ಮತ್ತೆ ಕಾರಣ ನೀಡಿ ಕೆಲಸ ತಪ್ಪಿಸಿಕೊಳ್ಳಲು ಯತ್ನಿಸಿದ ಅಶ್ವಿನಿ ಗೌಡ: ಗರಂ ಆದ ರಘು

Updated on: Nov 20, 2025 | 4:10 PM

ಬಿಗ್ ಬಾಸ್ ಮನೆಯ ಕೆಲಸದಿಂದ ನುಣುಚಿಕೊಳ್ಳಲು ಅಶ್ವಿನಿ ಗೌಡ ಪ್ರಯತ್ನಿಸುತ್ತಾರೆ ಎಂಬ ಆರೋಪವಿದೆ. ಈಗ ಅದು ಮತ್ತೆ ಮರುಕಳಿಸಿದೆ. ಪೌಡರ್ ರೂಮ್ ಕ್ಲೀನ್ ಮಾಡುವಂತೆ ಅಶ್ವಿನಿ ಗೌಡಗೆ ಕ್ಯಾಪ್ಟನ್ ರಘು ಆದೇಶಿಸಿದ್ದಾರೆ. ಆದರೆ ಆ ಕೆಲಸ ಮಾಡಲು ಅಶ್ವಿನಿ ಗೌಡ ಹಿಂದೇಟು ಹಾಕಿದ್ದಾರೆ.

ಬಿಗ್ ಬಾಸ್ (Bigg Boss Kannada Season 12) ಮನೆಯಲ್ಲಿ ಅಶ್ವಿನಿ ಗೌಡ ಅವರು ತಮ್ಮ ಪಾಲಿನ ಕೆಲಸದಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಾರೆ ಎಂಬ ಆರೋಪ ಇದೆ. ಈಗ ಅದು ಮತ್ತೆ ಮರುಕಳಿಸಿದೆ. ಪೌಡರ್ ರೂಮ್ ಕ್ಲೀನ್ ಮಾಡುವಂತೆ ಅಶ್ವಿನಿ ಗೌಡ ಅವರಿಗೆ ಕ್ಯಾಪ್ಟನ್ ರಘು ಆದೇಶಿಸಿದ್ದಾರೆ. ಆದರೆ ಆ ಕೆಲಸ ಮಾಡಲು ಅಶ್ವಿನಿ ಅವರು ಹಿಂದೇಟು ಹಾಕಿದ್ದಾರೆ. ಮತ್ತೆ ಅವರ ಕೆಲಸವನ್ನು ನೆನಪಿಸಿದಾಗ, ‘ನನಗೆ ಬೆನ್ನು ನೋವು ಇದೆ. 10 ನಿಮಿಷದ ಬಳಿಕ ಮಾಡುತ್ತೇನೆ’ ಅಂತ ಹೇಳಿದ್ದಾರೆ. ‘ಹಾಗಾದ್ರೆ 10 ನಿಮಿಷದಲ್ಲಿ ಬೆನ್ನು ನೋವು ಹೋಗುತ್ತಾ’ ಎಂದು ರಘು ಪ್ರಶ್ನಿಸಿದ್ದಾರೆ. ‘ಬೆನ್ನು ನೋವು ಹೋದರೆ ಮಾಡುತ್ತೇನೆ’ ಎಂದು ಅಶ್ವಿನಿ ಗೌಡ (Ashwini Gowda) ಉತ್ತರಿಸಿದ್ದಾರೆ. ಇದೇ ವಿಚಾರಕ್ಕೆ ಅವರಿಬ್ಬರ ನಡುವೆ ಕಿರಿಕ್ ಹೆಚ್ಚುವ ಸಾಧ್ಯತೆ ಇದೆ. ಈ ವಾರ ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರು ನೇರವಾಗಿ ನಾಮಿನೇಟ್ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.