ಕಲ್ಲು ತೂರಾಟ ಮೊದಲು ನಡೆಸಿರಲಿ ಅಥವಾ ನಂತರ, ಭಾಗಿಯಾದವರೆಲ್ಲ ಅಪರಾಧಿಗಳು: ಜಿಕೆ ಮಿಥುನ್ ಕುಮಾರ್, ಎಸ್ ಪಿ- ಶಿವಮೊಗ್ಗ

ಕಲ್ಲು ತೂರಾಟ ಮೊದಲು ನಡೆಸಿರಲಿ ಅಥವಾ ನಂತರ, ಭಾಗಿಯಾದವರೆಲ್ಲ ಅಪರಾಧಿಗಳು: ಜಿಕೆ ಮಿಥುನ್ ಕುಮಾರ್, ಎಸ್ ಪಿ- ಶಿವಮೊಗ್ಗ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 03, 2023 | 3:04 PM

ಎಲ್ಲ ಕೋನಗಳಿಂದ ಘಟನೆಯ ತನಿಖೆಯಗುತ್ತಿದೆ ಈಗಾಗಲೇ ಹಲವಾರು ಜನರನ್ನು ಬಂಧಿಸಲಾಗಿದೆ ಮತ್ತು 8-10 ಜನ ತಲೆಮರೆಸಿಕೊಂಡಿದ್ದಾರೆ ಎಂದು ಎಸ್ ಪಿ ಹೇಳಿದರು. ವ್ಯಾಪಾರಸ್ಥರಿಗೆ ಅಂಗಡಿ ಮುಂಗಟ್ಟುಗಳನ್ನು ತೆರೆದು ವ್ಯಾಪಾರ ವಹಿವಾಟು ನಡೆಸುವಂತೆ ಜಿಲ್ಲಾಡಳಿತ ಸೂಚಿಸಿದೆ ಎಂದು ಮಿಥುನ್ ಕುಮಾರ್ ಹೇಳಿದರು.

ಶಿವಮೊಗ್ಗ: ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಜಿಕೆ ಮಿಥುನ್ ಕುಮಾರ್ (GK Mithunkumar) ಇದು ರವಿವಾರ ನಡೆದ ಗಲಭೆಗಳಿಗೆ (Shivamogga Riots) ಸಂಬಂಧಿಸಿದಂತೆ ಮಾತಾಡಿ, ಮಾಧ್ಯಮದವರು ವಿಷಯವನ್ನು ವೈಭವೀಕರಿಸಿ ವರದಿ ಮಾಡಿ ಜನರಲ್ಲಿ ಆತಂಕ, ಭಯ, ಭೀತಿ ಉಂಟು ಮಾಡೋದು ಬೇಡ, ಕೇವಲ ವಸ್ತುಸ್ಥಿತಿಯನ್ನು ಅವಲೋಕಿಸಿ ವರದಿ ಮಾಡಲಿ ಎಂದು ಮನವಿ ಮಾಡಿದರು. ಕಲ್ಲು ತೂರಾಟ (stone pelting) ಮೊದಲು ನಡೆಸಲಿ ಅಥವಾ ಆಮೇಲೆ; ಅದನ್ನು ಮಾಡಿದವರೆಲ್ಲ ಕ್ರಿಮಿನಲ್ ಗಳೇ ಎಂದು ಹೇಳಿದ ಅವರು ಯಾರಿಗೂ ಕರುಣೆ ತೋರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ, ಬಂಧಿತರ ಕ್ರಿಮಿನಲ್ ಪೂರ್ವಾಪರಗಳನ್ನು ಪರಿಶೀಲಿಸಲಾಗುತ್ತಿದೆ ಮತ್ತು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು. ಎಲ್ಲ ಕೋನಗಳಿಂದ ಘಟನೆಯ ತನಿಖೆಯಗುತ್ತಿದೆ ಈಗಾಗಲೇ ಹಲವಾರು ಜನರನ್ನು ಬಂಧಿಸಲಾಗಿದೆ ಮತ್ತು 8-10 ಜನ ತಲೆಮರೆಸಿಕೊಂಡಿದ್ದಾರೆ ಎಂದು ಎಸ್ ಪಿ ಹೇಳಿದರು. ವ್ಯಾಪಾರಸ್ಥರಿಗೆ ಅಂಗಡಿ ಮುಂಗಟ್ಟುಗಳನ್ನು ತೆರೆದು ವ್ಯಾಪಾರ ವಹಿವಾಟು ನಡೆಸುವಂತೆ ಜಿಲ್ಲಾಡಳಿತ ಸೂಚಿಸಿದೆ ಎಂದು ಮಿಥುನ್ ಕುಮಾರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ