“ಬ್ಯಾನ್​ ರಮ್ಮಿ ಮತ್ತು ಡ್ರೀಮ್​ 11 ಇನ್​ ಇಂಡಿಯಾ” ಇಳಕಲ್​ ಸೀರೆ ಮೇಲೆ ನೇಯ್ದು ಮೋದಿಗೆ ಮನವಿ

Edited By: ವಿವೇಕ ಬಿರಾದಾರ

Updated on: Feb 22, 2025 | 12:26 PM

ಬಾಗಲಕೋಟೆಯ ಇಳಕಲ್‌ನ ಮೇಘರಾಜ್ ಗುದ್ದಟ್ಟಿ ಅವರು "ಬ್ಯಾನ್ ರಮ್ಮಿ ಮತ್ತು ಡ್ರೀಮ್ 11" ಎಂದು ನೇಯ್ದ ಇಳಕಲ್ ಸೀರೆಯ ಮೇಲೆ ನೇಯ್ದು ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದ್ದಾರೆ. ಆನ್‌ಲೈನ್ ಜೂಜಿನಿಂದಾಗಿ ಅನೇಕ ಕುಟುಂಬಗಳು ಮತ್ತು ಯುವಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಸೀರೆಯನ್ನು ಪ್ರಧಾನಿ ಕಾರ್ಯಾಲಯಕ್ಕೆ ಕಳುಹಿಸುವ ಯೋಜನೆಯಲ್ಲಿದ್ದಾರೆ.

ಬಾಗಲಕೋಟೆ, ಫೆಬ್ರವರಿ 22: “ಬ್ಯಾನ್​ ರಮ್ಮಿ ಮತ್ತು ಡ್ರೀಮ್​ 11” ಅಂತ ಇಂಗ್ಲೀಷ್​ನಲ್ಲಿ ಇಳಕಲ್​ ಸೀರೆ ಮೇಲೆ ನೇಯುವ ಮೂಲಕ ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ಮೇಘರಾಜ್ ಗುದ್ದಟ್ಟಿ ಅವರು ಪ್ರಧಾನಿ ಮೋದಿಯವರಿಗೆ ವಿನೂತನವಾಗಿ ಮನವಿ ಮಾಡಿದ್ದಾರೆ. ಆನ್ ಲೈನ್ ಜೂಜಾಟದಿಂದ ಅನೇಕ ಕುಟುಂಬಗಳು ಬೀದಿಗೆ ಬಂದಿವೆ. ಅನೇಕ ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ, ಈ ಜೂಜಾಟ ಬ್ಯಾನ್ ಮಾಡಬೇಕೆಂದು ಈ ರೀತಿಯಾಗಿ ಮನವಿ ಮಾಡಿಕೊಂಡಿದ್ದೇನೆ ಎಂದು ಮೇಘರಾಜ್ ಹೇಳಿದ್ದಾರೆ. ಈ ಸೀರೆಯನ್ನು ಮೇಘರಾಜ್​ ಅವರು ಪ್ರಧಾನಿ ಕಾರ್ಯಾಲಯಕ್ಕೆ ಕಳುಹಿಸುವ ಯೋಚನೆಯಲ್ಲಿದ್ದಾರೆ.

ಮೇಘರಾಜ್​ ಈ ಹಿಂದೆ ಇಳಕಲ್ ಸೀರೆಯಲ್ಲಿ ಆಯೋದ್ಯ ಶ್ರೀರಾಮ ಮಂದಿರ ನೇಯ್ದಿದ್ದರು. ಸೂರ್ಯಯಾನ-3 ಯಶಸ್ವಿಯಾದಾಗ ವಿಜ್ಞಾನಿಗಳಿಗೆ ಶುಭಾಶಯ ಎಂದು ಸೀರೆಯಲ್ಲಿ ನೇಯ್ದಿದ್ದರು. ಅಲ್ಲದೇ, ಪುನೀತ್ ರಾಜಕುಮಾರ್​ಅವರ ಕೊನೆಯ ಚಿತ್ರ ಜೇಮ್ಸ್ ಶತದಿನ ಆಚರಿಸಲಿ ಎಂದು ಸೀರೆಯಲ್ಲಿ ನೇಯ್ದು ಶುಭಹಾರೈಸಿದ್ದರು. ಹಾಗೇ ಕಾಂತಾರ ಚಿತ್ರಕ್ಕೆ ಆಸ್ಕರ್ ಅವಾರ್ಡ್ ಸಿಗಲಿ ಎಂದು ಸೀರೆಯಲ್ಲಿ ನೇಯ್ದಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Ravi H Mooki

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್‌ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್‌ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ‌ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ‌ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.

Read More