ಬಿಗ್ ಬಾಸ್​ನಿಂದ ಹೊರ ಬರಲು ಅಶ್ವಿನಿ-ಜಾನ್ವಿ ಕಾರಣವಾದ್ರಾ? ಉತ್ತರಿಸಿದ ಸುಧಿ

Updated on: Nov 17, 2025 | 12:03 PM

‘ಬಿಗ್ ಬಾಸ್ ಮನೆಯಲ್ಲಿ ಸುಧಿ ಅವರು ಹೊರ ಬಂದಿದ್ದಾರೆ. ಅವರ ಎಲಿಮಿನೇಷನ್​​ಗೆ ಕಾಣ ಹಲವು ಇವೆ. ಇದರಲ್ಲಿ ಪ್ರಮುಖವಾಗಿ ಪ್ರಭಾವ ಬೀರಿದ್ದು ಯಾವುದು ಎಂಬ ಪ್ರಶ್ನೆ ಅನೇಕರಿಗೆ ಮೂಡಿದೆ. ಈ ಬಗ್ಗೆ ಸುಧಿ ಅವರೇ ಉತ್ತರ ನೀಡಿದರು. ಆ ಬಗ್ಗೆ ಇಲ್ಲಿದೆ ವಿವರ.

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಏಳನೇ ವಾರದಲ್ಲಿ ಕಾಕ್ರೋಚ್ ಸುಧಿ ಅವರು ಎಲಿಮಿನೇಟ್ ಆಗಿದ್ದಾರೆ. ಅವರು ಎಲಿಮಿನೇಷನ್ ಆಗಲು ಕಾರಣ ಹಲವು. ‘ಅಶ್ವಿನಿ ಹಾಗೂ ಜಾನ್ವಿ ಗುಂಪಿನಿಂದ ದೂರ ಇದ್ದಿದ್ರೆ ಸಹಾಯ ಆಗುತ್ತಿತ್ತು’ ಎಂದು ಸುಧಿ ಪತ್ನಿಯೇ ಹೇಳಿದ್ದರು. ಈ ಬಗ್ಗೆ ಸುಧಿ ಮಾತನಾಡಿದ್ದಾರೆ. ‘ಜಾನ್ವಿ, ಅಶ್ವಿನಿ ಅವರೆಲ್ಲ ಒಂಟಿ ತಂಡದಲ್ಲಿ ಇದ್ದರು. ಹೀಗಾಗಿ, ಅವರ ಜೊತೆ ಒಳ್ಳೆಯ ಗೆಳೆತನ ಬೆಳೆಯಿತು. ಅವರು ನಮ್ಮದೇ ಏಜ್ ಗ್ರೂಪ್​ನವರು. ಬಿಗ್ ಬಾಸ್​ನಲ್ಲಿ ಹಲವು ಗ್ರೂಪ್​ಗಳು ಇವೆ. ಬಹುಶಃ ನಮ್ಮ ಗ್ರೂಪಿಸಂ ಸ್ವಲ್ಪ ಹೆಚ್ಚಾಗಿ ಕಾಣಿಸಿತೇನೋ’ ಎಂದು ಸುಧಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.