ಮೈಸೂರು ಕೆಡಿಪಿ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ವೇದಿಕೆ ಹಂಚಿಕೊಂಡ ಸಂಸದ ಪ್ರತಾಪ್ ಸಿಂಹ ಸಂಕೋಚದ ಮುದ್ದೆಯಾಗಿದ್ದರು!
ಪ್ರತಾಪ್ ಸಿಂಹ ಮತ್ತು ಸಿದ್ದರಾಮಯ್ಯ ನಡುವೆ ನೇರ ಕಾಂಟ್ಯಾಕ್ಟ್ ಅಗಲಿ ಅಂತ ಮಹಾದೇವಪ್ಪ ತಮ್ಮ ಕುರ್ಚಿಯನ್ನು ಹಿಂದಕ್ಕೆಳೆದುಕೊಂಡಾಗ ಸಂಕೋಚ ಮುದ್ದೆಯಾಗಿದ್ದ ಸಂಸದರು ಮುಖ್ಯಮಂತ್ರಿಯವರ ಕಡೆ ನೋಡಿ, ‘ಸರ್, ನೀವು ನನ್ನನ್ನು ಬೈತೀರಾ ಅಂದ್ಕೊಂಡಿದ್ದೆ!’ ಅನ್ನುತ್ತಾರೆ.
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಇಂದು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೆಡಿಪಿ ಸಭೆ ನಡೆಸಿದಾಗ ವೇದಿಕೆಯ ಮೇಲೆ ಕಾಂಗ್ರೆಸ್ ಸಚವರು ಹಾಗೂ ಶಾಸಕರ ಜೊತೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸಹ ಇದ್ದರು. ಸಿದ್ದರಾಮಯ್ಯ ಬಲಪಕ್ಕದಲ್ಲಿದ್ದ ಸಚಿವ ಹೆಚ್ ಸಿ ಮಹಾದೇವಪ್ಪ (HC Mahadevappa) ಬಲಭಾಗದಲ್ಲಿ ಕುಳಿತಿದ್ದ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ (Pratap Simha) ಬಹಳ ಮುಜುಗರ ಅನುಭಸುಸಿತ್ತಿದ್ದರು. ಅವರನ್ನು ಕುರಿತು ಯಾರೋ ಒಬ್ಬರು ಏನೋ ಕಾಮೆಂಟ್ ಮಾಡಿದಾಗ ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ನಗುತ್ತಾರೆ. ಪ್ರತಾಪ್ ಸಿಂಹ ಮತ್ತು ಸಿದ್ದರಾಮಯ್ಯ ನಡುವೆ ನೇರ ಕಾಂಟ್ಯಾಕ್ಟ್ ಅಗಲಿ ಅಂತ ಮಹಾದೇವಪ್ಪ ತಮ್ಮ ಕುರ್ಚಿಯನ್ನು ಹಿಂದಕ್ಕೆಳೆದುಕೊಂಡಾಗ ಸಂಕೋಚ ಮುದ್ದೆಯಾಗಿದ್ದ ಸಂಸದರು ಮುಖ್ಯಮಂತ್ರಿಯವರ ಕಡೆ ನೋಡಿ, ‘ಸರ್, ನೀವು ನನ್ನನ್ನು ಬೈತೀರಾ ಅಂದ್ಕೊಂಡಿದ್ದೆ!’ ಅನ್ನುತ್ತಾರೆ. ಅದಕ್ಕೆ ಸಿದ್ದರಾಮಯ್ಯ ಇಲ್ಲವೆನ್ನುವಂತೆ ಕೈಯಾಡಿಸಿ ನಗುತ್ತಾ, ‘ಛೇ ಛೆ ಹಾಗೇನೂ ಇಲ್ಲ’ ಅನ್ನುತ್ತಾರೆ. ಮುಖ್ಯಮಂತ್ರಿ ಮತ್ತೇನನ್ನೋ ಹೇಳುತ್ತಾರೆ, ಆದರದು ಸ್ಪಷ್ಟವಾಗಿ ಕೇಳಿಸುವುದಿಲ್ಲ. ಶಾಸಕರಾದ ತನ್ವೀರ್ ಸೇಠ್, ಅನಿಲ್ ಚಿಕ್ಕಮಾದು, ಜಿ.ಡಿ.ಹರೀಶ್ ಗೌಡ, ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೇರಿ ಹಲವಾರು ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಸಚಿವ ಕೆ.ವೆಂಕಟೇಶ್ ಹಾಗೂ ಶಾಸಕ ಜಿ.ಟಿ.ದೇವೇಗೌಡ ಗೈರುಹಾಜರಿ ಎದ್ದು ಕಾಣುತಿತ್ತು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ