ರಾಜ್ಯದಲ್ಲಿ ಗಲಭೆಗಳು ನಡೆಯುತ್ತಿರುವುದಕ್ಕೆ ಸಿಎಂ ಸಿದ್ದರಾಮಯ್ಯ ಕಾರಣ: ಪ್ರತಾಪ್ ಸಿಂಹ, ಸಂಸದ

ರಾಜ್ಯದಲ್ಲಿ ಗಲಭೆಗಳು ನಡೆಯುತ್ತಿರುವುದಕ್ಕೆ ಸಿಎಂ ಸಿದ್ದರಾಮಯ್ಯ ಕಾರಣ: ಪ್ರತಾಪ್ ಸಿಂಹ, ಸಂಸದ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 04, 2023 | 1:42 PM

ಬಿಜೆಪಿ ನಾಯಕರ ಕುಮ್ಮಕ್ಕಿನಿಂದಲೇ ಶಿವಮೊಗ್ಗದಲ್ಲಿ ಗಲಭೆ ನಡೆದಿದ್ದು ಎಂದು ಹೇಳಿರುವ ಸಚಿವ ರಾಮಲಿಂಗಾರೆಡ್ಡಿಯವರನ್ನು ತರಾಟೆಗೆ ತೆಗೆದುಕೊಂಡ ಪ್ರತಾಪ್, ಗೌರಿ ಲಂಕೇಶ್ ಹತ್ಯೆ ನಡೆದಾಗ ಅವರೇ ಗೃಹ ಸಚಿವರಾಗಿದ್ದರು, ಅಮಾಯಕರನ್ನು ಅರೆಸ್ಟ್ ಮಾಡಿ ಜೈಲಲ್ಲಿ ಕೂರಿಸಿರುವ ಅವರಿಗೆ ಇದುವರೆಗೆ ಚಾರ್ಜ್ ಶೀಟ್ ಹಾಕೋದು ಸಾಧ್ಯವಾಗಿಲ್ಲ, ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆಯಿಲ್ಲ ಎಂದು ಹೇಳಿದರು.

ಮೈಸೂರು: ಸಂಸದ ಪ್ರತಾಪ್ ಸಿಂಹ (Pratap Simha) ಇಂದು ನಗರದಲ್ಲಿ ಪತ್ರಿಕಾ ಗೋಷ್ಟಿ ನಡೆಸಿ ಮಾತಾಡುವಾಗ ರಾಜ್ಯದಲ್ಲಿ ಕೋಮು ಗಲಭೆಗಳು (communal riots) ನಡೆಯುತ್ತಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ (CM Siddaramaiah) ಕಾರಣ ಎಂದು ನೇರ ಆರೋಪ ಮಾಡಿದರು. 2015 ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಹುಬ್ಬಳ್ಳಿ, ಶಿವಮೊಗ್ಗ ಮತ್ತು ಕರಾವಳಿ ಭಾಗದಲ್ಲಿ ಕೋಮು ಗಲಭೆಗಳನ್ನು ನಡೆಸಿ, ಹಿಂದೂ ಕಾರ್ಯಕರ್ತರ ಹತ್ಯೆ ಮಾಡುತ್ತಿದ್ದ ಪಿಎಫ್ ಐ, ಎಸ್ ಡಿ ಪಿಐ, ಕೆಎಫ್ ಡಿ ಕಾರ್ಯಕರ್ತರ ಮೇಲಿದ್ದ ಕೇಸುಗಳನ್ನು ವಾಪಸ್ಸು ಪಡೆದಿರುವ ಕಾರಣ ಇವರಿಗೆ ಇಂಬು ಕೊಟ್ಟಂತಾಗಿದೆ. ತಮ್ಮನ್ನು ಯಾರೂ ಪ್ರಶ್ನಿಸಲಾರರು ಎಂಬ ಭಾವನೆ ಇವರಲ್ಲಿ ಮನೆ ಮಾಡಿರುವುದರಿಂದ ಮತ್ತು ತಮ್ಮ ವಿರುದ್ಧ ಪ್ರಕರಣಗಳು ದಾಖಲಾದರೂ ಪೊಲೀಸ್ ಮತ್ತು ಸರ್ಕಾರ ಏನೂ ಮಾಡಲ್ಲ ಅನ್ನೋದು ಖಾತ್ರಿಯಾಗಿರುವುದರಿಂದ ಪುನಃ ಸಮಾಜಘಾತುಕ ಚಟುವಟಿಕೆಗಳನ್ನು ಶುರು ಮಾಡಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿದರು. ಬಿಜೆಪಿ ನಾಯಕರ ಕುಮ್ಮಕ್ಕಿನಿಂದಲೇ ಶಿವಮೊಗ್ಗದಲ್ಲಿ ಗಲಭೆ ನಡೆದಿದ್ದು ಎಂದು ಹೇಳಿರುವ ಸಚಿವ ರಾಮಲಿಂಗಾರೆಡ್ಡಿಯವರನ್ನು ತರಾಟೆಗೆ ತೆಗೆದುಕೊಂಡ ಪ್ರತಾಪ್, ಗೌರಿ ಲಂಕೇಶ್ ಹತ್ಯೆ ನಡೆದಾಗ ಅವರೇ ಗೃಹ ಸಚಿವರಾಗಿದ್ದರು, ಅಮಾಯಕರನ್ನು ಅರೆಸ್ಟ್ ಮಾಡಿ ಜೈಲಲ್ಲಿ ಕೂರಿಸಿರುವ ಅವರಿಗೆ ಇದುವರೆಗೆ ಚಾರ್ಜ್ ಶೀಟ್ ಹಾಕೋದು ಸಾಧ್ಯವಾಗಿಲ್ಲ, ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆಯಿಲ್ಲ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ