ಹಾಸನ: ಕೋಳಿ ಶೆಡ್​ಗೆ ನುಗ್ಗಿ 40ಕ್ಕೂ ಹೆಚ್ಚು ಕೋಳಿ, ನಾಯಿಗಳ ಬಲಿ ಪಡೆದಿದ್ದ ಚಿರತೆ ಕೊನೆಗೂ ಬೋನಿಗೆ ಬಿತ್ತು

ಹಾಸನ‌ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಡಿ ಸಾತೇನಹಳ್ಳಿಯ ಶಂಕರೇಗೌಡ ಎಂಬುವವರಿಗೆ ಸೇರಿದ್ದ ಕೋಳಿ ಫಾರಂಗೆ ಚಿರತೆ ನುಗ್ಗಿತ್ತು. 40ಕ್ಕೂ ಹೆಚ್ಚು ಕೋಳಿಗಳ ಮೇಲೆ ದಾಳಿ ನಡೆಸಿ ಕೊಂದು ಹಾಕಿತ್ತು. ಈ ವೇಳೆ ರೈತರು ಅರಣ್ಯ ಇಲಾಖೆ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಹಾಸನ: ಕೋಳಿ ಶೆಡ್​ಗೆ ನುಗ್ಗಿ 40ಕ್ಕೂ ಹೆಚ್ಚು ಕೋಳಿ, ನಾಯಿಗಳ ಬಲಿ ಪಡೆದಿದ್ದ ಚಿರತೆ ಕೊನೆಗೂ ಬೋನಿಗೆ ಬಿತ್ತು
ಚಿರತೆ ಸೆರೆ
Follow us
ಮಹೇಶ್ ಇ, ಭೂಮನಹಳ್ಳಿ
| Updated By: ಆಯೇಷಾ ಬಾನು

Updated on: Oct 02, 2023 | 7:17 PM

ಹಾಸನ, ಅ.02: ಹಾಡಹಗಲೇ ಕೋಳಿ ಶೆಡ್​ಗೆ ನುಗ್ಗಿ 40ಕ್ಕೂ ಹೆಚ್ಚು ಕೋಳಿ ಬಲಿ ಪಡೆದ ಚಿರತೆಯನ್ನು (Leopard)  ಸತತ ಮೂರು ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ ಹಿಡಿಯಲಾಗಿದೆ. ಕೋಳಿ ಫಾರಂ ಬಾಗಿಲಿಗೆ ಬೋನ್ ಇಟ್ಟು ಚಿರತೆ ಸೆರೆ ಹಿಡಿಯಲಾಗಿದೆ. ಹಾಸನ‌ (Hassan) ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಡಿ ಸಾತೇನಹಳ್ಳಿಯ ಶಂಕರೇಗೌಡ ಎಂಬುವವರಿಗೆ ಸೇರಿದ್ದ ಕೋಳಿ ಫಾರಂಗೆ ಚಿರತೆ ನುಗ್ಗಿತ್ತು. 40ಕ್ಕೂ ಹೆಚ್ಚು ಕೋಳಿಗಳ ಮೇಲೆ ದಾಳಿ ನಡೆಸಿ ಕೊಂದು ಹಾಕಿತ್ತು. ಈ ವೇಳೆ ರೈತರು ಅರಣ್ಯ ಇಲಾಖೆ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಜನರಿಂದ ಚಿರತೆ ಹಿಡಿಯಲೇಬೇಕೆಂಬ ಒತ್ತಡ ಕೇಳಿ ಬಂದ ನಂತರ ಅರಣ್ಯ ಇಲಾಖೆ ಸಿಬ್ಬಂದಿ ಕೋಳಿ ಶೆಡ್​ಗೆ ಬೋನ್ ಇಟ್ಟಿದ್ದರು. ಮತ್ತೊಂಮ್ಮೆ ಕೋಳಿ ಭೇಟೆಗೆ ಬಂದ ಚಿರತೆ ಬೋನ್​ಗೆ ಬಿದ್ದಿದೆ. ಕೋಳಿ ಶೆಡ್‌ವೊಳಗೆ ಚಿರತೆಯನ್ನು ಕೂಡಿ ಹಾಕಲಾಗಿದೆ. ಸದ್ಯ ಈಗ ಅಧಿಕಾರಿಗಳು ಚಿರತೆಯನ್ನು ಕೊಂಡೊಯ್ದಿದ್ದಾರೆ.

ಕೋಳಿಗೆ ಆಹಾರ ಹಾಕಲು ಬಂದಾಗ ಘಟನೆ ಬೆಳಕಿಗೆ

ಇನ್ನು ಇಂದು ಮಧ್ಯಾಹ್ನ ಕೋಳಿಗೆ ಅಹಾರ ಹಾಕಲು ಬಂದಾಗ ಚಿರತೆ ಕಾಣಿಸಿಕೊಂಡಿತ್ತು. ಅದೃಷ್ಟವಶಾತ್ ಕೋಳಿ ಫಾರಂ‌ ಮಾಲೀಕ ಶಂಕರೇಗೌಡ ಪ್ರಾಣಾಪಾಯದಿಂದ ಪಾರಾಗಿದ್ದರು. ಈ ವೇಳೆ ಡಿ ಸಾತೇನಹಳ್ಳಿ ಭಾಗದಲ್ಲಿ ಸಾಕಷ್ಟು ಆತಂಕ ಸೃಷ್ಟಿಯಾಗಿತ್ತು. ಜಾನುವಾರುಗಳನ್ನ ಬಲಿ ಪಡೆಯುತ್ತಿರುವ ಚಿರತೆಗಳ ಸೆರೆಗೆ ಜನರು ಆಗ್ರಹಿಸಿದ್ದರು. ಈಗ ಕೋಳಿ ಬಲಿ ಪಡೆದ ಚಿರತೆ ಸೆರೆಯಾಗಿದೆ.

ಇದನ್ನೂ ಓದಿ: ಮುಳಬಾಗಿಲು -ರೈತನ ಮೇಲೆ ಚಿರತೆ ದಾಳಿ ರೈತನಿಗೆ ಗಂಭೀರ ಗಾಯ, ಹಾಸನದಲ್ಲಿ ಮನೆ ಮುಂದೆ ಕಟ್ಟಿಹಾಕಿದ್ದ ನಾಯಿಯನ್ನು ಕೊಂದು ತಿಂದ ಚಿರತೆ

ನಾಯಿಯನ್ನು ಕೊಂದು ತಿಂದ ಚಿರತೆ

ಮತ್ತೊಂದೆಡೆ ಹಾಸನ‌ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಟಿ. ಮಾಯಗೌಡನಹಳ್ಳಿ ಗ್ರಾಮದಲ್ಲಿಯೂ ಇಂತಹ ಘಟನೆ ನಡೆದಿದೆ. ಆಹಾರ ಅರಸಿ ಮನೆಯ ಆವರಣಕ್ಕೆ ನುಗ್ಗಿದ ಚಿರತೆಯೊಂದು ಮನೆಯ ಮುಂದೆ ಕಟ್ಟಿ ಹಾಕಿದ್ದ ನಾಯಿಯನ್ನು ಕೊಂದು ತಿಂದಿತ್ತು. ಗ್ರಾಮದ ನೂತನ್ ಎಂಬುವವರ ಮನೆಯ ಮುಂದೆ ಕಟ್ಟಿ ಹಾಕಿದ್ದ ನಾಯಿಯನ್ನು ಹೊತ್ತೊಯ್ಯಲು ಚಿರತೆ ಹರಸಾಹಸ ಪಟ್ಟಿತ್ತು. ನಾಯಿಯನ್ನು ಕಟ್ಟಿ ಹಾಕಿದ್ದರಿಂದ ಅಲ್ಲಿಯೇ ಅದನ್ನು ಸಾಯಿಸಿ, ತಿಂದುಕೊಂಡು ಹೋಗಿತ್ತು.

ಹಾಸನಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ