ಸಂವಿಧಾನದ ಆಶಯದಂತೆ ಸರ್ಕಾರ ನಡೆಯುತ್ತಿದೆ ಎನ್ನುವ ಪ್ರಿಯಾಂಕ್ ಖರ್ಗೆಗೆ ನಾಚಿಕೆಯಾಗಬೇಕು: ಬಸನಗೌಡ ಪಾಟೀಲ್ ಯತ್ನಾಳ್

ಸಂವಿಧಾನದ ಆಶಯದಂತೆ ಸರ್ಕಾರ ನಡೆಯುತ್ತಿದೆ ಎನ್ನುವ ಪ್ರಿಯಾಂಕ್ ಖರ್ಗೆಗೆ ನಾಚಿಕೆಯಾಗಬೇಕು: ಬಸನಗೌಡ ಪಾಟೀಲ್ ಯತ್ನಾಳ್

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 04, 2023 | 5:23 PM

ಕೋಲಾರ ಒಬ್ಬ ಚುನಾಯಿತ ಸಂಸತ್ ಸದಸ್ಯನ ಜೊತೆ ಅಲ್ಲಿನ ಪೊಲೀಸ್ ವರಿಷ್ಠಾಧಿಕಾರಿ ಶಿಷ್ಟಾಚಾರವನ್ನು ಕಡೆಗಣಿಸಿ ಗೂಂಡಾನಂತೆ ವರ್ತಿಸುತ್ತಾರೆ. ಅವರೊಬ್ಬ ದಲಿತ ನಾಯಕನಾಗಿದ್ದರೂ ಪ್ರಿಯಾಂಕ್ ಖರ್ಗೆ ತುಟಿ ಬಿಚ್ಚಲ್ಲ. ತಾಲಿಬಾನಿಗಳಂತೆ ವರ್ತಿಸುತ್ತಿರುವ ಸಿದ್ದರಾಮಯ್ಯ ಸರ್ಕಾರ ಅಂತ್ಯಗೊಳ್ಳುವ ದಿನಗಳು ಆರಂಭಗೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಬೆಂಗಳೂರು: ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತಾಡಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal), ಶಿವಮೊಗ್ಗ ಗಲಭೆಗೆ ವಿಷಯದಲ್ಲಿ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಹೇಳಿದರು. ರಾಜ್ಯದೆಲ್ಲಡೆ ತಾನು ಹಲವಾರು ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಸಾವಿರಾರು ಜನ ಅವುಗಳಲ್ಲಿ ಭಾಗಿಯಾಗಿದ್ದರೂ ಒಂದೇ ಒಂದು ಅಹಿತಕರಕ ಘಟನೆ ಜರುಗಿಲ್ಲ. ಆದರೆ ಶಾಂತಿ ಸಂದೇಶ ಸಾರಿದವರ ಹುಟ್ಟುಹಬ್ಬದ ಮೆರವಣಿಗೆಯಲ್ಲಿ ಚಾಕು, ಚೂರಿ, ಖಡ್ಗಗಳು ಝಳಪಳಿಸಿದವು ಎಂದು ಯತ್ನಾಳ್ ಹೇಳಿದರು. ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಸರ್ಕಾರ ನಡೆಸುತ್ತಿದ್ದೇವೆ ಅಂತ ನಾಚಿಕೆ ಬಿಟ್ಟು ಹೇಳುತ್ತಾರೆ, ಇಷ್ಟೆಲ್ಲ ಗಲಾಟೆ ನಡೆದರೂ ಅವರು ನಾಪತ್ತೆ. ಸನಾತನ ಧರ್ಮದ ಅವಹೇಳನ ನಡೆದಾಗ ಸಮರ್ಥನೆಗೆ ಪ್ರಿಯಾಂಕ್ ಮತ್ತು ಅವರ ತಂದೆ ಮಲ್ಲಿಕಾರ್ಜನ ಖರ್ಗೆ (Mallikarjun Kharge) ಇಬ್ಬರೂ ಕಾಣಿಸಿಕೊಳ್ಳುತ್ತಾರೆ ಎಂದು ಯತ್ನಾಳ್ ತಿವಿದರು. ಕೋಲಾರ ಒಬ್ಬ ಚುನಾಯಿತ ಸಂಸತ್ ಸದಸ್ಯನ ಜೊತೆ ಅಲ್ಲಿನ ಪೊಲೀಸ್ ವರಿಷ್ಠಾಧಿಕಾರಿ ಶಿಷ್ಟಾಚಾರವನ್ನು ಕಡೆಗಣಿಸಿ ಗೂಂಡಾನಂತೆ ವರ್ತಿಸುತ್ತಾರೆ. ಅವರೊಬ್ಬ ದಲಿತ ನಾಯಕನಾಗಿದ್ದರೂ ಪ್ರಿಯಾಂಕ್ ಖರ್ಗೆ ತುಟಿ ಬಿಚ್ಚಲ್ಲ. ತಾಲಿಬಾನಿಗಳಂತೆ ವರ್ತಿಸುತ್ತಿರುವ ಸಿದ್ದರಾಮಯ್ಯ ಸರ್ಕಾರ ಅಂತ್ಯಗೊಳ್ಳುವ ದಿನಗಳು ಆರಂಭಗೊಂಡಿರುವಿದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ