ಹೆಚ್ಚಾದ ವಿದ್ಯುತ್ ಬೇಡಿಕೆ: ಕೊರತೆ ಆಗದಂತೆ ನಾವು ಪ್ಲ್ಯಾನ್ ಮಾಡಿಕೊಂಡಿದ್ದೇವೆ ಎಂದ ಜಾರ್ಚ್

ಗಂಡಸಿ ಬಳಿ ಸೋಲಾರ್ ಪ್ಲಾಂಟ್​ಗೆ ಸ್ಥಳ ಪರಿಶೀಲನೆ ನಡೆಸಿದ ಸಚಿವ ಕೆಜೆ ಜಾರ್ಜ್ ಅವರು, ನಮ್ಮ ರಾಜ್ಯದಲ್ಲಿ4 ಲಕ್ಷ ಅಕ್ರಮ ಸಕ್ರಮ ಪಂಪ್ ಸೆಟ್ ಸಕ್ರಮಕ್ಕೆ ಅರ್ಜಿ ಬಂದಿದೆ. 400 ಸಬ್ ಸ್ಟೇಷನ್ ವ್ಯಾಪ್ತಿಯಲ್ಲಿ 3 ಸಾವಿರ ಮೆಗಾವ್ಯಾಟ್ ಸೋಲಾರ್ ಪವರ್ ಉತ್ಪಾದನೆಗೆ ತೀರ್ಮಾನ ಮಾಡಲಾಗಿದೆ. ಹಾಗಾಗಿ ಸೋಲಾರ್ ವಿದ್ಯುತ್ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಹೆಚ್ಚಾದ ವಿದ್ಯುತ್ ಬೇಡಿಕೆ: ಕೊರತೆ ಆಗದಂತೆ ನಾವು ಪ್ಲ್ಯಾನ್ ಮಾಡಿಕೊಂಡಿದ್ದೇವೆ ಎಂದ ಜಾರ್ಚ್
ಕೆಜೆ ಜಾರ್ಜ್
Follow us
| Updated By: ಆಯೇಷಾ ಬಾನು

Updated on: Oct 04, 2023 | 1:28 PM

ಹಾಸನ, ಅ.04: ನಮ್ಮ ರಾಜ್ಯದಲ್ಲಿ 34 ಲಕ್ಷ ನೀರಾವರಿ ಪಂಪ್ ಸೆಟ್ ಇವೆ. ಇತ್ತೀಚೆಗೆ ಮಳೆ ಇಲ್ಲದೆ ವಿದ್ಯುತ್​ಗೆ ಬೇಡಿಕೆ ಜಾಸ್ತಿ ಆಗಿದೆ. ಈ ವರ್ಷ ನಮಗೆ ಸೆಪ್ಟೆಂಬರ್ ನಲ್ಲೇ ಪೀಕ್ ಹವರ್ ಶುರುವಾಗಿದೆ. ವಿದ್ಯುತ್ (Electricity) ಬೇಡಿಕೆ ಹೆಚ್ಚಾಗಿದೆ. ಥರ್ಮಲ್ ಪವರ್ (Thermal Power) ಉತ್ಪಾದನೆ ಶುರು ಮಾಡಿ ಸದ್ಯ ಕೊರತೆ ಆಗದಂತೆ ಮಾಡಿದ್ದೇವೆ ಎಂದು ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಗಂಡಸಿಯಲ್ಲಿ ಇಂಧನ ಸಚಿವ ಕೆಜೆ ಜಾರ್ಜ್ (KJ George) ತಿಳಿಸಿದರು.

ಗಂಡಸಿ ಬಳಿ ಸೋಲಾರ್ ಪ್ಲಾಂಟ್​ಗೆ ಸ್ಥಳ ಪರಿಶೀಲನೆ ನಡೆಸಿದ ಸಚಿವ ಕೆಜೆ ಜಾರ್ಜ್ ಅವರು, ನಮ್ಮ ರಾಜ್ಯದಲ್ಲಿ4 ಲಕ್ಷ ಅಕ್ರಮ ಸಕ್ರಮ ಪಂಪ್ ಸೆಟ್ ಸಕ್ರಮಕ್ಕೆ ಅರ್ಜಿ ಬಂದಿದೆ. 400 ಸಬ್ ಸ್ಟೇಷನ್ ವ್ಯಾಪ್ತಿಯಲ್ಲಿ 3 ಸಾವಿರ ಮೆಗಾವ್ಯಾಟ್ ಸೋಲಾರ್ ಪವರ್ ಉತ್ಪಾದನೆಗೆ ತೀರ್ಮಾನ ಮಾಡಲಾಗಿದೆ. ಹಾಗಾಗಿ ಸೋಲಾರ್ ವಿದ್ಯುತ್ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಇನ್ನು ಬರೀ ಅರಸೀಕೆರೆ ತಾಲ್ಲೂಕಿನಲ್ಲಿ 24 ಸಾವಿರ ಪಂಪ್ ಸೆಟ್ ಇದೆ. ಇದರಲ್ಲಿ 3,932 ರೈತರು ಅಕ್ರಮ ಸಕ್ರಮಕ್ಕಾಗಿ ಅರ್ಜಿ ಹಾಕಿದಾರೆ. ಎಲ್ಲಾ ರೈತರಿಗೂ ವಿದ್ಯುತ್ ನೀಡಲು ಕ್ರಮ ವಹಿಸುತ್ತೇವೆ. ಸಬ್ ಸ್ಟೇಷನ್ ಸಮೀಪವೇ ಸೋಲಾರ್ ಪ್ಲಾಂಟ್ ಮಾಡಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತೆ. ಪಾವಗಡ ಮಾದರಿಯಲ್ಲಿ ರೈತರ ಜಮೀನು ಲೀಸ್ ಗೆ ಪಡೆದು ಯೋಜನೆ ಜಾರಿ ಮಾಡುತ್ತೇವೆ. ಹಗಲಿನಲ್ಲಿ ರೈತರಿಗೆ ಏಳು ಗಂಟೆ ವಿದ್ಯುತ್ ನೀಡಲು ಕ್ರಮ ಕೈಗೊಳ್ಳುತ್ರೇವೆ ಎಂದರು.

ಇದನ್ನೂ ಓದಿ: ಉಚಿತ ಗೃಹಜ್ಯೋತಿ ವಿದ್ಯುತ್​ ಐಡಿಯಾ ಕೊಟ್ಟಿದ್ದು ಯಾರು ಗೊತ್ತಾ? ವಿದ್ಯುತ್​ ಸಚಿವ ಕೆಜೆ ಜಾರ್ಜ್ ಹೇಳಿದ ಸತ್ಯ ಏನು?

ರಾಜ್ಯದಲ್ಲಿ ಇಂಧನ ಕೊರತೆ ಆಗದಂತೆ ಕ್ರಮ ವಹಿಸುತ್ತೇವೆ

ಬೇರೆ ಬೇರೆ ರಾಜ್ಯದ ಜೊತೆ ಮಾತನಾಡುತ್ರಿದ್ದೇವೆ. ನಾವು ಈಗ ಪವರ್‌ ತಗೊಂಡು ಜೂನ್ ಜುಲೈನಲ್ಲಿ ವಾಪಸ್ ಕೊಡೋ ಬಗ್ಗೆ ಚರ್ಚೆ ಆಗುತ್ತಿದೆ. ಇದುವರೆಗೆ ನಾವು ಬೇರೆ ರಾಜ್ಯಕ್ಕೆ ಕೊಡುತ್ತಿದ್ದೆವು ಈಗ ಅದನ್ನ ನಿಲ್ಲಿಸಲಾಗಿದೆ. ಅದರಿಂದ ನಮಗೆ 1200 ಮೆಗಾವ್ಯಾಟ್ ವಿದ್ಯುತ್ ಉಳಿಯುತ್ತೆ. ಅಕಸ್ಮಾತ್ ಕೊರತೆಯಾದರೆ ಅದನ್ನ ಸರಿ ದೂಗಿಸಲು ಕ್ರಮ ವಹಿಸುತ್ತೇವೆ ಎಂದರು. ಇನ್ನು ಇದೇ ವೇಳೆ ರೈತರು ಅರ್ಜಿ ಸಲ್ಲಿಸಿದರು ವಿದ್ಯುತ್ ಪರಿವರ್ತಕ ಸಿಗುತ್ತಿಲ್ಲ ಎಂಬ ಆರೋಪ ವಿಚಾರಕ್ಕೆ ಸಂಬಂಧಿಸಿ ಸಚಿವರು ಉತ್ತರಿಸಿದ್ದು, ನಮ್ಮಲ್ಲಿ ವಿದ್ಯುತ್ ಪರಿವರ್ತಕಗಳ ಕೊರತೆ ಇಲ್ಲ. ಅದಕ್ಕಾಗಿ ಟ್ರಾನ್ಸ್ ಫಾರ್ಮರ್ ಬ್ಯಾಂಕ್ ಮಾಡಲಾಗಿದೆ. ಆದರೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿರುವುದರಿಂದ ಲೋಡ್ ಹೆಚ್ಚಾಗಿ ಟ್ರಾನ್ಸ್ ಫಾರ್ಮರ್ ಸುಟ್ಟು ಹೋಗುತ್ತಿವೆ ಎಂದರು. ಸರ್ಕಾರದಲ್ಲಿ ಲಿಂಗಾಯತ ಅದಧಿಕಾರಿಗಳ ಕಡೆ ಗಣನೆ ಬಗ್ಗೆ ಶಾಮನೂರು ಶಿವಶಂಕರಪ್ಪ ಅಸಮಧಾನ ವಿಚಾರಕ್ಕೆ, ಅವರು ನಮ್ಮ ಪಕ್ಷದ ಹಿರಿಯ ನಾಯಕರು. ಅವರ ಹೇಳಿಕೆ ಬಗ್ಗೆ ಸಿಎಂ ಮಾತನಾಡಿದ್ದಾರೆ. ನಾನು ಆ ಬಗ್ಗೆ ಮಾತನಾಡಲ್ಲ ಎಂದು ಸಚಿವರು ಪ್ರತಿಕ್ರಿಯೆಗೆ ನಿರಾಕರಿಸಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಜಾತಿ ಇಲ್ಲ, ಕಾಂಗ್ರೆಸ್ ಪಕ್ಷವೇ ಒಂದು ಜಾತಿ

ಜೆಡಿಎಸ್​ ಅಲ್ಪಸಂಖ್ಯಾತ ಮುಖಂಡರು ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಕೆ.ಜೆ.ಜಾರ್ಜ್, ಕಾಂಗ್ರೆಸ್ ಪಕ್ಷದಲ್ಲಿ ಜಾತಿ ಇಲ್ಲ, ಕಾಂಗ್ರೆಸ್ ಪಕ್ಷವೇ ಒಂದು ಜಾತಿ. ಕಾಂಗ್ರೆಸ್​ನಲ್ಲಿ ಲಿಂಗಾಯತ, ಒಕ್ಕಲಿಗರು, ದಲಿತರು, ಹಿಂದುಳಿದವರು, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರೂ ಇದ್ದಾರೆ. ಭಾರತದಲ್ಲಿ ಎಲ್ಲಾ ಜಾತಿಯ ಜನರು ಇರುವ ಏಕೈಕ ಪಕ್ಷ ಕಾಂಗ್ರೆಸ್​. ಕಾಂಗ್ರೆಸ್​ ಜಾತಿ ಮೇಲೆ ರಾಜಕಾರಣ ಮಾಡಲ್ಲ. ಎಲ್ಲಾ ಸಮುದಾಯದ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಬರುತ್ತಿದ್ದಾರೆ ಎಂದರು.

ಹಾಸನಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೆಲೆ ಕ್ಲಿಕ್ ಮಾಡಿ