ಬಾದಾಮಿ ಗುಂಪು ಘರ್ಷಣೆ ಪ್ರಕರಣ: ಮಹಿಳೆ ಎಸೆದ ಹಣವನ್ನು ವಾಪಸ್ ನೀಡಲಾಗಿದೆ: ಸಿದ್ದರಾಮಯ್ಯ ಹೇಳಿಕೆ

| Updated By: Rakesh Nayak Manchi

Updated on: Jul 15, 2022 | 7:21 PM

ಮಹಿಳೆ ಎಸೆದ ಹಣವನ್ನು ವಾಪಸ್ ನೀಡಲಾಗಿದೆ, ಅದನ್ನು ಅವರು ಸ್ವೀಕರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಬಾಗಲಕೋಟೆ: ಬಾದಾಮಿ ತಾಲೂಕಿನ ಕೆರೂರಿನಲ್ಲಿ ಗುಂಪುಘರ್ಷಣೆ ಪ್ರಕರಣ ಸಂಬಂಧ ಗಾಯಾಳುಗಳಾದ ಮೊಹ್ಮದ್​ ಹನಿಫ್​, ದಾವಲ್​​ಮಲಿಕ್ ಹಾಗೂ ರಾಜೆಸಾಬ್. ರಫೀಕ್ ಆರೋಗ್ಯ ವಿಚಾರಿಸಲು ತೆರಳಿದ್ದ ಸಿದ್ದರಾಮಯ್ಯ ಅವರು ಕುಟುಂಬಕ್ಕೆ ಸಾಂತ್ವನ ಪರಿಹಾರ ನೀಡಿದ್ದಾರೆ. ಈ ವೇಳೆ ಮಹಿಳೆಯೊಬ್ಬರು, ನಮಗೆ ಹಣ ಬೇಡ ನಮಗೆ ಶಾಂತಿ ಬೇಕು ಎಂದು‌ ಹಣವನ್ನು ಎಸೆದಿದ್ದರು. ಈ ಸಂಬಂಧ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಹಣವನ್ನು ಬೇರೆಯವರ ಕೈಗೆ ಕೊಟ್ಟು ಅವರನ್ನು ಒಪ್ಪಿಸಿ ವಾಪಸ್ ಕೊಡುವಂತೆ ಹೇಳಿ ಬಂದಿದ್ದೇನೆ. ನನ್ನ ಪ್ರಕಾರ ಅವರು ಹಣ ತೆಗೆದುಕೊಳ್ಳಲು ಒಪ್ಪಿಕೊಳ್ಳುತ್ತಾರೆ ಎಂದು ಅಂದುಕೊಂಡಿದ್ದೇನೆ. ಕಷ್ಟದಲ್ಲಿರುವವರಿಗೆ ಅನುಕೂಲವಾಗಲಿ ಎಂದು ಮಾನವೀಯತೆ ದೃಷ್ಟಿಯಿಂದ ನೀಡಲಾಗಿದೆ ಎಂದರು.