ಬಡ್ತಿ ವಿಚಾರಕ್ಕೆ ವಿದ್ಯಾರ್ಥಿಗಳ ಮುಂದೆಯೇ ಹೊಡೆದಾಡಿಕೊಂಡ ಪ್ರಿನ್ಸಿಪಾಲ್, ಶಿಕ್ಷಕಿ

Edited By:

Updated on: Feb 17, 2026 | 7:57 PM

ಬಸವನಗುಡಿ ಖಾಸಗಿ ಶಾಲೆಯೊಂದರಲ್ಲಿ ಪ್ರಾಂಶುಪಾಲರು (ಉಮ್ಮಿಯ ಕುಲಸುಂ) ಮತ್ತು ಶಿಕ್ಷಕಿ (ರೇಷ್ಮಾ) ನಡುವೆ ಗಂಭೀರ ಕಿತ್ತಾಟ ನಡೆದಿದೆ. ಶಿಕ್ಷಕಿಗೆ ಸಿಕ್ಕ ಬಡ್ತಿ ಮತ್ತು ಪ್ರಶಂಸೆ ಪ್ರಾಂಶುಪಾಲರ ಅಸಮಾಧಾನಕ್ಕೆ ಕಾರಣವಾಗಿತ್ತು. ವಿದ್ಯಾರ್ಥಿಗಳ ಮುಂದೆಯೇ ನಡೆದ ಮಾತಿನ ಚಕಮಕಿ ಬಳಿಕ ಹೊಡೆದಾಟಕ್ಕೆ ತಿರುಗಿದೆ. ಪ್ರಾಂಶುಪಾಲರು ಹೊರಗಿನವರನ್ನು ಕರೆಸಿ ಹಲ್ಲೆ ನಡೆಸಿದ್ದಾರೆಂದು ಶಿಕ್ಷಕಿ ಆರೋಪಿಸಿದ್ದಾರೆ. ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ, ತನಿಖೆ ನಡೆಯುತ್ತಿದೆ.

ಬೆಂಗಳೂರು, ಫೆ.17: ಬಸವನಗುಡಿ ವ್ಯಾಪ್ತಿಯ ಖಾಸಗಿ ಶಾಲೆಯೊಂದರಲ್ಲಿ ಶಿಸ್ತು ಕಲಿಸಬೇಕಾದ ಗುರುಗಳೇ ಕ್ಲಾಸ್​​ ರೂಮ್​​​ನಲ್ಲಿ ಕಿತ್ತಾಡಿಕೊಂಡಿರುವ ಘಟನೆ ನಡೆದಿದೆ. ಶಾಲೆಯ ಪ್ರಿನ್ಸಿಪಾಲ್ ಉಮ್ಮಿಯ ಕುಲಸುಂ ಮತ್ತು ಶಿಕ್ಷಕಿ ರೇಷ್ಮಾ ನಡುವೆ ಈ ಗಲಾಟೆ ನಡೆದಿದೆ. ಶಿಕ್ಷಕಿ ರೇಷ್ಮಾ ಅವರ ಕಾರ್ಯವೈಖರಿಯನ್ನು ಮೆಚ್ಚಿ ಶಾಲಾ ಆಡಳಿತ ಮಂಡಳಿಯು ಅವರಿಗೆ ಬಡ್ತಿ ಮತ್ತು ಪ್ರಶಂಸನಾ ಪತ್ರ ನೀಡಿತ್ತು. ಇದು ಪ್ರಿನ್ಸಿಪಾಲ್ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ವಿಚಾರವಾಗಿ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ಹೋಗಿದೆ. ಈ ವೇಳೆ ಪ್ರಿನ್ಸಿಪಾಲ್ ಕಡೆಯವರು ಹಾಗೂ ಶಿಕ್ಷಿಕಯ ಕಡೆಯವರು ವಿದ್ಯಾರ್ಥಿಗಳ ಸಮ್ಮುಖದಲ್ಲೇಹೊಡೆದಾಟದ ಹಂತಕ್ಕೆ ತಲುಪಿದ್ದಾರೆ. ಪ್ರಿನ್ಸಿಪಾಲ್ ಉಮ್ಮಿಯ ಕುಲಸುಂ ಅವರು ಹೊರಗಿನ ಜನರನ್ನು ಕರೆಸಿ ತನ್ನ ಮೇಲೆ ಹಲ್ಲೆ ಮಾಡಿಸಿದ್ದಾರೆ ಎಂದು ಶಿಕ್ಷಕಿ ರೇಷ್ಮಾ ಗಂಭೀರವಾಗಿ ಆರೋಪಿಸಿದ್ದಾರೆ. ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ