‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು ರಾಮಚಂದ್ರಪ್ಪ

Updated on: Apr 24, 2025 | 8:19 PM

ಕನ್ನಡ ಚಿತ್ರರಂಗಕ್ಕೆ ಡಾ. ರಾಜ್​ಕುಮಾರ್ ನೀಡಿದ ಕೊಡುಗೆ ಅಪಾರ. ಆ ಬಗ್ಗೆ ಅಣ್ಣಾವ್ರ ಜನ್ಮದಿನದಂದೇ ಸಾಹಿತಿ, ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರು ಮಾತನಾಡಿದ್ದಾರೆ. ರಾಜ್​ಕುಮಾರ್ ಅವರು ನಾಯಕ ನಟನಾಗಿ ಚಿತ್ರರಂಗ ಪ್ರವೇಶಿಸಿದ ಬಳಿಕ ಯಾವ ರೀತಿಯ ಬೆಳವಣಿಗೆ ಆಯಿತು ಎಂಬುದನ್ನು ಬರಗೂರು ರಾಮಚಂದ್ರಪ್ಪ ವಿವರಿಸಿದ್ದಾರೆ.

ವರನಟ ಡಾ. ರಾಜ್​ಕುಮಾರ್ (Dr Rajkumar) ಅವರ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಈ ವೇಳೆ ನಿರ್ದೇಶಕ, ಸಾಹಿತಿ ಬರಗೂರು ರಾಮಚಂದ್ರಪ್ಪ (Baraguru Ramachandrappa) ಅವರು ಅಣ್ಣಾವ್ರ ಕುರಿತು ಮಾತನಾಡಿದ್ದಾರೆ. ‘ರಾಜ್​ಕುಮಾರ್ ಅವರು ನಾಯಕರಾಗಿ ಬರದೇ ಹೋಗಿದ್ದರೆ ಕನ್ನಡ ಚಿತ್ರರಂಗ ಇಷ್ಟು ಅಭಿವೃದ್ಧಿಯನ್ನು ಹೊಂದುತ್ತಿರಲಿಲ್ಲ. ಕನ್ನಡದಲ್ಲಿ ಮೊದಲ ವಾಕ್ಚಿತ್ರ ಬಂದಿದ್ದು 1934ರಲ್ಲಿ. ರಾಜ್​ಕುಮಾರ್ ಅವರು ಬಂದಿದ್ದು 1954ರಲ್ಲಿ. 1934ರಿಂದ 1954ರ ತನಕ ಸುಮಾರು 70 ಸಿನಿಮಾಗಳಿಗೂ ಹೆಚ್ಚು ಸಿನಿಮಾ ಕನ್ನಡದಲ್ಲಿ ಬಂದಿರಲಿಲ್ಲ. 1954ರ ಬಳಿಕ ಕೇವಲ 14 ವರ್ಷದಲ್ಲಿ ರಾಜ್​ಕುಮಾರ್ ಅವರು 100 ಸಿನಿಮಾ ಪೂರೈಸಿದರು. ಆಗ ನೂರಾರು ಕನ್ನಡ ಸಿನಿಮಾಗಳು ಬಂದವು. ರಾಜ್​ಕುಮಾರ್ ಎಂಬ ಹೆಸರು ಕನ್ನಡ ಚಿತ್ರರಂಗದ ಅಭಿವೃದ್ಧಿಗೆ ಕಾರಣ ಆಯಿತು’ ಎಂದು ಬರಗೂರು ರಾಮಚಂದ್ರಪ್ಪ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More