ಪಾನಿಪುರಿ ತಿಂದು ಹಣ ಕೇಳಿದ್ದಕ್ಕೆ ನೆಲಮಂಗಲದಲ್ಲಿ ಪುಡಿ ರೌಡಿಯ ಆವಾಜ್, ಜನರ ಎದುರು ಷರ್ಟ್ ಬಿಚ್ಚಿ ದರ್ಪ!

ಪಾನಿಪುರಿ ತಿಂದು ಹಣ ಕೇಳಿದ್ದಕ್ಕೆ ನೆಲಮಂಗಲದಲ್ಲಿ ಪುಡಿ ರೌಡಿಯ ಆವಾಜ್, ಜನರ ಎದುರು ಷರ್ಟ್ ಬಿಚ್ಚಿ ದರ್ಪ!

TV9 Web
| Updated By: ಸಾಧು ಶ್ರೀನಾಥ್​

Updated on: Aug 28, 2023 | 1:29 PM

ರಂಜಿತ್ ಎಂಬಾತ ನೆಲಮಂಗಲದಲ್ಲಿ ಪುನೀತ್ ಅವರ ಪಾನಿಪೂರಿ ಅಂಗಡಿಯನ್ನೇ ಧ್ವಂಸ ಮಾಡಿದ್ದಾನೆ. ವಾಜರಹಳ್ಳಿಯ ರಂಜಿತ್ ಇತ್ತೀಚೆಗೆ ರಾಬರಿ ಕೇಸ್ ನಲ್ಲಿ ಜೈಲಿಗೆ ಹೋಗಿ ಬಂದಿದ್ದ. ಅದ್ರೂ ಬುದ್ಧಿ ಕಲಿಯದೆ ಪುಂಡಾಟಿಕೆ ಮೆ್ರೆದಿದ್ದಾನೆ. ಅರೋಪಿಯ ಈ ಕುಕೃತ್ಯ ಸಿಸಿಟಿವಿ ಕ್ಯಾಮಾರದಲ್ಲಿ ಸೆರೆಯಾಗಿದೆ. ನೆಲಮಂಗಲ ಪೊಲೀಸರು ಅರೋಪಿ ಪತ್ತೆಗಾಗಿ ಶೋಧ ನಡೆಸಿದ್ದಾರೆ.

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ (Nelamangala) ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ಯಾ..? ಇಲ್ಲೊಂದು ಘಟನೆ ನಡೆದಿದೆ ನೋಡಿ. ಪಾನಿಪೂರಿ (panipuri) ತಿಂದು ಹಣ (money) ಕೇಳಿದ್ದಕ್ಕೆ ಜೈಲ್ ರಿಟರ್ನ್ಡ್​​ ದುಷ್ಕರ್ಮಿಯೊಬ್ಬ ಅವಾಜ್ ಹಾಕಿದ್ದಾನೆ. ಏಯ್ ನಾನ್ಯಾರು ಗೊತ್ತಾ..? ನನ್ನ ಬಳಿಯೇ ಹಣ ಕೇಳುತ್ತೀಯಾ ಎಂದು ಪುಡಿ ರೌಡಿ ಅವಾಜ್ ಹಾಕಿದ್ದಾನೆ. ಪ್ರಶ್ನೆ ಮಾಡಿದ ಜನರ ಎದುರು ಷರ್ಟ್ ಬಿಚ್ಚಿ ದರ್ಪ ತೋರಿಸಿದ್ದಾನೆ.

ರಂಜಿತ್ ಎಂಬಾತ ಪುನೀತ್ ಅವರ ಪಾನಿಪೂರಿ ಅಂಗಡಿಯನ್ನೇ ಧ್ವಂಸ ಮಾಡಿದ್ದಾನೆ. ವಾಜರಹಳ್ಳಿಯ ರಂಜಿತ್ ಇತ್ತೀಚೆಗೆ ರಾಬರಿ ಕೇಸ್ ನಲ್ಲಿ ಜೈಲಿಗೆ ಹೋಗಿ ಬಂದಿದ್ದ. ಅದ್ರೂ ಬುದ್ಧಿ ಕಲಿಯದೆ ಪುಂಡಾಟಿಕೆ ಮೆ್ರೆದಿದ್ದಾನೆ. ಅರೋಪಿಯ ಈ ಕುಕೃತ್ಯ ಸಿಸಿಟಿವಿ ಕ್ಯಾಮಾರದಲ್ಲಿ ಸೆರೆಯಾಗಿದೆ. ನೆಲಮಂಗಲ ಪೊಲೀಸರು ಅರೋಪಿ ಪತ್ತೆಗಾಗಿ ಶೋಧ ನಡೆಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ