ಶಿವಮೊಗ್ಗದಲ್ಲಿ ಈದ್ ಮಿಲಾದ್ ಗಲಾಟೆ; ಸಚಿವ ಜಮೀರ್ ಅಹ್ಮದ್ ಹೇಳಿದ್ದಿಷ್ಟು
ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ ವಿಚಾರ ‘ಅವರು ಜಿಲ್ಲಾಡಳಿತದಿಂದ ಅನುಮತಿ ಪಡೆದು ಔರಂಗಜೇಬ್ ಕಟೌಟ್ ಮೆರವಣಿಗೆ ಮಾಡಿದ್ದೀವಿ ಎಂದು ಹೇಳುತ್ತಿದ್ದಾರೆ. ಆದರೆ, ಪರ್ಮಿಷನ್ ಇಲ್ಲವೆಂದು ಮಾಧ್ಯಮದವರು ಹೇಳಿದ್ದಾರೆ. ಆ ಬಗ್ಗೆ ಚರ್ಚೆ ಬೇಡ. ಈಗ ಶಾಂತವಾಗಿದೆ ಎಂದು ಸಚಿವ ಜಮೀರ್ ಅಹಮದ್ ಹೇಳಿದರು.
ಹಾಸನ, ಅ.03 : ಶಿವಮೊಗ್ಗ(Shivamogga)ದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ ವಿಚಾರ ‘ ಈ ಘಟನೆ ಆಗಬಾರದಿತ್ತು, ಆಗಿದೆ. ಈಗ ಕಂಟ್ರೋಲ್‌ನಲ್ಲಿದ್ದು, ಏನು ಸಮಸ್ಯೆ ಇಲ್ಲ ಎಂದು ವಸತಿ, ವಕ್ಪ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್(Zameer Ahmed Khan) ಅವರು ಹೇಳಿದರು. ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಮಾತನಾಡಿದ ಅವರು ‘ಬಿಜೆಪಿಯವರಿಗೆ ಹೇಳೋಕೆ ಏನು ಇಲ್ಲ. ಪ್ರತಿ ಸಲ, ಸಣ್ಣ-ಪುಟ್ಟ ಗಲಾಟೆಯಾದರೂ ಸಿ.ಟಿ.ರವಿ, ಈಶ್ವರಪ್ಪ ಆಗಲಿ, ಅದನ್ನು ಪಾಕಿಸ್ತಾನ ಮಾಡಲು ಹೊರಟ್ಟಿದ್ದಾರೆ ಎಂದರು.
‘ಅವರು ಜಿಲ್ಲಾಡಳಿತದಿಂದ ಅನುಮತಿ ಪಡೆದು ಔರಂಗಜೇಬ್ ಕಟೌಟ್ ಮೆರವಣಿಗೆ ಮಾಡಿದ್ದೀವಿ ಎಂದು ಹೇಳುತ್ತಿದ್ದಾರೆ. ಆದರೆ, ಪರ್ಮಿಷನ್ ಇಲ್ಲವೆಂದು ಮಾಧ್ಯಮದವರು ಹೇಳಿದ್ದಾರೆ. ಈಗ ಆ ಬಗ್ಗೆ ಚರ್ಚೆ ಬೇಡ. ಈಗ ಶಾಂತವಾಗಿದೆ. ಯಾವ ಸಮಸ್ಯೆನೂ ಇಲ್ಲ, ಎಲ್ಲಾ ಕಂಟ್ರೋಲ್‌ನಲ್ಲಿದೆ. ಪರ್ಮಿಷಮ್ ತಗೊಂಡಿರಿಲಿಲ್ಲ ಅಂದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳೋಣಾ. ಈ ಕುರಿತು ಮುಖ್ಯಮಂತ್ರಿಗಳು ನಿನ್ನೆಯೇ ಹೇಳಿದ್ದು, ‘ಯಾವುದೇ ಸಮಾಜದ ಮೆರವಣಿಗೆ ಮಾಡಬೇಕಾದರೆ ಕಲ್ಲು ತೂರಾಟ ಮಾಡುವುದು ತಪ್ಪು ಎಂದು ಸ್ಪಷ್ಟನೆ ಕೊಟ್ಟಿದ್ದಾರೆ ಎಂದರು.
ಇದನ್ನೂ ಓದಿ:ಶಿವಮೊಗ್ಗದಲ್ಲಿ ಈದ್ ಮಿಲಾದ್ ಗಲಾಟೆ ಪ್ರಕರಣ: ಸಾಮಾಜಿಕ ಜಾಲತಾಣದಲ್ಲಿ ಊಹಾಪೋಹ ಹರಡುವವರ ವಿರುದ್ಧ ಕಠಿಣ ಕ್ರಮ; ಎಸ್ಪಿ
7 ಜನ ಲಿಂಗಾಯತರನ್ನು ನಾವು ಮಂತ್ರಿ ಮಾಡಿದ್ದೇವೆ
ಇನ್ನು ಇದೇ ವೇಳೆ ಲಿಂಗಾಯತ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ಸಿಗದ ಬಗ್ಗೆ ಶಾಮನೂರು ಶಿವಶಂಕರಪ್ಪ ಹೇಳಿಕೆ ಕುರಿತು ‘ ಅವರು ಹಿರಿಯ ನಾಯಕರು, ಆ ಬಗ್ಗೆ ಗೌರವವಿದೆ. 7 ಜನ ಲಿಂಗಾಯತರನ್ನು ನಾವು ಮಂತ್ರಿ ಮಾಡಿದ್ದೇವೆ. ಅವರಂತೆ ನಾನು ಮುಸ್ಲಿಂಮರಿಗೆ ಇಂತಹ ಕಡೆ ಪೋಸ್ಟ್ ಕೊಡಿ ಎಂದು ಹೇಳಲಾಗುತ್ತಾ?. ಯಾವ ಅಧಿಕಾರಿ ಉತ್ತಮ ಕೆಲಸ ಮಾಡ್ತಾರೆ ಅವರನ್ನು ಹಾಕಿಕೊಳ್ಳಬೇಕು. ಕಲಬುರಗಿಯಲ್ಲಿ ಫೌಜಿಯಾ ಎಂಬ ಡಿಸಿ ಇದ್ದಾರೆ. ಅವರು ಒಳ್ಳೆ ಕೆಲಸ ಮಾಡಿದ್ದಾರೆ, ಅವರಿಗೆ ಡಿಮ್ಯಾಂಡ್ ಇದೆ. ಸಚಿವರಾದ ಎಂ.ಬಿ.ಪಾಟೀಲ್, ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್ ಅವರು ತಮ್ಮ ಜಿಲ್ಲೆಗಳಿಗೆ ಬೇಕು ಅಂತಿದ್ರು, ಈಗ ಪ್ರಿಯಾಂಕ್ ಖರ್ಗೆ ಹಾಕೊಂಡಿದ್ದಾರೆ. ಸರ್ಕಾರಿ ಕೆಲಸದಲ್ಲಿ ಜಾತಿ ತರಬಾರದು ಎಂದು ಹೇಳಿದರು.
ದೇಶದಲ್ಲಿ ಜಾತ್ಯಾತೀತ ಪಕ್ಷ ಎನ್ನೋದು ಇದ್ರೆ ಅದು ಕಾಂಗ್ರೆಸ್ ಪಾರ್ಟಿ
ರಾಜ್ಯದಲ್ಲಿ ಜಾತ್ಯಾತೀತ ಜನತಾದಳ ಎಂದು ಇತ್ತು. ಹಾಗಾಗಿ ಕಾಂಗ್ರೆಸ್ಗೆ ಸ್ವಲ್ಪ ಸಮಸ್ಯೆ ಇತ್ತು. ಈಗ ಕಾಂಗ್ರೆಸ್ ಸ್ವತಂತ್ರ ಜಾತ್ಯಾತೀತ ಪಕ್ಷ. ಜೆಡಿಎಸ್ -ಬಿಜೆಪಿ ಹೊಂದಾಣಿಗೆ ಆದ ಬಳಿಕ ಉಳಿದುಕೊಂಡಿರೋದು ಕಾಂಗ್ರೆಸ್ ಏಕೈಕ ಜಾತ್ಯಾತೀತ ಪಕ್ಷ ಎಂದು ಜಮೀರ್ ಅಹಮದ್ ಬಣ್ಣಿಸಿದರು. ಇದೇ ವೇಳೆ ಸರ್ಕಾರ ಹೋದ್ರೆ, ಮುಸಲ್ಮಾನರು ನನ್ನ ಬಳಿಯೇ ಬರಬೇಕು ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರ ‘ಮುಸಲ್ಮಾನರಿಗೆ ಇವರ ಕೊಡುಗೆ ಏನು?, ದೇವೇಗೌಡರ ಕೊಡಗೆ ಇದೆ. ಮೀಸಲಾತಿ ವಿಚಾರ ಇರಲಿ, ಈದ್ಗಾ ಮೈದಾನ ವಿಚಾರ ಇರಲಿ ದೇವೇಗೌಡರ ಕೊಡುಗೆ ಸಾಕಷ್ಟು ಇದೆ. ಆದರೆ, ಕುಮಾರಸ್ವಾಮಿ ಕೊಡುಗೆ ಏನಿದೆ, ಒಂದಾದ್ರು ತೊರಿಸಿ ಎಂದು ಸವಾಲು ಎಸದಿದ್ದಾರೆ.
ಹಾಸನ- ರಾಜ್ಯದಲ್ಲಿ ವಸತಿ ಯೋಜನೆಯಲ್ಲಿ ಹಿನ್ನಡೆ ‘ ಕೇಂದ್ರ ಸರ್ಕಾರದ ಅಸಹಕಾರದಿಂದ ಕೆಲವು ಯೋಜನೆಗೆ ಹಿನ್ನಡೆಯಾಗಿದೆ. ಕೇಂದ್ರ ಸರ್ಕಾರ ಅನುದಾನ ಕೊಟ್ಟು ಜಿಎಸ್ ಟಿ ಹೆಸರಿನಲ್ಲಿ ಮತ್ತೆ ವಾಪಸ್ ತಗೊತಾರೆ. ಸ್ಲಂ ಬೋರ್ಡ್ ನಲ್ಲಿ 170230. ಮನೆಗಳಲ್ಲಿ ಒಂದೂ ಮನೆ ಕೊಡೋಕಾಗಲಿಲ್ಲ. ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ ಐವತ್ತು ಸಾವಿರ ಮನೆಗಳಿಗೆ ಅನುದಾನ ಕೊಡೋಕೆ ಆಗಿಲ್ಲ. ಕೇಂದ್ರದಿಂದ ಆರು ಸಾವಿರ ಕೋಟಿ ಅನುದಾನ ಬರಬೇಕಿತ್ತು. ಕೇವಲ 310 ಕೋಟಿ ಅನುದಾನ ಬಂದಿದೆ. ಹಾಗಾಗಿ ಸಿಎಂ ಅವರಿಗೆ ‘ಬಡವರ ಪಾಲಿನ ಹಣ ಅವರಿಗೆ ಕೊಡೋಕೆ ಆಗ್ತಾ ಇಲ್ಲ. ಅವರಿಗೆ ನೆರವಾಗಬೇಕು ಎಂದು ಮನವಿ ಮಾಡಿದ್ದೇನೆ. ಅವರೂ ಕೂಡ ಅರ್ಥ ಮಾಡಿಕೊಂಡು ಸಭೆ ಕರೆಯೊದಾಗಿ ಹೇಳಿದ್ದಾರೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ