Karnataka Assembly Polls: ರಮೇಶ್ ಜಾರಕಿಹೊಳಿಯಂತೆ ದಿಟ್ಟತನ ಪ್ರದರ್ಶಿಸಲು ಮಹೇಶ್ ಕುಮಟಳ್ಳಿಗೆ ಸಲಹೆ ನೀಡಿದ ಬಸನಗೌಡ ಯತ್ನಾಳ್

ಅರುಣ್​ ಕುಮಾರ್​ ಬೆಳ್ಳಿ

Updated on: Apr 26, 2023 | 4:13 PM

ಕುಮಟಳ್ಳಿಗೆ ಟಿಕೆಟ್ ಇಲ್ಲಾಂದ್ರೆ ತನಗೂ ಬೇಡ ಎಂದು ದಾರ್ಷ್ಟ್ಯತೆ ತೋರಿದ ಜಾರಕಿಹೊಳಿ ಅವರನ್ನು ನಿಜವಾದ ಗಂಡಸು ಎಂದು ಬಸನಗೌಡ ಯತ್ನಾಳ್ ಬಣ್ಣಿಸಿದರು.

ಬೆಳಗಾವಿ: ಅಥಣಿ ಕ್ಷೇತ್ರದಲ್ಲಿ ಮಹೇಶ್ ಕುಮಟಳ್ಳಿ (Mahesh Kumatalli) ಪರ ಪ್ರಚಾರ ಮಾಡಲು ಇಂದು ಬಿಜೆಪಿ ನಾಯಕರ ದಂಡೇ ಅಗಮಿಸಿತ್ತು. ಬಿಎಸ್ ಯಡಿಯೂರಪ್ಪ (BS Yediyurappa) ಮುಖ್ಯಮಂತ್ರಿಯಾಗಿದ್ದಾಗ ಅವರ ಬದ್ಧವೈರಿಯಂತಾಡುತ್ತಿದ್ದ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅಥಣಿಯಲ್ಲಿ ಮಾಜಿ ಮುಖ್ಯಮಂತ್ರಿಯ ಜೊತೆ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ತಮ್ಮ ಎಂದಿನ ಹಾಸ್ಯಭರಿತ ಶೈಲಿಯಲ್ಲಿ ಮಾತಾಡಿದ ಯತ್ನಾಳ್, ಮಹೇಶ್ ಕುಮಟಳ್ಳಿಗೆ ಸೌಮ್ಯ ಸ್ವಭಾವ ತೊರೆದು ರಮೇಶ್ ಜಾರಕಿಹೊಳಿ ಹಾಗೆ ಗಡಸುತನ, ದಿಟ್ಟತನ ಪ್ರದರ್ಶಿಸುವಂತೆ ಸಲಹೆ ನೀಡಿದರು. ಕುಮಟಳ್ಳಿಗೆ ಟಿಕೆಟ್ ಇಲ್ಲಾಂದ್ರೆ ತನಗೂ ಬೇಡ ಎಂದು ದಾರ್ಷ್ಟ್ಯತೆ ತೋರಿದ ಜಾರಕಿಹೊಳಿ ಅವರನ್ನು ನಿಜವಾದ ಗಂಡಸು ಎಂದು ಬಸನಗೌಡ ಯತ್ನಾಳ್ ಬಣ್ಣಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.