ಮನೆಗೆ ಬಂದ ಅತಿಥಿಯನ್ನು ತಡೆದು ನಿಲ್ಲಿಸಿದ ಸಾಕು ನಾಯಿ; ಯಾರು ಆ ಗೆಸ್ಟ್​ ಅಂತೀರಾ? ಇಲ್ಲಿದೆ ವಿಡಿಯೋ

ಮನೆಗೆ ಬಂದ ಅತಿಥಿಯನ್ನು ತಡೆದು ನಿಲ್ಲಿಸಿದ ಸಾಕು ನಾಯಿ; ಯಾರು ಆ ಗೆಸ್ಟ್​ ಅಂತೀರಾ? ಇಲ್ಲಿದೆ ವಿಡಿಯೋ

TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on:Oct 04, 2023 | 3:54 PM

ಜಿಲ್ಲೆಯ ಸಿರುಗುಪ್ಪ(Siruguppa) ಪಟ್ಟಣದ ನಿವಾಸಿ ಮಂಜುನಾಥ್ ಎಂಬುವವರ​ ಮನೆಗೆ ಒಬ್ಬರು ಅತಿಥಿ ಬಂದಿದ್ದರು. ಈ ವೇಳೆ ಮನೆಯ ಮುಂದೆ ದ್ವಾರ ಪಾಲಕನಂತೆ ಇದ್ದ ಸಾಕು ನಾಯಿ(Dog), ಅವರನ್ನು ತಡೆದು ಒಳಗೆ ಬರದಂತೆ ನೋಡಿಕೊಂಡಿತ್ತು.

ಬಳ್ಳಾರಿ, ಅ.04: ಜಿಲ್ಲೆಯ ಸಿರುಗುಪ್ಪ(Siruguppa) ಪಟ್ಟಣದ ನಿವಾಸಿ ಮಂಜುನಾಥ್ ಎಂಬುವವರ​ ಮನೆಗೆ ಒಬ್ಬರು ಅತಿಥಿ ಬಂದಿದ್ದರು. ಈ ವೇಳೆ ಮನೆಯ ಮುಂದೆ ದ್ವಾರ ಪಾಲಕನಂತೆ ಇದ್ದ ಸಾಕು ನಾಯಿ(Dog), ಅವರನ್ನು ತಡೆದು ಒಳಗೆ ಬರದಂತೆ ನೋಡಿಕೊಂಡಿತ್ತು. ಹೌದು, ಮನೆಗೆ ಬಂದಿದ್ದ ನಾಗರಹಾವನ್ನು(Snake) ಸಾಕು ನಾಯಿ ಬರೊಬ್ಬರಿ ಅರ್ಧ ಗಂಟೆಗಳ ಕಾಲ ತಡೆದು ನಿಲ್ಲಿಸಿತ್ತು. ಬಳಿಕ ನಾಯಿಯ ಕಿರುಚಾಟ ಕೇಳಿದ ಮನೆ ಮಾಲೀಕ ಮಂಜುನಾಥ್ ಹೊರಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಇದಾದ ನಂತರ ಮನೆಗೆ ಬಂದ ನಾಗರ ಹಾವನ್ನು ಉರಗ ತಜ್ಞರನ್ನು ಕರೆಯಿಸಿ ಹಿಡಿದು ಕಾಡಿಗೆ ಬಿಟ್ಟುಬಂದಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Published on: Oct 04, 2023 03:32 PM