Sign In

By signing in or creating an account, you agree with Associated Broadcasting Company's Terms & Conditions and Privacy Policy.

Bank Robbery: ಕೈಯಲ್ಲಿ ಚಾಕು, ಮಂಕಿ ಕ್ಯಾಪ್ ಧರಿಸಿ ಬ್ಯಾಂಕ್​​ಗೆ ನುಗ್ಗಿದ್ದವ ಮಾಡಿದ್ದೇನು? ವಿಡಿಯೋ ನೋಡಿ

Bank Robbery: ಕೈಯಲ್ಲಿ ಚಾಕು, ಮಂಕಿ ಕ್ಯಾಪ್ ಧರಿಸಿ ಬ್ಯಾಂಕ್​​ಗೆ ನುಗ್ಗಿದ್ದವ ಮಾಡಿದ್ದೇನು? ವಿಡಿಯೋ ನೋಡಿ

ಸಾಧು ಶ್ರೀನಾಥ್​
|

Updated on:Jan 22, 2022 | 11:23 AM

ಹುಬ್ಬಳ್ಳಿಯ ಕೊಪ್ಪಿಕರ್ ರಸ್ತೆಯ SBI ಬ್ಯಾಂಕ್‌ನಲ್ಲಿ ನಡೆದ ದರೋಡೆ ಇದು. ಪ್ರವೀಣ್ ಎಂಬಾತ ದರೋಡೆ ಮಾಡುತ್ತಿರುವ ಸಿಸಿಟಿವಿ ದೃಶ್ಯ ಟಿವಿ 9ಗೆ ಲಭ್ಯವಾಗಿದೆ.

ಸಿನಿಮಾ ಸ್ಟೈಲ್ ನಲ್ಲಿ ರಾಬರಿಗಿಳಿದಿದ್ದ ಆರೋಪಿ ಅಂದರ್ ಪ್ರಕರಣ ಇದು. ಬ್ಯಾಂಕ್​ನ ಸಿಸಿಟಿವಿಯಲ್ಲಿ ಸೆರೆಯಾಗಿದೆ ದರೋಡೆಕೋರನ ಚಲನವಲನ. ಹುಬ್ಬಳ್ಳಿಯ ಕೊಪ್ಪಿಕರ್ ರಸ್ತೆಯ SBI ಬ್ಯಾಂಕ್‌ನಲ್ಲಿ ನಡೆದ ದರೋಡೆ ಇದು. ಕೈ ಯಲ್ಲಿ ಚಾಕು, ಮಂಕಿ ಕ್ಯಾಪ್ ಧರಿಸಿ ಕ್ಯಾಷಿಯರ್ ಚೇಂಬರ್​ಗೆ ನುಗ್ಗಿದ್ದ. ದರೋಡೆಕೋರನನ್ನ ನೋಡಿ ಬೆಚ್ಚಿಬಿದ್ದಿದ್ದ ಮಹಿಳಾ ಸಿಬ್ಬಂದಿ. ಮಹಿಳೆಗೆ ಚಾಕು ತೋರಿಸಿ ಬೆದರಿಸಿ ಹಣ ದರೋಡೆ ಮಾಡಿದ್ದ ಪ್ರವೀಣ್. ಪ್ರವೀಣ್ ಎಂಬಾತ ದರೋಡೆ ಮಾಡುತ್ತಿರುವ ಸಿಸಿಟಿವಿ ದೃಶ್ಯ ಟಿವಿ 9ಗೆ ಲಭ್ಯವಾಗಿದೆ.

ಜನವರಿ 18 ರಂದು ಸಿನಿಮಾ ಸ್ಟೈಲ್ ನಲ್ಲಿ ರಾಬರಿಗಿಳಿದಿದ್ದ ಆರೋಪಿ ಅಂದರ್ ಆಗಿರುವ ಪ್ರಕರಣ ಇದು. ಥೇಟ್ ಸಿನಿಮಾ ಸ್ಟೈಲ್ ನಲ್ಲಿ ಎಂಟ್ರಿ ಕೊಟ್ಟಿದ್ದ ಖದೀಮ ಕೈಯಲ್ಲಿ ಚಾಕು ಹಿಡಿದು ಮಂಕಿ ಕ್ಯಾಪ್ ಧರಿಸಿ ಕ್ಯಾಶಿಯರ್ ಛೇಂಬರ್ ಗೆ ನುಗ್ಗಿದ್ದ. ಮಹಿಳಾ ಸಿಬ್ಬಂದಿಗೆ ಚಾಕು ತೋರಿಸಿ ಬೆದರಿಸಿ ಹಣ ದರೋಡೆ ಮಾಡಿದ್ದ.

ತನ್ನನ್ನು ಬಿಟ್ಬಿಡು ಅಂತಾ ಮಹಿಳಾ ಸಿಬ್ಬಂದಿ ಕೈಮುಗಿದು ಪರಿ ಪರಿಯಾಗಿ ಬೇಡಿಕೊಂಡಿದ್ದಾರೆ. ಆರೋಪಿ ತನ್ನ‌ ಮದುವೆಯನ್ನ ಅದ್ದೂರಿಯಾಗಿ ಮಾಡಿಕೊಳ್ಳಲು ವಿಜಯಪುರ ಮ‌ೂಲದ ಪ್ರವೀಣ್ ಎಂಬ ಹಾಡಹಗಲೇ ಆರೋಪಿ ದರೋಡೆ ಮಾಡಿದ್ದ. ದರೋಡೆ ಮಾಡಿ ಹೊರಬಂಗಾದ ಖಾಕಿ ಪಡೆ ಮಾಸ್ಟರ್ ಚೇಸಿಂಗ್ ಮೂಲಕ‌ ಆತನನ್ನ ಬಂಧಿಸಿತ್ತು. ಬಂಧಿತನಿಂದ 6.39 ಲಕ್ಷ ರೂ ನಗದು ವಶಪಡಿಸಿಕೊಂಡಿತ್ತು. ಆ ಭಯಾನಕ ಸಿಸಿಟಿವಿ ದೃಶ್ಯ ಟಿವಿ 9 ಗೆ ಲಭ್ಯವಾಗಿದೆ.

ಇದನ್ನೂ ಓದಿ:

ಎಸ್‌ಬಿಐ ಶಾಖೆಯಲ್ಲಿ ಚಾಕು ತೋರಿಸಿ 6 ಲಕ್ಷ ರೂ ದರೋಡೆ; 2 ದಿನದಲ್ಲಿ ಹಸೆಮಣೆ ಏರಬೇಕಿದ್ದವ ಪೊಲೀಸ್ ಮೆಟ್ಟಿಲೇರಿದ!

Published on: Jan 22, 2022 08:37 AM