ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಯೋಗ್ಯನನ್ನು ನೇಮಕ ಮಾಡಬೇಕು, ಶಿವಕುಮಾರ್ ಒಬ್ಬ ಅಯೋಗ್ಯ: ಕೆ ಎಸ್ ಈಶ್ವರಪ್ಪ
ಕಾಂಗ್ರೆಸ್ ಸರ್ಕಾರ ಭಾಗವಾಗಿರುವ ಕೆಲವರು ಈಗಾಗಲೇ ಮೂರು ಉಪ ಮುಖ್ಯಮಂತ್ರಿಗಳು ಬೇಕೆಂದು ಬೇಡಿಕೆ ಮುಂದಿಟ್ಟಿದ್ದಾರೆ ಎಂದ ಈಶ್ವರಪ್ಪ, ಅವರು ಎಷ್ಟು ಡಿಸಿಎಂ ಗಳನ್ನಾದರೂ ಮಾಡಿಕೊಳ್ಳಲಿ ಆದರೆ ಪ್ರಸ್ತುತ ಉಪ ಮುಖ್ಯಮಂತ್ರಿಯನ್ನು ಕೂಡಲೇ ತೆಗೆದುಹಾಕಿ ಅವರ ಜಾಗದಲ್ಲಿ ಒಬ್ಬ ಯೋಗ್ಯ ಹಾಗೂ ಪ್ರಾಮಾಣಿಕ ನಾಯಕನನ್ನು ನೇಮಕ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುವುದಾಗಿ ಹೇಳಿದರು.
ಶಿವಮೊಗ್ಗ: ನಗರದಲ್ಲಿಂದು ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದ ಹಿರಿಯ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ (KS Eshwarappa) ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು. ಕೊಲೆಗಡುಕರನ್ನು, ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗುವವರನ್ನು, ಹಿಂಸೆಗೆ ಪ್ರಚೋದನೆ ನೀಡುವವರನ್ನು, ಹಿಂದೂ ಕಾರ್ಯರ್ತರ (Hindu activists) ಹತ್ಯೆಗೈದು ಜೈಲಿನಲ್ಲಿದ್ದವರನ್ನು ಬಿಡುಗಡೆ ಮಾಡಬೇಕೆಂದು ಪತ್ರ ಬರೆಯುವ ಶಿವಕುಮಾರ್ ಗೆ ನಿಸ್ಸಂದೇಹವಾಗಿ ತಲೆ ಸರಿಯಿಲ್ಲ ಎಂದು ಈಶ್ವರಪ್ಪ ಹೇಳಿದರು. ಕಾಂಗ್ರೆಸ್ ಸರ್ಕಾರ ಭಾಗವಾಗಿರುವ ಕೆಲವರು ಈಗಾಗಲೇ ಮೂರು ಉಪ ಮುಖ್ಯಮಂತ್ರಿಗಳು ಬೇಕೆಂದು ಬೇಡಿಕೆ ಮುಂದಿಟ್ಟಿದ್ದಾರೆ ಎಂದ ಈಶ್ವರಪ್ಪ, ಅವರು ಎಷ್ಟು ಡಿಸಿಎಂ ಗಳನ್ನಾದರೂ ಮಾಡಿಕೊಳ್ಳಲಿ ಆದರೆ ಪ್ರಸ್ತುತ ಉಪ ಮುಖ್ಯಮಂತ್ರಿಯನ್ನು ಕೂಡಲೇ ತೆಗೆದುಹಾಕಿ ಅವರ ಜಾಗದಲ್ಲಿ ಒಬ್ಬ ಯೋಗ್ಯ ಹಾಗೂ ಪ್ರಾಮಾಣಿಕ ನಾಯಕನನ್ನು ನೇಮಕ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುವುದಾಗಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ