ರಂಭಾಪುರಿ ಪೀಠದ ಇತಿಹಾಸದ ಬಗ್ಗೆಯೂ ‘ಬಸವ ಮಂಟಪ’ ಪುಸ್ತಕದಲ್ಲಿ ವಿವಾದಾತ್ಮಕ ಉಲ್ಲೇಖ!

Edited By:

Updated on: Nov 20, 2026 | 11:58 AM

ರವಿ ಹಂಜ್ ಬರೆದ 'ಬಸವ ಮಂಟಪ' ಪುಸ್ತಕದಲ್ಲಿ ರಂಭಾಪುರಿ ಪೀಠ ಮತ್ತು ಪಂಚಾಚಾರ್ಯ ಪೀಠಗಳ ಇತಿಹಾಸದ ಕುರಿತು ಮಾಡಿರುವ ವಿವಾದಾತ್ಮಕ ಉಲ್ಲೇಖಗಳು ಇದೀ ತೀವ್ರ ಚರ್ಚೆ ಹಾಗೂ ಆಕ್ರೋಶಕ್ಕೆ ಕಾರಣವಾಗಿವೆ. ಪಂಚಾಚಾರ ಪೀಠಗಳಿಗೆ ಬಸವಪೂರ್ವ ಕಾಲಮಾನವನ್ನ ಕಲ್ಪಿಸುವ ಉದ್ದೇಶದಿಂದ ಅನೇಕ ಕೃತಕ ಆಕರಗಳನ್ನ ಸೃಷ್ಟಿ ಮಾಡಲಾಗಿದೆ ಎಂಬಿತ್ಯಾದಿ ಅಂಶಗಳು ಪುಸ್ತಕದಲ್ಲಿವೆ ಎನ್ನಲಾಗಿದೆ.

ಚಿಕ್ಕಮಗಳೂರು, ನವೆಂಬರ್​​ 20: ಪಂಚಪೀಠಗಳ ಮೂಲ ಪೀಠ ರಂಭಾಪುರಿ ಪೀಠದ ಬಗ್ಗೆ ರವಿ ಹಂಜ್ ಬರೆದ ಬಸವ ಮಂಟಪ ಪುಸ್ತಕದಲ್ಲಿನ ‌ಉಲ್ಲೇಖವೂ ಈಗ ವಿವಾದಕ್ಕೆ ಕಾರಣವಾಗಿದೆ. ಪಂಚಾಚಾರ್ಯಪೀಠಗಳು ಬಸವವೋತ್ತರ ಕಾಲೀನದವು. ರಂಭಾಪುರಿ ಪೀಠವು ನಾಥ ಸಂಪ್ರದಾಯಕ್ಕೆ ಸೇರಿತ್ತು. ಮುಕ್ತಿಮುನಿನಾಥ, ದಿಗಂಬರ ಮುಕ್ತಿ ಮುನಿನಾಥರು ಪ್ರವರ್ತಕರು ಎಂದು ಚನ್ನ ಬಸವಪುರಾಣ ತಿಳಿಸುತ್ತದೆ. ಇವರ ಉತ್ತರಾಧಿಕಾರಿ ಎಂದು ಕುಮಾರ ಚೆನ್ನಬಸವ. ಬಳಿಕ ರಂಭಾಪುರಿ ಪೀಠದವರು ಇದನ್ನು ವಶಪಡಿಸಿಕೊಡರು.ಕುಮಾರ ಚೆನ್ನನಬಸವ ತನ್ನ ಬಸವ ಪುರಾಣದ ಶರಣರ ಕಥೆಗಳು ಕೃತಿಯಲ್ಲಿ ತನ್ನ ಪೀಠ ಪರಂಪರೆಯ ಮುಕ್ತಿಮುನಿನಾಥರನ್ನ, ಕಲ್ಯಾಣದ ಶರಣರನ್ನ ನೆನೆದಿದ್ದಾರೆ ಹೊರತು ರೇವಣಾರಾಧ್ಯರನ್ನ ನೆನೆದಿಲ್ಲ. ಕುಮಾರ ಚೆನ್ನಬಸವ ಕಾಲದ ವರೆಗೂ ರೇವಣಾರಾಧ್ಯಪೀಠ ರಂಭಾಪುರಿಯಲ್ಲಿ ಅಸ್ತಿತ್ವಕ್ಕೆ ಬಂದಿಲ್ಲ. ಪಂಚಾಚಾರ ಪೀಠಗಳಿಗೆ ಬಸವಪೂರ್ವ ಕಾಲಮಾನವನ್ನ ಕಲ್ಪಿಸುವ ಉದ್ದೇಶದಿಂದ ಅನೇಕ ಕೃತಕ ಆಕರಗಳನ್ನ ಸೃಷ್ಟಿ ಮಾಡಲಾಗಿದೆ ಎಂಬಿತ್ಯಾದಿ ಅಂಶಗಳು ಪುಸ್ತಕದಲ್ಲಿವೆ ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು

ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡಿನ ಮಾವಿನಗುಣಿ ಗ್ರಾಮದಿಂದ ಬೆಂಗಳೂರಿಗೆ ಬಂದು ಪತ್ರಿಕೋದ್ಯಮ ವೃತ್ತಿ ಆರಂಭಿಸಿ, ಹಾಯ್ ಬೆಂಗಳೂರು, ಜನಶ್ರೀ, ಕಸ್ತೂರಿ, ಟೈಮ್ಸ್ ನೌ ನಲ್ಲಿ ಕೆಲಸ ಮಾಡಿದ್ದು. ಸದ್ಯ ಟಿವಿ9 ಕನ್ನಡದಲ್ಲಿ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದು. 8 ವರ್ಷಗಳ ಕಾಲ ರಾಜಕೀಯ, ಕ್ರೈಮ್ ಸೇರಿದಂತೆ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದು. ಉತ್ತಮ ಸಮಾಜಕ್ಕಾಗಿ ಟಿವಿ9 ಜೊತೆ ವೃತ್ತಿ ಜೀವನ ಸಾಗಿದೆ.

Read More