ಬೆಂಗಳೂರು: ನಗರದ ಹೊಸ ಪೊಲೀಸ್ ಕಮೀಷನರ್ ಆಗಿ ಹಿರಿಯ ಪೊಲೀಸ್ ಅಧಿಕಾರಿ ಬಿ ದಯಾನಂದ್ (B Dayanand) ಇಂದು ಜವಾಬ್ದಾರಿ ವಹಿಸಿಕೊಂಡರು. ಸ್ಥಾನದಿಂದ ನಿರ್ಗಮಿಸಿದ ಸಿಹೆಚ್ ಪ್ರತಾಪ್ ರೆಡ್ಡಿ (CH Pratap Reddy) ಅಧಿಕಾರ ವರ್ಗಾವಣೆ ಸೂಚಕವಾಗಿ ಬೇಟನ್ ಅನ್ನು ಹೊಸ ಆಯುಕ್ತರಿಗೆ ಹಸ್ತಾಂತರಿಸಿದರು. ಅಧಿಕಾರಹಿಸಿಕೊಂಡ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ದಯಾನಂದ್, ನಗರದ ಜನತೆಗೆ ಪೊಲೀಸ್ ವ್ಯವಸ್ಥೆ ಮೇಲೆ ಭಾರೀ ವಿಶ್ವಾಸವಿದೆ ಮತ್ತು ಅದಕ್ಕೆ ಧಕ್ಕೆಯಾಗದ ಹಾಗೆ ಕಾರ್ಯನಿರ್ವಹಿಸುವುದಾಗಿ ಹೇಳಿದರು. ಸೈಬರ್ ಕ್ರೈಮ್ (Cyber crime) ನಿಯಂತ್ರಣ ಮತ್ತು ನಗರದಲ್ಲಿ ಜನರ ತಲೆಬಿಸಿ ಮಾಡುವ ಟ್ರಾಫಿಕ್ ದುರವಸ್ಥೆಯನ್ನು ಸುಗಮಗೊಳಿಸಲು ಆದ್ಯತೆ ನೀಡಲಾಗುವುದು ಎಂದು ಕಮೀಷನರ್ ದಯಾನಂದ ಹೇಳಿದರು. ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ