ಬೆಳವಣಿಗೆ ಸಹಿಸದೇ ದುಷ್ಟಶಕ್ತಿಗಳ ಷಡ್ಯಂತ್ರ: ತಮ್ಮ ಬ್ಯಾಂಕ್ ಮೇಲಿನ ಆರೋಪಗಳಿಗೆ ಯತ್ನಾಳ್ ಸ್ಪಷ್ಟನೆ
ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ ‘ಸಿದ್ದಸಿರಿ ಕೋ-ಆಪರೇಟಿವ್ ಬ್ಯಾಂಕ್’ ಕುರಿತು ಬೇರೆ ರೀತಿಯ ಮಾತುಗಳು ಕೇಳಿಬರುತ್ತಿವೆ. ಬ್ಯಾಂಕ್‌ನ ಬಡ ಠೇವಣಿದಾರರ 1065 ಕೋಟಿ ರೂ. ಹಣವನ್ನು ಚಿಂಚೋಳಿಯ ಎಥೆನಾಲ್ ಘಟಕಕ್ಕೆ ಸುರಿಯಲಾಗಿದೆ. ಬ್ಯಾಂಕ್ನಲ್ಲಿ ಭಾರೀ ಅಕ್ರಮ ನಡೆದಿದೆ ಎನ್ನುವ ಆರೋಪಗಳು ಕೇಳಿಬಂದಿದ್ದು, ಇದೀಗ ಎಲ್ಲಾ ಆರೋಪಗಳಿಗೆ ಸ್ವತಃ ಬಸನಗೌಡ ಪಾಟೀಲ್ ಯತ್ನಾಳ್,ಶಿವಯೋಗಿ ಸಿದ್ಧರಾಮೇಶ್ವರರನ್ನ ಸ್ಮರಿಸಿ ಸ್ಪಷ್ಟನೆ ನೀಡಿದ್ದಾರೆ.
ವಿಜಯಪುರ, (ನವೆಂಬರ್ 18): ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ ‘ಸಿದ್ದಸಿರಿ ಕೋ-ಆಪರೇಟಿವ್ ಬ್ಯಾಂಕ್’ ಕುರಿತು ಬೇರೆ ರೀತಿಯ ಮಾತುಗಳು ಕೇಳಿಬರುತ್ತಿವೆ. ಬ್ಯಾಂಕ್‌ನ ಬಡ ಠೇವಣಿದಾರರ 1065 ಕೋಟಿ ರೂ. ಹಣವನ್ನು ಚಿಂಚೋಳಿಯ ಎಥೆನಾಲ್ ಘಟಕಕ್ಕೆ ಸುರಿಯಲಾಗಿದೆ. ಬ್ಯಾಂಕ್ನಲ್ಲಿ ಭಾರೀ ಅಕ್ರಮ ನಡೆದಿದೆ ಎನ್ನುವ ಆರೋಪಗಳು ಕೇಳಿಬಂದಿದ್ದು, ಇದೀಗ ಎಲ್ಲಾ ಆರೋಪಗಳಿಗೆ ಸ್ವತಃ ಬಸನಗೌಡ ಪಾಟೀಲ್ ಯತ್ನಾಳ್,ಶಿವಯೋಗಿ ಸಿದ್ಧರಾಮೇಶ್ವರರನ್ನ ಸ್ಮರಿಸಿ ಸ್ಪಷ್ಟನೆ ನೀಡಿದ್ದಾರೆ.
ಸಿದ್ಧಸಿರಿ ಮಲ್ಟಿಸ್ಟೇಟ್ ಮಲ್ಟಿ ಪರ್ಪಸ್ ಕೋ ಆಪರೇಟಿವ್ ಸೊಸೈಟಿ ಹಣಕಾಸಿನ ವಿಚಾರವಾಗಿ ಬಂದ ಆರೋಪಗಳಿಗೆ ವಿಡಿಯೋ ಮೂಲಕ ಬ್ಯಾಂಕಿನ ಠೇವಣಿದಾರರು, ಗ್ರಾಹಕರಿಗೆ ಸ್ಪಷ್ಟನೆ ನೀಡಿರುವ ಯತ್ನಾಳ್, ಸಿದ್ಧಸಿರಿ ಸುಭದ್ರವಾಗಿದೆ. ಒಂದು ವಾರದಿಂದ ಕೆಲ ದುಷ್ಟಶಕ್ತಿಗಳು ಸಿದ್ಧಸಿರಿ ಸೌಹಾರ್ದರ ವಿರುದ್ಧ ಷಡ್ಯಂತ್ರ ಮಾಡುತ್ತಿವೆ. ಕರ್ನಾಟಕ ಮಹಾರಾಷ್ಟ್ರ ರಾಜ್ಯಗಳಲ್ಲಿ ಸಿದ್ಧಸಿರಿ ತನ್ನ ಕಾರ್ಯವಾಪ್ತಿ ಹೆಚ್ಚಿಸಿಕೊಂಡಿದೆ. 6 ಸಾವಿರ ಕೋಟಿ ಠೇವಣಿ ಸಂಗ್ರಹಿಸಿ ಶೇರುದಾರರು, ಠೇವಣಿದಾರರ ವಿಶ್ವಾಸ ಗಳಿಸಿದೆ. ಸಿದ್ಧಸಿರಿಯನ್ನ ರಾಜ್ಯದಲ್ಲಿ ನಂ1 ಆಗಿ ತಂದು ನಿಲ್ಲಿಸಿದ್ದೇವೆ. ನಿಮ್ಮ ಆಶೀರ್ವಾದ, ಸಿದ್ಧಸಿರಿ ಸಿಬ್ಬಂದಿಗಳ ಶ್ರಮದಿಂದ ಯಾವುದೇ ಗೊಂದಲಗಳಿಲ್ಲ. ಯಾವುದೇ ಅವ್ಯವಹಾರ ನಡೆದಿಲ್ಲ, ಅಭದ್ರಿತ ಸಾಲಗಳನ್ನ ನೀಡಿಲ್ಲ ಎಂದಿದ್ದಾರೆ.
ಎಲ್ಲದಕ್ಕೂ ಸೂಕ್ತ ಭದ್ರತೆ ತೆಗೆದುಕೊಂಡಿದ್ದೇವೆ. 2 ಸಾವಿರ ಕೋಟಿಯಷ್ಟು ಸ್ಥಿರಾಸ್ತಿಯನ್ನ ಮಾಡಿದ್ದೇವೆ. ಸುರಕ್ಷಿತ ಆಸ್ತಿಗಳನ್ನ ಇಟ್ಟುಕೊಂಡೆ ಸಾಲವನ್ನ ಕೊಟ್ಟಿದ್ದೇವೆ. ಯಾವುದೇ ಭಯ ಪಡುವ ಅವಶ್ಯಕತೆ ಇಲ್ಲ, ನಿಮ್ಮ ಪ್ರೀತಿಯೊಂದಿಗೆ ಭವಿಷ್ಯದಲ್ಲಿ ನಮ್ಮ ಜೊತೆಗಿರಿ. ಯಾವುದೇ ತೊಂದರೆ ಆಗೋದಿಲ್ಲ ಎಂದು ತಮ್ಮ ಬ್ಯಾಂಕಿನ ಗ್ರಹಕರಿಗೆ ಹೇಳಿದ್ದಾರೆ.
