 AM

Ashika Ranganath Viral Video: ಆಶಿಕಾ ರಂಗನಾಥ್​ ಅವರು ಬಾಟಲಿ ಹಿಡಿದು ತೂರಾಡುತ್ತಿರುವ ದೃಶ್ಯ ಇದರಲ್ಲಿದೆ. ಇದು ‘ರೇಮೊ’ ಶೂಟಿಂಗ್​ ಸೆಟ್​ನಲ್ಲಿ ಸೆರೆಯಾದ ವಿಡಿಯೋ ಎನ್ನಲಾಗಿದ್ದು, ಸಖತ್​ ವೈರಲ್​ ಆಗಿದೆ.

ನಟಿ ಆಶಿಕಾ ರಂಗನಾಥ್ (Ashika Ranganath)​ ಅವರು ಸಖತ್​ ಸೌಮ್ಯ ಸ್ವಭಾವದವರು. ಅವರು ಕುಡಿದು ರಂಪಾಟ ಮಾಡ್ತಾರೆ ಅಂದರೆ ನಂಬೋಕೆ ಸಾಧ್ಯವೇ? ‘ರೇಮೊ’ ಚಿತ್ರದ (Raymo Movie) ಶೂಟಿಂಗ್​ ಸಮಯದ ಒಂದು ವಿಡಿಯೋ ವೈರಲ್​ ಆಗಿದೆ. ಅದರಲ್ಲಿ ಆಶಿಕಾ ರಂಗನಾಥ್​ ಅವರು ಬಾಟಲಿ ಹಿಡಿದು ತೂರಾಡುತ್ತಿರುವ ದೃಶ್ಯ ಇದೆ. ಮೊಬೈಲ್​ನಲ್ಲಿ ವಿಡಿಯೋ ಸೆರೆ ಹಿಡಿಯಲು ಬಂದವರಿಗೆ ಮಧ್ಯ ಬೆರಳು ತೋರಿಸಿದ್ದಾರೆ ಆಶಿಕಾ. ಇದು ಸಿನಿಮಾದ ದೃಶ್ಯವೋ ಅಥವಾ ನಿಜವಾಗಿ ಕಿರಿಕ್​ ನಡೆಯಿತೋ ಎಂಬುದು ಗೊತ್ತಾಗುವುದಕ್ಕೂ ಮುನ್ನವೇ ಈ ವಿಡಿಯೋ (Ashika Ranganath Viral Video) ವೈರಲ್​ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published on: Nov 18, 2022 11:17 AM