ಶಿವಮೊಗ್ಗ ಘಟನೆಯನ್ನ ಖಂಡಿಸುವ ಮನಸ್ಥಿತಿ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ; ಕಿಡಿಕಾರಿದ ಚಕ್ರವರ್ತಿ ಸೂಲಿಬೆಲೆ

ಕಾಂಗ್ರೆಸ್ ಸರ್ಕಾರದಲ್ಲಿರುವ ಮಂತ್ರಿಗಳು ಸೇರಿದಂತೆ ಎಲ್ಲರೂ ಮುಸ್ಲಿಮರಿಗೆ ನಾನು ಹತ್ತಿರ ಎಂದು ತೋರಸಲಿಕ್ಕೆ ಹೊರಟಿದ್ದಾರೆ. ಅದರ ಪ್ರತಿಫಲವಾಗಿ ಊರು ಊರುಗಳಲ್ಲಿ ದಂಗೆ ವಾತಾವರಣ ನಿರ್ಮಾಣಗೊಳ್ಳುತ್ತಿದೆ. ಈ ಎಲ್ಲ ದಂಗೆಗಳ ಹಿಂದೆ ಕಾಂಗ್ರೆಸ್ ಸರ್ಕಾರದ ಬೆಂಬಲವಿದೆ ಎಂಬುದೆ ದುರದೃಷ್ಟಕರ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಶಿವಮೊಗ್ಗ ಘಟನೆಯನ್ನ ಖಂಡಿಸುವ ಮನಸ್ಥಿತಿ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ; ಕಿಡಿಕಾರಿದ ಚಕ್ರವರ್ತಿ ಸೂಲಿಬೆಲೆ
ಚಕ್ತವರ್ತಿ ಸೂಲಿಬೆಲೆ
Follow us
ವಿನಾಯಕ ಬಡಿಗೇರ್​, ಉತ್ತರ ಕನ್ನಡ
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 03, 2023 | 7:11 PM

ಉತ್ತರ ಕನ್ನಡ, ಅ.03: ತ್ರಿಶೂಲ ಹಿಡಿಯುವುದಕ್ಕೂ, ತಲ್ವಾರ ಹಿಡಿಯುವುದಕ್ಕು ವ್ಯತ್ಯಾಸವಿದೆ. ತ್ರಿಶೂಲ ಹಿಡಿದವರು ಯಾರ ಮೇಲೂ ಕಲ್ಲು ಎಸೆಯಲ್ಲ. ನಾಲ್ಕೇ ಜನ ತಲ್ವಾರ್​ ಹಿಡಿದವರು ಇಡೀ ಶಿವಮೊಗ್ಗ (Shivamogga) ದ ಮೇಲೆ ಕಲ್ಲು ಎಸೆದ್ರು. ತ್ರಿಶೂಲ ಹಿಡಿದವರ ಭಾವನೆ ಏನು, ತಲ್ವಾರ ಹಿಡಿದರವ ಭಾವನೆ ಏನು  ಎಂದು ಎಲ್ಲರಿಗೂ ಗೊತ್ತಾಗುತ್ತೆ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ(Chakravarthy Sulibele) ಹೇಳಿದರು. ಕಾರವಾರ (Karwar)ದಲ್ಲಿ ಮಧು ಬಂಗಾರಪ್ಪ ಹೇಳಿಕೆ ಖಂಡಿಸಿ ಮಾತನಾಡಿದ ಅವರು ‘ ಶಿವಮೊಗ್ಗದಲ್ಲಿ ಹಿಂದೂಗಳು ಪ್ರವೋಕ್ ಆಗಿಲ್ಲ ಎಂದು ಪೊಲೀಸರನ್ನೆ ಹೊಡೆದಿದ್ದಾರೆ. ಈ ಘಟನೆಯನ್ನ ಖಂಡಿಸುವ ಮನಸ್ಥಿತಿ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ ಎಂದರು.

ಎಲ್ಲ ದಂಗೆಗಳ ಹಿಂದೆ ಕಾಂಗ್ರೆಸ್ ಸರ್ಕಾರದ ಬೆಂಬವಿದೆ ಎಂಬುದೆ ದುರದೃಷ್ಟಕರ

‘ಕಾಂಗ್ರೆಸ್ ಸರ್ಕಾರದಲ್ಲಿರುವ ಮಂತ್ರಿಗಳು ಸೇರಿದಂತೆ ಎಲ್ಲರೂ ಮುಸ್ಲಿಮರಿಗೆ ನಾನು ಹತ್ತಿರ ಎಂದು ತೋರಸಲಿಕ್ಕೆ ಹೊರಟಿದ್ದಾರೆ. ಅದರ ಪ್ರತಿಫಲವಾಗಿ ಊರು ಊರುಗಳಲ್ಲಿ ದಂಗೆ ವಾತಾವರಣ ನಿರ್ಮಾಣಗೊಳ್ಳುತ್ತಿದೆ. ಈ ಎಲ್ಲ ದಂಗೆಗಳ ಹಿಂದೆ ಕಾಂಗ್ರೆಸ್ ಸರ್ಕಾರದ ಬೆಂಬವಿದೆ ಎಂಬುದೆ ದುರದೃಷ್ಟಕರ ಎಂದರು.

ಕಳೆದ 3-4 ವರ್ಷಗಳಲ್ಲಿ ಶಿವಮೊಗ್ಗದಲ್ಲಿ ಕೋಮು ಗಲಭೆ ನಡೆದಿರಲಿಲ್ಲ

ಶಿವಮೊಗ್ಗದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಕೋಮು ಗಲಭೆ ನಡೆದಿರಲಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ತಕ್ಷಣ ಅವರು ಬಲತು ಬಿಟ್ಟಿದ್ದಾರೆ. ಅದರಂತೆ ಶಿವಮೊಗ್ಗ ಮುಸ್ಲಿಮರೇ ಇಂತಹ ಗಲಭೆ ಎಬ್ಬಿಸಿದ್ದು, ನೆಟ್‌ವರ್ಕ್‌ ಮೂಲಕ ಹೊರಗಿನವರನ್ನು ಕರೆಸಿ ಗಲಾಟೆ ಮಾಡಿಸಿದ್ದಾರೆ.

ಇದನ್ನೂ ಓದಿ:ನಾವು ಸಾಬ್ರು ಹೇಗೆ ಅಂತಾ ಗೊತ್ತಲ್ಲ ಎಂದು ಈದ್ ಮಿಲಾದ್​ ಗಲಾಟೆ ವೇಳೆ ಶಿವಮೊಗ್ಗ ಪೊಲೀಸ್​ ಗೆ ಆವಾಜ್ ಹಾಕಿದ್ದ ವ್ಯಕ್ತಿ ಅರೆಸ್ಟ್​

ಶಿವಮೊಗ್ಗ ಸ್ಲೀಪರ್ ಸೆಲ್‌ಗಳ ಅಡ್ಡೆ ಆಗಿದೆ

ಮಂಗಳೂರಲ್ಲಿ ಇಂತಹ ಕೃತ್ಯ ಮಾಡಲಾಗಲ್ಲವೆಂದು ಶಿವಮೊಗ್ಗಕ್ಕೆ ಶಿಫ್ಟ್‌ ಆಗಿದೆ. ಈ ಮೂಲಕ ಶಿವಮೊಗ್ಗ ಸ್ಲೀಪರ್ ಸೆಲ್‌ಗಳ ಅಡ್ಡೆ ಆಗಿದ್ದು, ಈಗ ಅವರ ಬ್ರೀಡಿಂಗ್ ಸೆಂಟರ್ ಕೂಡ ಆಗುತ್ತಿದೆ. ಐಸಿಸ್‌, ಎಲ್‌ಇಟಿಗೆ ಶಿವಮೊಗ್ಗ ಮುಸ್ಲಿಮರು ಸೇರಿದ್ರೂ ಅಚ್ಚರಿಯಿಲ್ಲ. ಈಗ ಇದು ತುಂಬಾ ಅಪಾಯಕಾರಿಯಾಗಿದೆ. ಹಿಂದೂ ಸಮಾಜವನ್ನ ಹೆಡಿ ಸಮಾಜ ಎಂದು ತೋರಿಸುವ ಪ್ರಯತ್ನವನ್ನ ಮಾಡುತ್ತಿದ್ದಾರೆ. ಮೊದಲು ಒಬ್ಬರನ್ನ ಟಾರ್ಗೆಟ್ ಮಾಡುತ್ತಿದ್ದ ಅವರು, ಈಗ ಇಡೀ ಹಿಂದೂ ಸಮಾಜವನ್ನ ಟಾರ್ಗೆಟ್ ಮಾಡುತ್ತಿದ್ದಾರೆ. ಸಾಮೂಹಿಕ ದಂಗೆಗೆ ಪ್ರೇರೇಪಣೆ ಕೊಡುವ ಯತ್ನ ನಡೆಯುತ್ತಿದೆ ಎಂದರು.

ಹಿಂದೂ ಮುಸ್ಲಿಂ ದಂಗೆಗೆ ಕರೆ ಕೊಡುವ ಯತ್ನ ನಡೆಯುತ್ತಿದೆ

ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಲೆಲ್ಲ ಹಿಂದೂಗಳು ಬದಕುವುದು ಕಷ್ಟ. ಮುಸ್ಲಿಮರಿಗೆ ಸಿಎಂ ಸಿದ್ದರಾಮಯ್ಯ ಅವರ ಅಭಯ ಹಸ್ತವಿದೆ. ಔರಂಗಜೇಬನ ಕಟೌಟ್ ಹಾಕಿದ್ದಾರಲ್ಲ, ಅದೇ ಔರಂಗಜೇಬ್ ಶಿವಾಜಿ ಮುಂದೆ ಇಲಿ ಅಂತೆ ಮುದಿರಿಕೊಂಡು ಬಿದ್ದಿದ್ದ. ಟಿಪ್ಪು ಸುಲ್ತಾನ್ ಹೇಗೆ ಸತ್ತಾ? ಎಂಬುದು ಎಲ್ಲರಿಗೂ ಗೊತ್ತಿರುವ ಇತಿಹಾಸವಾಗಿದೆ. ಇದು ಹಿಂದೂ ರಾಷ್ಟ್ರ. ಮುಸಲ್ಮಾನರ ಮಾನಸಿಕ ಸ್ಥಿತಿ ಎಷ್ಟು ಕೆಟ್ಟದ್ದೊ, ಅದಕ್ಕಿಂತ ಕೆಟ್ಟದ್ದು ಕಾಂಗ್ರೆಸ್ನವರ ಮಾನಸಿಕ ಸ್ಥಿತಿ. ಮುಸಲ್ಮಾನರನ್ನ ಒಲೈಕೆ ಮಾಡುವವರು ಪಠ್ಯ ಪುಸ್ತಕವನ್ನ ಬಿಡುತ್ತಾರಾ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಇದನ್ನೂ ಓದಿ:ಶಿವಮೊಗ್ಗದಲ್ಲಿ ಈದ್​ ಮಿಲಾದ್​ ಗಲಾಟೆ ಪ್ರಕರಣ: ಸಾಮಾಜಿಕ ಜಾಲತಾಣದಲ್ಲಿ ಊಹಾಪೋಹ ಹರಡುವವರ ವಿರುದ್ಧ ಕಠಿಣ ಕ್ರಮ; ಎಸ್ಪಿ

ಕಾಂಗ್ರೆಸ್ ಪಕ್ಷ ಇವರ ರಕ್ಷಣೆಗೆ ಇದೆ ಎಂಬ ಕಾರಣಕ್ಕೆ ಶಿವಮೊಗ್ಗದಲ್ಲಿ ಈ ಘಟನೆ

‘ಸ್ವತಃ ಗೃಹ ಸಚಿವರೇ ಜೈಲರ್‌ಗೆ ಪತ್ರ ಬರೆದು ಅಮಾಯಕರನ್ನ ಒಳಗೆ ಹಾಕಿದ್ದಾರೆ ಅವರನ್ನ ಬಿಡಿಸಿ ಎಂದು ಬರುತ್ತಾರೆ. ಇನ್ನ ಯಾವ ಧೈರ್ಯದ ಮೇಲೆ ಪೊಲೀಸರು ಕೆಲಸ ಮಾಡಬೇಕು. ತಲ್ವಾರ ಹಿಡಿದುಕೊಂಡು ಬರುವ ಪುಂಡರ ಮುಂದೆ ಲಾಠಿ ಹಿಡಿದ ಪೊಲೀಸರು ಏನು ಮಾಡುವುದಕ್ಕೆ ಆಗುತ್ತೆ. ಪ್ರಾಣ ಪಣಕ್ಕಿಟ್ಟು ಹಿಡಿದು ಕೊಂಡು ಬಂದರೆ ಗೃಹ ಸಚಿವರು ಪತ್ರ ಬರೆದು ಬಿಡು ಅಂದ್ರೆ, ಏನು ಮಾಡುವುದಕ್ಕೆ ಆಗುತ್ತದೆ. ಒಂದು ಕಡೆ ಪತ್ರ ಬರೆದು ಇಂತಹ ರಾಕ್ಷಸ ಪ್ರವೃತ್ತಿಯವರನ್ನ ಬಿಡಿಸಿದ್ರೆ, ಮತ್ತೊಂದು ಕಡೆ ಜಮೀರ್ ನಂತವರು ಹಾರ ಹಾಕಿ ಅವರ ಮನೆಗೆ ದೊಡ್ಡ ಮೊತ್ತದ ಹಣವನ್ನ ಮೀಡಿಯಾಗಳ ಮುಂದೆ ಕೊಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

‘ಅವರಿಗೆ ಗೊತ್ತಾಗಿದೆ ಕಾಂಗ್ರೆಸ್ ಸರ್ಕಾರ ಇರುವಾಗಲೇ ನಾವು ಏನಾದರೂ ಮಾಡಬೇಕು. ಚುನಾವಣೆ ನಡೆಯುವ ಮುನ್ನ ಮೂರು ತಿಂಗಳು ಮಾತ್ರ ಅವರು ಶಾಂತವಾಗಿದ್ರು. ಯಾಕೆಂದರೆ ಚುನಾವಣೆ ಪೂರ್ವದಲ್ಲಿ ಗಲಾಟೆ ಮಾಡಿದ್ರೆ ಹಿಂದೂಗಳು ಒಟ್ಟಾಗುತ್ತಾರೆ ಎಂಬ ಭಯ ಇತ್ತು. ಇನ್ನ ಮುಂದಿನ ಐದು ವರ್ಷಗಳ ಕಾಲ ನಿರಂತರ ಇಂತಹ ಕೃತ್ಯಗಳು ನಡೆಯುತ್ತವೆ. ಯಾಕೆಂದರೆ ಕಾಂಗ್ರೆಸ್ ಪಕ್ಷವೇ ಅವರ ಪರವಾಗಿದೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್