ಮುಳಬಾಗಿಲು -ರೈತನ ಮೇಲೆ ಚಿರತೆ ದಾಳಿ ರೈತನಿಗೆ ಗಂಭೀರ ಗಾಯ, ಹಾಸನದಲ್ಲಿ ಮನೆ ಮುಂದೆ ಕಟ್ಟಿಹಾಕಿದ್ದ ನಾಯಿಯನ್ನು ಕೊಂದು ತಿಂದ ಚಿರತೆ

ಹಾಸನದ ಗ್ರಾಮವೊಂದರಲ್ಲಿ ನೂತನ್ ಎಂಬುವವರ ಮನೆಯ ಮುಂದೆ ಕಟ್ಟಿ ಹಾಕಿದ್ದ ನಾಯಿಯನ್ನು ಹೊತ್ತೊಯ್ಯಲು ಚಿರತೆ ಹರಸಾಹಸ ಪಟ್ಟಿದೆ. ನಾಯಿಯನ್ನು ಕಟ್ಟಿ ಹಾಕಿದ್ದರಿಂದ ಅಲ್ಲಿಯೇ ಅದನ್ನು ಸಾಯಿಸಿ, ತಿಂದುಕೊಂಡು ಹೋಗಿದೆ ಚಿರತೆ. ಒಂದು ತಿಂಗಳ ಹಿಂದೆ ಇದೇ ನೂತನ್ ಅವರ ಮನೆಯ ಸಾಕು ನಾಯಿಯನ್ನು ಚಿರತೆ ತಿಂದು ಹಾಕಿತ್ತು ಎಂಬುದು ಆತಂಕಕಾರಿಯಾಗಿದೆ.

ಮುಳಬಾಗಿಲು -ರೈತನ ಮೇಲೆ ಚಿರತೆ ದಾಳಿ ರೈತನಿಗೆ ಗಂಭೀರ ಗಾಯ, ಹಾಸನದಲ್ಲಿ ಮನೆ ಮುಂದೆ ಕಟ್ಟಿಹಾಕಿದ್ದ ನಾಯಿಯನ್ನು ಕೊಂದು ತಿಂದ ಚಿರತೆ
ಮುಳಬಾಗಿಲು -ರೈತನ ಮೇಲೆ ಚಿರತೆ ದಾಳಿ ರೈತನಿಗೆ ಗಂಭೀರ ಗಾಯ, ಹಾಸನದಲ್ಲಿ ಮನೆ ಮುಂದೆ ಕಟ್ಟಿಹಾಕಿದ್ದ ನಾಯಿಯನ್ನು ಕೊಂದು ತಿಂದ ಚಿರತೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Sep 30, 2023 | 11:24 AM

ಕೋಲಾರ/ಹಾಸನ: ಆಹಾರವರಸಿ ನಾಡಿನತ್ತ ಬರುತ್ತಿರುವ ಚಿರತೆಗಳ ಹಾವಳಿ (Leopard attack) ಹೆಚ್ಚಾಗುತ್ತಿದೆ. ಹಾಸನ ಮತ್ತು ಕೋಲಾರ (Hassan, Kolar) ಜಿಲ್ಲೆಗಳಲ್ಲಿ ಇಂತಹ ಘಟನೆಗಳು ನಿನ್ನೆ ಶುಕ್ರವಾರ ನಡೆದಿವೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಚೊಕ್ಕದೊಡ್ಡಿ ಗ್ರಾಮದ ಬಳಿ ಜಮೀನಿನಲ್ಲಿ ರೈತನ ಮೇಲೆ ಚಿರತೆ ದಾಳಿ ಮಾಡಿದೆ. ಗಾಯಾಳು ರೈತ ಜಗನ್ನಾಥ್​ಗೆ ಮುಳಬಾಗಿಲು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 2 ದಿನಗಳ ಹಿಂದೆಯಷ್ಟೇ ಅತ್ತಿಕುಂಟೆ ಗ್ರಾಮದಲ್ಲಿ ಚಿರತೆಯೊಂದು ಹಸುವನ್ನು ತಿಂದುಹಾಕಿದ್ದ ಘಟನೆ ನಡೆದಿತ್ತು ಎಂಬುದು ಗಮನಾರ್ಹ. ಚಿರತೆ ಮರವೇರಿ ಕುಳಿತು ಹೊಲದಲ್ಲಿ ಕೆಲಸಕ್ಕೆಂದು ಬಂದ ರೈತನ ಮೇಲೆ ದಾಳಿ ಮಾಡಿದೆ. ಗ್ರಾಮದಲ್ಲಿ ಆತಂಕ ಮನೆ ಮಾಡಿದ್ದು, ಗ್ರಾಮಕ್ಕೆ ಅರಣ್ಯಾಧಿಕಾರಿಗಳ ತಂಡ ಭೇಟಿ ನೀಡಿದೆ.

ಇನ್ನು ಹಾಸನ‌ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಟಿ. ಮಾಯಗೌಡನಹಳ್ಳಿ ಗ್ರಾಮದಲ್ಲಿಯೂ ಇಂತಹ ಘಟನೆ ನಡೆದಿದೆ. ಆಹಾರ ಅರಸಿ ಮನೆಯ ಆವರಣಕ್ಕೆ ನುಗ್ಗಿದ ಚಿರತೆಯೊಂದು ಮನೆಯ ಮುಂದೆ ಕಟ್ಟಿ ಹಾಕಿದ್ದ ನಾಯಿಯನ್ನು ಕೊಂದು ತಿಂದಿದೆ.

ಗ್ರಾಮದ ನೂತನ್ ಎಂಬುವವರ ಮನೆಯ ಮುಂದೆ ಕಟ್ಟಿ ಹಾಕಿದ್ದ ನಾಯಿಯನ್ನು ಹೊತ್ತೊಯ್ಯಲು ಚಿರತೆ ಹರಸಾಹಸ ಪಟ್ಟಿದೆ. ನಾಯಿಯನ್ನು ಕಟ್ಟಿ ಹಾಕಿದ್ದರಿಂದ ಅಲ್ಲಿಯೇ ಅದನ್ನು ಸಾಯಿಸಿ, ತಿಂದುಕೊಂಡು ಹೋಗಿದೆ ಚಿರತೆ.

ಕಳೆದ ಒಂದು ತಿಂಗಳ ಹಿಂದೆ ಇದೇ ನೂತನ್ ಅವರ ಮನೆಯ ಸಾಕು ನಾಯಿಯನ್ನು ಚಿರತೆ ತಿಂದು ಹಾಕಿತ್ತು. ಇದೀಗ, ಎರಡನೇ ಬಾರಿಯೂ ಅವರ ಮನೆಯ ಬಳಿ ಬಂದು ನಾಯಿಯನ್ನು ತಿಂದು ಹಾಕಿರುವುದು ತೀವ್ರ ಆತಂಕಕಾರಿಯಾಗಿದೆ.

ಚಿರತೆ ನಾಯಿಯ ಮೇಲೆ ದಾಳಿ ಮಾಡೋ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಂದು ಶನಿವಾರ ಬೆಳಿಗ್ಗೆಯೂ ಮನೆಯ ಸಮೀಪ ಚಿರತೆ ಕಾಣಿಸಿಕೊಂಡಿದೆ. ಹಾಗಾಗಿ ಚಿರತೆಯ ಹಾವಳಿಯಿಂದ ಕುಟುಂಬಸ್ಥರು ಆತಂಕಗೊಂಡಿದ್ದಾರೆ. ಕೂಡಲೇ ಚಿರತೆಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಒತ್ತಾಯ ಮಾಡಿದ್ದಾರೆ.

Also Read: ಕೊಲ್ಲೂರು: ತನ್ನ ಜಮೀನಿನೊಳಕ್ಕೆ ಬಂದ ಹತ್ತಾರು ಹಸುಗಳಿಗೆ ಗುಂಡಿಕ್ಕಿದ ನಿರ್ದಯಿ ಮನುಷ್ಯ, ಅಸು ನೀಗಿದ ನಾಲ್ಕು ಹಸುಗಳು

ಹಾಸನ ತಾಲ್ಲೂಕಿನ ಹಂಚಿಹಳ್ಳಿ ಗ್ರಾಮದಲ್ಲಿಯೂ ಚಿರತೆ ಹಾವಳಿ ಕಂಡುಬಂದಿದೆ. ಮನೆ ಮುಂದೆ ಕಟ್ಟಿಹಾಕಿದ್ದ ಕರುವನ್ನು ಚಿರತೆ ಕೊಂದುಹಾಕಿದೆ. ವೆಂಕಟೇಶ್ ಎಂಬುವವರಿಗೆ ಸೇರಿದ ಕರುವನ್ನು ಮನೆಯ ಮುಂದೆ ಕಟ್ಟಿಹಾಕಲಾಗಿತ್ತು. ಆದರೆ ರಾತ್ರಿಯ ವೇಳೆ ಚಿರತೆ ದಾಳಿ ಮಾಡಿ ಕೊಂದು ತಿಂದಿದೆ. ಚಿರತೆ ದಾಳಿಯಿಂದ ಇಲ್ಲಿನ ಗ್ರಾಮಸ್ಥರೂ ಭಯಭೀತರಾಗಿದ್ದಾರೆ. ಬೋನು ಇಟ್ಟು ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ