ಶಿವಮೊಗ್ಗ ಈದ್​ ಗಲಾಟೆ ಬಗ್ಗೆ ಸರ್ಕಾರಕ್ಕೆ​ ಖಡಕ್​ ವಾರ್ನಿಂಗ್​ ಕೊಟ್ಟ ಬಸನಗೌಡ ಪಾಟೀಲ್​ ಯತ್ನಾಳ್​; ಇಲ್ಲಿದೆ ವಿಡಿಯೋ

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 03, 2023 | 10:48 PM

ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಹಾಗೂ ಹುಬ್ಬಳ್ಳಿ ಗಲಾಟೆ ಕೇಸ್​ ಹಿಂಪಡೆಯಲು ಸರ್ಕಾರ ಚಿಂತನೆ ನಡೆಸಿದೆ. ಇನ್ಮೇಲೆ ರಾಜ್ಯದಲ್ಲಿ ಹಿಂದೂಗಳು ಬದುಕಬೇಕಾ, ಬೇಡ್ವಾ ಎನ್ನುವ ವಾತಾವರಣ ಸೃಷ್ಟಿಸಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬಸನಗೌಡ ಪಾಟೀಲ್​ ಯತ್ನಾಳ್​ ವಾಗ್ದಾಳಿ ನಡೆಸಿದರು.

ಯಾದಗಿರಿ, ಅ.03: ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲುತೂರಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ‘ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಹಿಂದೂಗಳಿಗೆ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದು ಯಾದಗಿರಿ(Yadagiri) ಜಿಲ್ಲೆಯ ಶಹಾಪುರದಲ್ಲಿ  ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Basanagouda patil yatnal)  ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ. ಎಸ್ಪಿ ಸೇರಿ ಪೊಲೀಸರ ಮೇಲೆ ಕಲ್ಲುತೂರಾಟ ಮಾಡುತ್ತಾರೆಂದರೆ ಎಷ್ಟು ಧೈರ್ಯವಿರಬೇಕು. ಇದೆ ರೀತಿ ನಿಮ್ಮ ಆಡಳಿತ  ನಡೆದರೆ, ಹಿಂದೂಗಳೆ ತಮ್ಮ ರಕ್ಷಣೆಗೆ ಹೊರ ಬರಬೇಕಾಗುತ್ತದೆ ಎನ್ನುವ ಮೂಲಕ ಖಡಕ್​ ವಾರ್ನಿಂಗ್​ ಕೊಟ್ಟಿದ್ದಾರೆ. ಇದರ ಜೊತೆಗೆ ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಹಾಗೂ ಹುಬ್ಬಳ್ಳಿ ಗಲಾಟೆ ಕೇಸ್​ ಹಿಂಪಡೆಯಲು ಸರ್ಕಾರ ಚಿಂತನೆ ನಡೆಸಿದೆ. ಇನ್ಮೇಲೆ ರಾಜ್ಯದಲ್ಲಿ ಹಿಂದೂಗಳು ಬದುಕಬೇಕಾ, ಬೇಡ್ವಾ ಎನ್ನುವ ವಾತಾವರಣ ಸೃಷ್ಟಿಸಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Follow us on