ಬರೋಬ್ಬರಿ 94 ವರ್ಷಗಳ ಬಳಿಕ ಬಾಕ್ಸಿಂಗ್ ಡೇನಲ್ಲಿ 20 ವಿಕೆಟ್..!

Updated on: Dec 27, 2025 | 7:16 AM

AUS vs ENG: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ಕೇವಲ 152 ರನ್​ಗಳಿಗೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 110 ರನ್​ಗಳಿಗೆ ಸರ್ವಪತನ ಕಂಡಿದೆ. ಅಂದರೆ ಉಭಯ ತಂಡಗಳು ಬ್ಯಾಟಿಂಗ್ ಮಾಡಿರುವುದು 75.1 ಓವರ್​ಗಳನ್ನು ಮಾತ್ರ.

ಮೆಲ್ಬೋರ್ನ್​ನಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿಯ ನಾಲ್ಕನೇ ಪಂದ್ಯದ ಮೊದಲ ದಿನವೇ 20 ವಿಕೆಟ್​ಗಳು ಉರುಳಿವೆ. ಅಂದರೆ ಒಂದೇ ದಿನವೇ ಎರಡೂ ತಂಡಗಳು ಆಲೌಟ್ ಆಗಿವೆ. ಆಸ್ಟ್ರೇಲಿಯಾದಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್​ನ ಮೊದಲ ದಿನ 20 ವಿಕೆಟ್​ಗಳು ಉರುಳಿರುವುದು 94 ವರ್ಷಗಳ ಬಳಿಕ ಎಂಬುದು ವಿಶೇಷ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ಕೇವಲ 152 ರನ್​ಗಳಿಗೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 110 ರನ್​ಗಳಿಗೆ ಸರ್ವಪತನ ಕಂಡಿದೆ. ಅಂದರೆ ಉಭಯ ತಂಡಗಳು ಬ್ಯಾಟಿಂಗ್ ಮಾಡಿರುವುದು 75.1 ಓವರ್​ಗಳನ್ನು ಮಾತ್ರ.

ಇದಕ್ಕೂ ಮುನ್ನ ಬಾಕ್ಸಿಂಗ್ ಡೇ (ಕ್ರಿಸ್ಮಸ್​ ಮರುದಿನ) ಟೆಸ್ಟ್ ಪಂದ್ಯದ ಮೊದಲ ದಿನವೇ 20 ವಿಕೆಟ್​ ಉರುಳಿರುವುದು 1931 ರಲ್ಲಿ. ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ನಡುವಣ ಈ ಪಂದ್ಯದ ಮೊದಲ ದಿನವೇ ಉಭಯ ತಂಡಗಳು ಆಲೌಟ್ ಆಗಿದ್ದವು.

ಇದಾದ ಬಳಿಕ ಆಸ್ಟ್ರೇಲಿಯಾದಲ್ಲಿ ನಡೆದ ಯಾವುದೇ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ ದಿನವೇ ಉಭಯ ತಂಡಗಳು ಪ್ರಥಮ ಇನಿಂಗ್ಸ್ ಅಂತ್ಯಗೊಳಿಸಿರಲಿಲ್ಲ. ಇದೀಗ 94 ವರ್ಷಗಳ ಬಳಿಕ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ ದಿನ 20 ವಿಕೆಟ್​ಗಳ ಪತನಕ್ಕೆ ಸಾಕ್ಷಿಯಾಗಿದೆ.