ಯಾವುದೇ ಪ್ರಕರಣ ಹಿಂಪಡೆಯಬೇಕಾದರೆ ಒಂದು ಸುದೀರ್ಘ ಪ್ರಕ್ರಿಯೆ ನಡೆಯುತ್ತದೆ: ಜಿ ಪರಮೇಶ್ವರ್, ಗೃಹ ಸಚಿವ
ಹುಬ್ಳಳ್ಳಿ ಗಲಭೆ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರಕರಣ ಹಿಂಪಡೆಯುವಂತೆ ಸೂಚಿಸಿ ಪತ್ರ ಬರೆದಿರುವ ಬಗ್ಗೆ ಕೇಳಿದಾಗ ಸಚಿವ ಪರಮೇಶ್ವರ್, ಆದು ಹಾಗಲ್ಲ ಆದಕ್ಕಾಗಿ ಒಂದು ಸಮಗ್ರ ಪ್ರಕ್ರಿಯೆ ನಡೆಯಬೇಕಾಗುತ್ತದೆ; ಶಾಸಕರು ಅಥವಾ ಸಚಿವರು ಹಾಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದಾಗ ಅವರು ನನಗೆ ತಿಳಿಸುತ್ತಾರೆ, ನಾನು ಪ್ರಸ್ತಾಪವನ್ನು ಸಂಪುಟದ ಉಪ ಸಮಿತಿಯ ಮುಂದಿಡುತ್ತೇನೆ ಎಂದರು.
ಬೆಂಗಳೂರು: ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಗೃಹ ಸಚಿವ ಜಿ ಪರಮೇಶ್ವರ್ (G Parameshwara), ವಿಧಾನ ಸಭಾ ಚುನಾವಣೆ ಸಮಯದಲ್ಲಿ ಮತದಾರರ ಪಟ್ಟಿಯಲ್ಲಿ ಕಾನೂನುಬಾಹಿರವಾಗಿ ಹಸ್ತಕ್ಷೇಪ ನಡೆಸಿದ ಚಿಲುಮೆ ಹೆಸರಿನ ಸಂಸ್ಥೆ (Chilume organisation) ಮತ್ತು ಆದರಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಬಿಬಿಎಂಪಿ ಆಯುಕ್ತ ತುಷಾರ ಗಿರಿನಾಥ್ (BBMP commissioner Tushar Girinath) ವಿರುದ್ಧ ತನಿಖೆ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಆಗ ವಿರೋಧ ಪಕ್ಷವಾಗಿದ್ದ ನಾವೇ ತನಿಖೆಗೆ ಒತ್ತಾಯಿಸಿದ್ದು, ಆದರಲ್ಲಿ ತುಷಾರ್ ಗಿರಿನಾಥ್ ಇನ್ವಾಲ್ವ್ಮೆಂಟ್ ಬಗ್ಗೆ ಗೊತ್ತಿಲ್ಲ, ಪ್ರಕರಣ ಪ್ರಸ್ತುತವಾಗಿ ಯಾವ ಹಂತದಲ್ಲಿದೆ ಅಂತ ಗೊತ್ತಿಲ್ಲ, ಸಂಬಂಧಪಟ್ಟವರು ತನಿಖೆ ಮಾಡುತ್ತಾರೆ, ಗೃಹ ಇಲಾಖೆಗೆ ದೂರು ಬಂದರೆ ಪೊಲೀಸರು ತನಿಖೆ ನಡೆಸುತ್ತಾರೆ ಎಂದು ಹೇಳಿದರು.
ಹುಬ್ಳಳ್ಳಿ ಗಲಭೆ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರಕರಣ ಹಿಂಪಡೆಯುವಂತೆ ಸೂಚಿಸಿ ಪತ್ರ ಬರೆದಿರುವ ಬಗ್ಗೆ ಕೇಳಿದಾಗ ಸಚಿವ ಪರಮೇಶ್ವರ್, ಅದು ಹಾಗಲ್ಲ ಅದಕ್ಕಾಗಿ ಒಂದು ಸಮಗ್ರ ಪ್ರಕ್ರಿಯೆ ನಡೆಯಬೇಕಾಗುತ್ತದೆ; ಶಾಸಕರು ಅಥವಾ ಸಚಿವರು ಹಾಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದಾಗ ಅವರು ನನಗೆ ತಿಳಿಸುತ್ತಾರೆ, ನಾನು ಪ್ರಸ್ತಾಪವನ್ನು ಸಂಪುಟದ ಉಪ ಸಮಿತಿಯ ಮುಂದಿಡುತ್ತೇನೆ, ಸಮಿತಿಯು ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಆಯಾಮ ಮತ್ತು ಸೆಕ್ಷನ್ ಗಳನ್ನು ಪರಾಮರ್ಶಿಸುತ್ತದೆ. ನಂತರ ಅದನ್ನು ಕ್ಯಾಬಿನೆಟ್ ಕಳಿಸಲಾಗುತ್ತದೆ. ಸಂಪುಟ ಅದನ್ನು ಅಂಗೀಕರಿಸಿದರೆ ಅಮಾಯಕರ ಬಿಡುಗಡೆಯಾಗುತ್ತದೆ, ಅಲ್ಲೂ ಯಾರಾದರೂ ಆಕ್ಷೇಪವೆತ್ತಿದರೆ ಪ್ರಕರಣ ವಾಪಸ್ಸು ಹೋಗುತ್ತದೆ ಎಂದು ಪರಮೇಶ್ವರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ