ಮೈಸೂರಲ್ಲಿ ಆ. 30 ರಂದು ಗ್ರಹಲಕ್ಷ್ಮಿ ಯೋಜನೆ ಜಾರಿಗೆ ದೆಹಲಿ ಗಣ್ಯರು, 3-ದಿನ ಮೊದಲೇ ನಗರಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ!
ಲೋಕ ಸಭಾ ಚುನಾವಣೆ ಕೇವಲ ಬೆರಳೆಣಿಕೆಯಷ್ಟು ತಿಂಗಳು ಮಾತ್ರ ದೂರ ಇರೋದ್ರಿಂದ ಗೃಹಲಕ್ಷ್ಮಿಯೋಜನೆ ಉದ್ಘಾಟನೆಯನ್ನು ಕಾಂಗ್ರೆಸ್ ಪಕ್ಷ ತನ್ನ ಲಾಭಕ್ಕೆ ಬಳಸಿಕೊಳ್ಳಲಿದೆ. ದೆಹಲಿ ಗಣ್ಯರಲ್ಲದೆ ರಾಜ್ಯ ಸಚಿವ ಸಂಪುಟದ ಹಲವಾರರು ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಲೋಕ ಸಭಾ ಚುನಾವಣೆಯಲ್ಲಿ ಕನಿಷ್ಟ 20 ಸೀಟುಗಳನ್ನು ಕರ್ನಾಟಕದಿಂದ ಗೆಲ್ಲಲೇಬೇಕೆಂದು ಪಕ್ಷದ ಹೈಕಮಾಂಡ್ ರಾಜ್ಯ ಕಾಂಗ್ರೆಸ್ ನಾಯಕರಿಗೆ ಟಾರ್ಗೆಟ್ ನೀಡಿದೆ.
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮೂರು ದಿನಗಳ ಪ್ರವಾಸದ ಅಂಗವಾಗಿ ಇಂದು ತಮ್ಮ ತವರು ಜಿಲ್ಲೆ ಮೈಸೂರಿಗೆ ಆಗಮಿಸಿದರು. ನಗರಕ್ಕೆ ಅವರ ಪ್ರವೇಶ ಹೇಗಿತ್ತು ಅನ್ನೋದನ್ನು ವಿಡಿಯೋದಲ್ಲಿ ನೋಡಬಹುದು. ಎಂದಿನಂತೆ ಅವರೊಂದಿಗೆ 25-30 ವಾಹನಗಳ ಬೆಂಗಾವಲು (convoy) ಪಡೆ! ನಾವು ಈಗಾಗಲೇ ವರದಿ ಮಾಡಿರುವಂತೆ ಆಗಸ್ಟ್ 30 ರಂದು ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳಲ್ಲೊಂದಾದ ಗೃಹ ಲಕ್ಷ್ಮೀ ಯೋಜನೆಯ ಉದ್ಘಾಟನೆ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಮತ್ತು ವಯನಾಡ್ ಸಂಸದ ರಾಹುಲ್ ಗಾಂಧಿ (Rahul Gandhi) ಭಾಗವಹಿಸಲಿದ್ದಾರೆ. ಲೋಕ ಸಭಾ ಚುನಾವಣೆ ಕೇವಲ ಬೆರಳೆಣಿಕೆಯಷ್ಟು ತಿಂಗಳು ಮಾತ್ರ ದೂರ ಇರೋದ್ರಿಂದ ಗೃಹಲಕ್ಷ್ಮಿಯೋಜನೆ ಉದ್ಘಾಟನೆಯನ್ನು ಕಾಂಗ್ರೆಸ್ ಪಕ್ಷ ತನ್ನ ಲಾಭಕ್ಕೆ ಬಳಸಿಕೊಳ್ಳಲಿದೆ. ದೆಹಲಿ ಗಣ್ಯರಲ್ಲದೆ ರಾಜ್ಯ ಸಚಿವ ಸಂಪುಟದ ಹಲವಾರರು ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಲೋಕ ಸಭಾ ಚುನಾವಣೆಯಲ್ಲಿ ಕನಿಷ್ಟ 20 ಸೀಟುಗಳನ್ನು ಕರ್ನಾಟಕದಿಂದ ಗೆಲ್ಲಲೇಬೇಕೆಂದು ಪಕ್ಷದ ಹೈಕಮಾಂಡ್ ರಾಜ್ಯ ಕಾಂಗ್ರೆಸ್ ನಾಯಕರಿಗೆ ಟಾರ್ಗೆಟ್ ನೀಡಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ