ಅಪರೂಪಕ್ಕೆ ಮೈಕ್ ಹಿಡಿದು ಮಾತನಾಡಿದ ಅಶ್ವಿನಿ ಪುನೀತ್ ರಾಜ್​ಕುಮಾರ್ ಏನಂದರು?

Updated on: Jul 13, 2023 | 10:16 PM

Ashwini Puneeth Rajkumar: ತಮ್ಮದೇ ನಿರ್ಮಾಣದ 'ಆಚಾರ್ ಆಂಡ್ ಕೋ' ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅಪರೂಪಕ್ಕೆ ಅಶ್ವಿನಿ ಪುನೀತ್ ರಾಜ್​ಕುಮಾರ್ ಮಾತನಾಡಿದರು.

ಪುನೀತ್ ರಾಜ್​ಕುಮಾರ್ (Puneeth Rajkumar) ಅಗಲಿದ ಬಳಿಕ ಪಿಆರ್​ಕೆ ಪ್ರೊಡಕ್ಷನ್ (PRK Production) ಹಾಗೂ ಆಡಿಯೋ ಸಂಸ್ಥೆಯ ಹೊಣೆಯನ್ನು ಅಶ್ವಿನಿ ಪುನೀತ್ ರಾಜ್​ಕುಮಾರ್ ಹೆಗಲಿಗೇರಿಸಿಕೊಂಡಿದ್ದಾರೆ. ಪುನೀತ್ ಕನಸಿನಂತೆ ಹೊಸ ಪ್ರತಿಭೆಗಳಿಗೆ ಪಿಆರ್​ಕೆ ಯಿಂದ ಅವಕಾಶಗಳನ್ನು ಅಶ್ವಿನಿ ಪುನೀತ್ ರಾಜ್​ಕುಮಾರ್ ನೀಡುತ್ತಿದ್ದು, ನಿರ್ದೇಶನ ಸೇರಿದಂತೆ ಹಲವು ವಿಭಾಗಗಳಲ್ಲಿ ಮಹಿಳೆಯರೇ ದುಡಿದಿರುವ ಆಚಾರ್ ಆಂಡ್ ಕೋ ಹೆಸರಿನ ಸಿನಿಮಾವನ್ನು ಅಶ್ವಿನಿ ನಿರ್ಮಿಸಿದ್ದಾರೆ. ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅಪರೂಪಕ್ಕೆ ಮೈಕ್ ಕೈಗೆತ್ತಿಕೊಂಡು ಮಾತನಾಡಿದ್ದಾರೆ ಸಹ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us