AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದರೆ ಅದು ಕೋಮು ಗಲಭೆ ಅಲ್ಲ: ಸಿದ್ದರಾಮಯ್ಯ

ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದರೆ ಅದು ಕೋಮು ಗಲಭೆ ಅಲ್ಲ: ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 03, 2023 | 2:08 PM

ಕಾಂಗ್ರೆಸ್ ಸರ್ಕಾರ ಕೋಮು ಗಲಭೆಗಳನ್ನು ಹತ್ತಿಕ್ಕುತ್ತದೆ, ಅವು ಜರುಗಲು ಆವಕಾಶ ನೀಡಲ್ಲ ಎಂದು ಹೇಳಿದ ಅವರು ಶಿವಮೊಗ್ಗ ಘಟನೆಗೆ ಸಂಬಂಧಿಸಿದಂತೆ, ಪ್ರತಿಭಟನೆ ಮಾಡುವವರನ್ನು ಸರ್ಕಾರ ತಡೆಯಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರಿಗೆ ಹಕ್ಕಿದೆ, ಆದರೆ ಪ್ರತಿಭಟನೆ ಸಕಾರಣವಾಗಿರಬೇಕು ಮತ್ತು ಶಾಂತಿಯುತವಾಗಿರಬೇಕು ಎಂದು ಮುಖ್ಯಮಂತ್ರಿ ಹೇಳಿದರು.

ಬೆಳಗಾವಿ: ನಗರದಲ್ಲಿ 9 ನೇ ರಾಷ್ಟ್ರೀಯ ಕುರುಬ ಸಮಾವೇಶ ನಡೆಯುತ್ತಿದೆ (Shepherds National Convention) ಮತ್ತು ಸಮಾವೇಶ ಸತ್ಕರಿಸಲ್ಪಡುವ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಇಂದು ನಗರಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಿದ್ದರಾಮಯ್ಯ, ಹರಿಯಾಣ ರಾಜ್ಯಪಾಲರ (governor of Haryana) ಜೊತೆ ತಮ್ಮನ್ನೂ ಸಮಾವೇಶಕ್ಕೆ ಆಹ್ವಾನಿಸಲಾಗಿದ್ದು ಪಾಲ್ಗೊಳ್ಳಲು ಬಂದಿರುವುದಾಗಿ ಹೇಳಿದರು. ಶಿವಮೊಗ್ಗದಲ್ಲಿ ನಡೆದ ಗಲಭೆಗಳ ಕೇಳಿದ ಪ್ರಶ್ನೆಗೆ ಅವರು, ಅದು ಕೋಮು ಗಲಭೆ ಅಲ್ಲ, ಬಿಜೆಪಿಯವರು ಅದನ್ನು ಕೋಮು ಗಲಭೆ ಅಂತ ಆರೋಪ ಮಾಡುತ್ತಿದ್ದಾರೆ. ಅವರಿಗೆ ಈಗ ಆರೋಪ ಮಾಡುವುದನ್ನು ಬಿಟ್ಟಿ ಬೇರೇನೂ ಕೆಲಸವಿಲ್ಲ. ಆದರೆ ಅವರ ಆರೋಪಗಳು ಸುಳ್ಳು, ಯಾರೋ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ, ದುಷ್ಕರ್ಮಿಗಳನ್ನು ಬಂಧಿಸಿ ಜೈಲಿಗೆ ಅಟ್ಟಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. ಕಾಂಗ್ರೆಸ್ ಸರ್ಕಾರ ಕೋಮು ಗಲಭೆಗಳನ್ನು ಹತ್ತಿಕ್ಕುತ್ತದೆ, ಅವು ಜರುಗಲು ಆವಕಾಶ ನೀಡಲ್ಲ ಎಂದು ಹೇಳಿದ ಅವರು ಶಿವಮೊಗ್ಗ ಘಟನೆಗೆ ಸಂಬಂಧಿಸಿದಂತೆ, ಪ್ರತಿಭಟನೆ ಮಾಡುವವರನ್ನು ಸರ್ಕಾರ ತಡೆಯಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರಿಗೆ ಹಕ್ಕಿದೆ, ಆದರೆ ಪ್ರತಿಭಟನೆ ಸಕಾರಣವಾಗಿರಬೇಕು ಮತ್ತು ಶಾಂತಿಯುತವಾಗಿರಬೇಕು ಎಂದು ಮುಖ್ಯಮಂತ್ರಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ