Karnataka Budget Session: ಬಸನಗೌಡ ಯತ್ನಾಳ್ ಎತ್ತಿದ ಆಕ್ಷೇಪಣೆಗೆ ಸಿಡುಕಿನಿಂದ ಉತ್ತರಿಸಿದ ಸ್ಪೀಕರ್ ಯುಟಿ ಖಾದರ್

ಅರುಣ್​ ಕುಮಾರ್​ ಬೆಳ್ಳಿ

Updated on: Feb 15, 2024 | 11:40 AM

Karnataka Budget Session: ಪ್ರಶ್ನೋತ್ತರ ಸಮಯದಲ್ಲಿ ಚರ್ಚೆಗೆ ಆಯ್ಕೆಯಾಗುವ ಮತ್ತು ಚುಕ್ಕೆ ಗುರುತಿನ ಪ್ರಶ್ನೆಗಳ ಬಗ್ಗೆ ಅಸಮಾಧಾನ ಹೊರಹಾಕಿದ ಯತ್ನಾಳ್, ಕೆಲಸಕ್ಕೆ ಬಾರದ, ಅಗತ್ಯವಿಲ್ಲದ ಪ್ರಶ್ನೆಗಳು ಬರುತ್ತಿವೆ, ಇದೇನು ಲಾಟರಿ ವ್ಯವಸ್ಥೆಯಾ ಹೇಗೆ ಅಂತ ಹೇಳಿದಾಗ ಸ್ಪೀಕರ್ ಖಾದರ್ ಸಿಟ್ಟಿಗೇಳುತ್ತಾರೆ.

ಬೆಂಗಳೂರು: ರಾಜ್ಯ ವಿಧಾನ ಮಂಡಲದ ಬಜೆಟ್ ಅಧಿವೇಶನ (Karnataka Budget Session,) ಆರಂಭವಾಗಿ ಮೂರು ದಿನಗಳ ಕಳೆದರೂ ಸದನದ್ಲಲಿ ಕಾಣದ ಹಿರಿಯ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಇಂದು ಹಾಜರಾದರು ಮತ್ತು ತಮ್ಮ ಉಪಸ್ಥಿತಿಯನ್ನು ಜಾಹೀರುಗೊಳಿಸಲುಅ ಹೆಚ್ಚಿನ ಸಮಯ ತೆಗೆದುಕೊಳ್ಳದೆ ಸಭಾಧ್ಯಕ್ಷರಿಗೆ ಪ್ರಶ್ನೆ ಮಾಡಲು ಎದ್ದುನಿಂತರು. ಆದರೆ ಅವರ ಪ್ರಶ್ನೆಯಿಂದ ಸ್ಪೀಕರ್ ಯುಟಿ ಖಾದರ್ (UT Khader) ಅಸಂತುಷ್ಟರಾಗಿದ್ದು ಸ್ಪಷ್ಟವಾಗಿ ಗೊತ್ತಾಯಿತು. ಪ್ರಶ್ನೋತ್ತರ ಸಮಯದಲ್ಲಿ ಚರ್ಚೆಗೆ ಆಯ್ಕೆಯಾಗುವ ಮತ್ತು ಚುಕ್ಕೆ ಗುರುತಿನ ಪ್ರಶ್ನೆಗಳ ಬಗ್ಗೆ ಅಸಮಾಧಾನ ಹೊರಹಾಕಿದ ಯತ್ನಾಳ್, ಕೆಲಸಕ್ಕೆ ಬಾರದ, ಅಗತ್ಯವಿಲ್ಲದ ಪ್ರಶ್ನೆಗಳು ಬರುತ್ತಿವೆ, ಇದೇನು ಲಾಟರಿ ವ್ಯವಸ್ಥೆಯಾ ಹೇಗೆ ಅಂತ ಹೇಳಿದಾಗ ಸ್ಪೀಕರ್, ನೀವು ಹಿರಿಯ ಸದಸ್ಯರಾಗಿರುವಿರಿ, ಪ್ರಶ್ನೆಗಳ ಆಯ್ಕೆ ಲಾಟ್ ನಲ್ಲಿ ನಡೆಯೋದು ನಿಮಗೆ ಗೊತ್ತಿದೆ, ನಿಮ್ಮ ಪ್ರಶ್ನೆಗೆ ಚರ್ಚೆಗೆ ಆಯ್ಕೆ ಆಗಿಲ್ಲವಾದರೆ ಅದು ನಿಮ್ಮ ಹಣೆಬರಹ, ಹಿಂದೆ ಶಾಸಕನಾಗಿದ್ದಾಗ ನನ್ನ ಹಲವಾರು ಪ್ರಶ್ನೋತ್ತರ ವೇಳೆಯಲ್ಲಿ ಚರ್ಚೆಗೆ ಅಯ್ಕೆಯಾಗುತ್ತಿರಲಿಲ್ಲ, ಬೆಳಗ್ಗೆ ಪ್ರಶ್ನೆಗಳ ಲಾಟ್ ನಡೆಯುವಾಗ ನೀವು ಹೋಗಿ ನಿಂತಕೊಳ್ಳಬಹುದು, ಅನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 15, 2024 11:36 AM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.