Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾವು ಸಾಬ್ರು ಹೇಗೆ ಅಂತಾ ಗೊತ್ತಲ್ಲ ಎಂದು ಈದ್ ಮಿಲಾದ್​ ಗಲಾಟೆ ವೇಳೆ ಶಿವಮೊಗ್ಗ ಪೊಲೀಸ್​ ಗೆ ಆವಾಜ್ ಹಾಕಿದ್ದ ವ್ಯಕ್ತಿ ಅರೆಸ್ಟ್​

ಶಿವಮೊಗ್ಗ ರಾಗಿಗುಡ್ಡ ಕಲ್ಲು ತೂರಾಟ ಪ್ರಕರಣದಲ್ಲಿ ಗಲಾಟೆ ವೇಳೆ ಪೊಲೀಸ್ ಇನ್ಸ್‌ಪೆಕ್ಟರ್ ಗೆ ಆವಾಜ್ ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತ ಪೊಲೀಸ್ ಇನ್ಸ್‌ಪೆಕ್ಟರ್ ಹರೀಶ್ ಪಟೇಲ್ ಅವರಿಗೆ ಆವಾಜ್ ಹಾಕಿದ್ದ.

ನಾವು ಸಾಬ್ರು ಹೇಗೆ ಅಂತಾ ಗೊತ್ತಲ್ಲ ಎಂದು ಈದ್ ಮಿಲಾದ್​ ಗಲಾಟೆ ವೇಳೆ ಶಿವಮೊಗ್ಗ ಪೊಲೀಸ್​ ಗೆ ಆವಾಜ್ ಹಾಕಿದ್ದ ವ್ಯಕ್ತಿ ಅರೆಸ್ಟ್​
ಶಿವಮೊಗ್ಗ: ಈದ್ ವೇಳೆ ಪೊಲೀಸ್ ಇನ್ಸ್‌ಪೆಕ್ಟರ್ ಗೆ ಆವಾಜ್ ಹಾಕಿದ್ದ ವ್ಯಕ್ತಿ ಅರೆಸ್ಟ್​
Follow us
Basavaraj Yaraganavi
| Updated By: ಅಕ್ಷಯ್​ ಪಲ್ಲಮಜಲು​​

Updated on:Oct 03, 2023 | 4:01 PM

ಶಿವಮೊಗ್ಗ, ಅಕ್ಟೋಬರ್​ 3: ಶಿವಮೊಗ್ಗ ರಾಗಿಗುಡ್ಡ ಕಲ್ಲು ತೂರಾಟ ಪ್ರಕರಣದಲ್ಲಿ ಗಲಾಟೆ ವೇಳೆ ಪೊಲೀಸ್ ಇನ್ಸ್‌ಪೆಕ್ಟರ್ ಗೆ ಆವಾಜ್ ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತ ಪೊಲೀಸ್ ಇನ್ಸ್‌ಪೆಕ್ಟರ್ ಹರೀಶ್ ಪಟೇಲ್ ಅವರಿಗೆ ಆವಾಜ್ ಹಾಕಿದ್ದ. ಒಂದು ನಾವು ಸಾಯಬೇಕು, ಇಲ್ಲದಿದ್ದರೆ ಅವ್ರು ಸಾಯಬೇಕು. ನಾವು ಸಾಬ್ರು ಹೇಗೆ ಅಂತಾ ಗೊತ್ತಲ್ಲ ಎಂದು ಪೊಲೀಸರ ಎದುರೇ ಆವಾಜ್ ಹಾಕಿದ್ದ. ಹಾಗೆ ಧಾರ್ಷ್ಯತನದಿಂದ ಆವಾಜ್ ಹಾಕಿದ್ದ ರಾಗಿಗುಡ್ಡದ ಸಲೀಂ ಎಂಬಾತನನ್ನು ಶಿವಮೊಗ್ಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಊಹಾಪೋಹ ಹರಡುವವರ ವಿರುದ್ಧ ಕಠಿಣ ಕ್ರಮ; ಎಸ್ಪಿ

ಈದ್​-ಮಿಲಾದ್(Eid Milad)​ ಹಬ್ಬದಲ್ಲಿ ಆದ ಗಲಾಟೆಯ ಕುರಿತು ನಿನ್ನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಊಹಾಪೋಹಗಳು ಹಬ್ಬುತ್ತಿವೆ. ಬೇರೆ ಬೇರೆ ರಾಜ್ಯದ ವೀಡಿಯೋಗಳನ್ನು ಸಾಮಾಜಿಕ‌ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ. ಈ ರೀತಿ ಊಹಾಪೋಹಗಳನ್ನ ಹರಿಬಿಡುತ್ತಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ  ಎಚ್ಚರಿಸಿದ್ದಾರೆ.

ಮೆರವಣಿಗೆ ವೇಳೆ ದಾವಣಗೆರೆ ವ್ಯಾಪ್ತಿಯಿಂದ ಬಂದ ಎರಡು ಓಮಿನಿಗಳು

ಮೆರವಣಿಗೆ ವೇಳೆ ಎರಡು ಓಮಿನಿ ವಾಹನಗಳಲ್ಲಿ ಆಗಮಿಸಿದ ವಿಚಾರ ‘ ದಾವಣಗೆರೆ ವ್ಯಾಪ್ತಿಯ ನ್ಯಾಮತಿ ಇಂದ ಓಮಿನಿ ಬಂದಿದ್ದು, ಆ ಎರಡೂ ಓಮಿನಿಗಳಲ್ಲಿ ಬಂದವರನ್ನೂ ಸಹ ನಾವು ತನಿಖೆ ಮಾಡಿದ್ದೇವೆ. ಆ ವಾಹನದಲ್ಲಿ ಎರಡೂ ಸಮುದಾಯದ ಜನರು ಬಂದಿದ್ದಾರೆ. ಇನ್ನು ಈ ಬಗ್ಗೆ ನಾವು ಕೂಲಂಕಶವಾಗಿ ತನಿಖೆ ಮಾಡುತ್ತೇವೆ.  ಈಗಾಗಲೇ ಸ್ಥಳೀಯ ಪೊಲೀಸರ ವಿಚಾರಣೆಯಿಂದ‌ ಓಮಿನಿ ಕುರಿತು ಸ್ಪಷ್ಟನೆ ಸಿಕ್ಕಿದೆ. ಜೊತೆಗೆ ಬಂಧನ ಮಾಡಿರುವ ಆರೋಪಿಗಳ ವಿರುದ್ಧ ಸೂಕ್ತ ಕ್ರಮ‌ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.

ಇನ್ನು ಸಾಗರದಲ್ಲಿ ನಿನ್ನೆ ನಡೆದ ಪ್ರಕರಣದ ಕುರಿತೂ ಸಹ ತನಿಖೆ ಮಾಡಲಾಗಿದೆ. ಆದ್ರೆ, ಶಿವಮೊಗ್ಗದಲ್ಲಿ ಸುಖಾ ಸುಮ್ಮನೇ ಊಹಾಪೋಹಗಳು ಹರಿದಾಡುತ್ತಿದ್ದು, ಇದರಿಂದ ನಗರದ ಶಾಂತಿ ಹಾಳಾಗುತ್ತಿದೆ. ಈ ಪ್ರಕರಣದಲ್ಲಿ ಯಾವುದೇ ರೀತಿ ತಪ್ಪುಗಳಿದ್ದರೆ, ಆ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ರಾಗಿಗುಡ್ಡದಲ್ಲಿ ಮೂರು ಸಮುದಾಯದವರ ಮನೆಗಳ ಮೇಲೂ ದಾಳಿಯಾಗಿದೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:32 pm, Tue, 3 October 23