ಕುಮಾರಸ್ವಾಮಿ ಸರ್ಕಾರವನ್ನು ಉಳಿಸುವ ಮಾತಲ್ಲ ಉರುಳಿಸುವ ಮಾತನ್ನೇ ಆಡುತ್ತಾರೆ: ಕೆಜೆ ಜಾರ್ಜ್, ಸಚಿವ
ಜೆಡಿಎಸ್-ಬಿಜೆಪಿ ಮೈತ್ರಿಯ ಬಳಿಕ ಜೆಡಿಎಸ್ ಹಲವಾರು, ಮಾಜಿ ಶಾಸಕರು ನಾಯಕರು ಭ್ರಮನಿರಸನಗೊಂಡು ಕಾಂಗ್ರೆಸ್ ಸೇರುತ್ತಿದ್ದಾರೆ. ಹಾಲಿ ಶಾಸಕರಲ್ಲಿ ಕೆಲವರು ಕಾಂಗ್ರೆಸ್ ಪಕ್ಷದತ್ತ ಮುಖ ಮಾಡಿರುವ ಬಗ್ಗೆ ವದಂತಿಗಳು ಸಹ ಹರಡಿವೆ. ಪ್ರಾಯಶಃ ಈ ಬೆಳವಣಿಗೆಯಿಂದ ಕಂಗೆಟ್ಟಂತಾಗಿರುವ ಕುಮಾರಸ್ವಾಮಿ, ಹತಾಶೆಯಿಂದ ಸರ್ಕಾರ ಉರುಳುತ್ತೆ ಅಂತ ಮಾತಾಡುತ್ತಿದ್ದಾರೆ.
ಹಾಸನ: ಜಿಲ್ಲೆಯ ಪ್ರವಾಸದಲ್ಲಿರುವ ಇಂಧನ ಸಚಿವ ಕೆಜೆ ಜಾರ್ಜ್ (KJ George) ಅರಸೀಕೆರೆಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ; ಇತ್ತೀಚಿಗೆ ಬಿಜೆಪಿ ಜೊತೆ ಮೈತ್ರಿ ಬೆಳೆಸಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿಯವರನ್ನು (HD Kumaraswamy) ಲೇವಡಿ ಮಾಡಿದರು. ಜೆಡಿಎಸ್-ಬಿಜೆಪಿ ಮೈತ್ರಿಯ ಬಳಿಕ ಜೆಡಿಎಸ್ ಹಲವಾರು, ಮಾಜಿ ಶಾಸಕರು ನಾಯಕರು ಭ್ರಮನಿರಸನಗೊಂಡು ಕಾಂಗ್ರೆಸ್ (Congress) ಸೇರುತ್ತಿದ್ದಾರೆ. ಹಾಲಿ ಶಾಸಕರಲ್ಲಿ ಕೆಲವರು ಕಾಂಗ್ರೆಸ್ ಪಕ್ಷದತ್ತ ಮುಖ ಮಾಡಿರುವ ಬಗ್ಗೆ ವದಂತಿಗಳು ಸಹ ಹರಡಿವೆ. ಪ್ರಾಯಶಃ ಈ ಬೆಳವಣಿಗೆಯಿಂದ ಕಂಗೆಟ್ಟಂತಾಗಿರುವ ಕುಮಾರಸ್ವಾಮಿ, ಹತಾಶೆಯಿಂದ ಸರ್ಕಾರ ಉರುಳುತ್ತೆ ಅಂತ ಮಾತಾಡುತ್ತಿದ್ದಾರೆ. ಇದನ್ನೇ ಪತ್ರಕರ್ತರು ಜಾರ್ಜ್ ಗೆ ಕೇಳಿದಾಗ, ಕುಮಾರಾಸ್ವಾಮಿ ಯಾವ ಪಕ್ಷದ ನಾಯಕರು ಈಗ? ಅವರು ವಿರೋಧ ಪಕ್ಷದಲ್ಲಿರುವುದರಿಂದ ಸರ್ಕಾರವನ್ನು ಉಳಿಸುವ ಮಾತು ಯಾಕೆ ಆಡುತ್ತಾರೆ? ಉರುಳಿಸುವ ಮಾತನ್ನೇ ಆಡುತ್ತಾರೆ. ಕೇವಲ 19 ಸೀಟುಗಳನ್ನು ಗೆದ್ದು ಅವರು ಇಷ್ಟೆಲ್ಲ ಮಾತಾಡಿದರೆ 136 ಸ್ಥಾನಗಳನ್ನು ಹೊಂದಿರುವ ನಾವು ಎಷ್ಟು ಮಾತಾಡಬೇಡ ಎಂದು ಹೇಳಿದರು. ಸಚಿವರೊಂದಿಗೆ ಅರಸೀಕೆರೆ ಕಾಂಗ್ರೆಸ್ ಶಾಸಕ ಕೆಎಂ ಶಿವಲಿಂಗೇಗೌಡ ಅವರನ್ನು ನೋಡಬಹದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ