Ashwini Puneeth Rajkumar: ಪುನೀತ್​ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ದಸರಾ ಸಿನಿಮೋತ್ಸವಕ್ಕೆ ಚಾಲನೆ ನೀಡಿದ ಅಶ್ವಿನಿ

| Updated By: ಮದನ್​ ಕುಮಾರ್​

Updated on: Sep 28, 2022 | 1:58 PM

Mysore Dasara Film festival: ದಸರಾ ಸಿನಿಮೋತ್ಸವವನ್ನು ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರು ಉದ್ಘಾಟಿಸಿದ್ದಾರೆ. ಅಪ್ಪು ನಟನೆಯ ಹಲವು ಸಿನಿಮಾಗಳು ಈ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ.

ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರನ್ನು ಹಲವು ರೀತಿಯಲ್ಲಿ ಸ್ಮರಿಸಲಾಗುತ್ತಿದೆ. ದಸರಾ (Mysore Dasara 2022) ಪ್ರಯುಕ್ತ ಮೈಸೂರಿನಲ್ಲಿ ಸಿನಿಮೋತ್ಸವ ನಡೆಯುತ್ತಿದೆ. ಇದರಲ್ಲಿ ಪುನೀತ್​ ನಟನೆಯ ಹಲವು ಸಿನಿಮಾಗಳು ಪ್ರದರ್ಶನ ಆಗಲಿವೆ. ಈ ಸಿನಿಮೋತ್ಸವನನ್ನು ಅಶ್ವಿನಿ ಪುನೀತ್ ರಾಜ್​ಕುಮಾರ್​ (Ashwini Puneeth Rajkumar) ಅವರು ಇಂದು (ಸೆ.28) ಉದ್ಘಾಟಿಸಿದ್ದಾರೆ. ಪುನೀತ್​ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಸಿನಿಮೋತ್ಸವಕ್ಕೆ ಅಶ್ವಿನಿ ಚಾಲನೆ ನೀಡಿದರು. ಈ ವೇಳೆ ಸಚಿವ ಎಸ್​.ಟಿ. ಸೋಮಶೇಖರ್​ ಕೂಡ ಜೊತೆಗಿದ್ದರು. ಈ ಚಿತ್ರೋತ್ಸವದಲ್ಲಿ ವಿವಿಧ ಭಾಷೆ ಮತ್ತು ದೇಶಗಳ ಅನೇಕ ಸಿನಿಮಾಗಳು ಪ್ರದರ್ಶನ ಆಗಲಿವೆ. ನಟ ಸಂಚಾರಿ ವಿಜಯ್​ ಅವರಿಗೂ ಚಿತ್ರೋತ್ಸವದ ಮೂಲಕ ಗೌರವ ಸಲ್ಲಿಸಲಾಗುತ್ತಿದೆ.

 

Published On - 1:58 pm, Wed, 28 September 22

Follow us on