ಶಿವಮೊಗ್ಗ ಗಲಾಟೆ; ಮೆರವಣಿಗೆಯಲ್ಲಿ ಜನ ಕತ್ತಿ, ಖಡ್ಗಗಳನ್ನೇನೂ ಹಿರಿದಿರಲಿಲ್ಲ: ಜಿ ಪರಮೇಶ್ವರ್, ಗೃಹ ಸಚಿವ
ಸಾಮಾನ್ಯವಾಗಿ ಇಂಥ ಸಂದರ್ಭಗಳಲ್ಲಿ ಪೊಲೀಸರು ಎರಡೂ ಸಮುದಾಯಗಳ ಜನರನ್ನು ಕರೆಸಿ ಗಲಾಟೆಗೆ ಅವಕಾಶ ನೀಡಬಾರದೆಂದು ಎಚ್ಚರಿಸಿರುತ್ತಾರೆ ಮತ್ತು ಗಲಾಟೆ ನಡೆಸಬಹುದಾದ ಶಂಕಿತ ವ್ಯಕ್ತಿಗಳನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದಿರುತ್ತಾರೆ ಎಂದು ಪರಮೇಶ್ವರ್ ಹೇಳಿದರು.
ಬೆಂಗಳೂರು: ರವಿವಾರದಂದು ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ (Eid Milad procession) ಸಂದರ್ಭದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಗೃಹ ಸಚಿವ ಜಿ ಪರಮೇಶ್ವರ್ (G Parameshwara) ಪ್ರತಿಕ್ರಿಯೆ ನೀಡಿದ್ದಾರೆ. ಕೆಲ ರಾಜಕೀಯ ನಾಯಕರು ಹೇಳಿಕೆ ನೀಡುತ್ತಿರುವ ಹಾಗೆ ಮೆರವಣಿಗೆ ಸಂದರ್ಭದಲ್ಲಿ ಜನ ಕೈಗಳಲ್ಲಿ ಕತ್ತಿ, ಖಡ್ಗ, ಗುರಾಣಿ ಮೊದಲಾದವುಗಳನ್ನೇನೂ ಹಿಡಿದಿರಲಿಲ್ಲ, ಮೆರವಣಿಗೆ ರಾಜ್ಯದ ಉಳಿದ ಭಾಗಗಳಲ್ಲಿ ಶಾಂತಿಯುತವಾಗಿ ನೆರವೇರಿದೆ, ಅದರೆ ಶಿವಮೊಗ್ಗದಲ್ಲಿ ಮಾತ್ರ ಕೆಲವರು ಸಂದರ್ಭದ ದುರುಪಯೋಗ (misuse) ಮಾಡಿಕೊಂಡಿದ್ದಾರೆ ಎಂದು ಪರಮೇಶ್ವರ್ ಹೇಳಿದರು. ಸಾಮಾನ್ಯವಾಗಿ ಇಂಥ ಸಂದರ್ಭಗಳಲ್ಲಿ ಪೊಲೀಸರು ಎರಡೂ ಸಮುದಾಯಗಳ ಜನರನ್ನು ಕರೆಸಿ ಗಲಾಟೆಗೆ ಅವಕಾಶ ನೀಡಬಾರದೆಂದು ಎಚ್ಚರಿಸಿರುತ್ತಾರೆ ಮತ್ತು ಗಲಾಟೆ ನಡೆಸಬಹುದಾದ ಶಂಕಿತ ವ್ಯಕ್ತಿಗಳನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದಿರುತ್ತಾರೆ ಎಂದು ಪರಮೇಶ್ವರ್ ಹೇಳಿದರು. ಮೆರವಣಿಗೆ ನಡೆಯುವಾಗ ಕೆಲವರು ಕಲ್ಲೆಸೆದಿದ್ದಾರೆ ಮತ್ತು ಅದಕ್ಕೆ ಪ್ರತಿಯಾಗಿ ಮೆರವಣಿಗೆ ಮುಗಿದ ಬಳಿಕ ಇವರು ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಪರಮೇಶ್ವರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ