ಇಸ್ರೇಲ್​ನಿಂದ ಹಮಾಸ್ ಕಮಾಂಡರ್ ಬಶರ್ ಹತ್ಯೆ, ಹಸಿವಿನಿಂದ ಸಾಯುತ್ತಿರುವ ಜನ, ಪ್ರತಿಭಟನೆ

Updated on: Jul 21, 2025 | 7:39 AM

ಇಸ್ರೇಲಿ ರಕ್ಷಣಾ ಪಡೆಗಳು ಹಮಾಸ್ ಕಮಾಂಡರ್ ಬಶರ್ ಥಾಬೆಟ್​​ನನ್ನು ಹತ್ಯೆ ಮಾಡಿರುವುದಾಗಿ ಹೇಳಿಕೊಂಡಿವೆ. ಅಷ್ಟೇ ಅಲ್ಲದೆ 75 ಭಯೋತ್ಪಾದಕರ ಅಡಗುತಾಣಗಳ ಮೇಲೆ ದಾಳಿ ನಡೆಸಿರುವುದಾಗಿ ಐಡಿಎಫ್​ ಹೇಳಿದೆ. ಭಯೋತ್ಪಾದಕ ಮೂಲಸೌಕರ್ಯ, ಭಯೋತ್ಪಾದಕರು ಮತ್ತು ಸುರಂಗಗಳನ್ನು ಪತ್ತೆಹಚ್ಚಿ ನಾಶಪಡಿಸಲಾಗಿದೆ ಎಂದು ಐಡಿಎಫ್ ಹೇಳಿದೆ.ಮೃತ ಬಶರ್ ಥಾಬೆಟ್ ಹಮಾಸ್‌ನ ಶಸ್ತ್ರಾಸ್ತ್ರ ಉತ್ಪಾದನಾ ಪ್ರಧಾನ ಕಚೇರಿಯಲ್ಲಿ ಅಭಿವೃದ್ಧಿ ಮತ್ತು ಯೋಜನೆಗಳ ವಿಭಾಗದ ಕಮಾಂಡರ್ ಆಗಿದ್ದರು.

ಟೆಲ್ ಅವಿವ್, ಜುಲೈ 21: ಇಸ್ರೇಲಿ ರಕ್ಷಣಾ ಪಡೆಗಳು ಹಮಾಸ್ ಕಮಾಂಡರ್ ಬಶರ್ ಥಾಬೆಟ್​​ನನ್ನು ಹತ್ಯೆ ಮಾಡಿರುವುದಾಗಿ ಹೇಳಿಕೊಂಡಿವೆ. ಅಷ್ಟೇ ಅಲ್ಲದೆ 75 ಭಯೋತ್ಪಾದಕರ ಅಡಗುತಾಣಗಳ ಮೇಲೆ ದಾಳಿ ನಡೆಸಿರುವುದಾಗಿ ಐಡಿಎಫ್​ ಹೇಳಿದೆ. ಭಯೋತ್ಪಾದಕ ಮೂಲಸೌಕರ್ಯ, ಭಯೋತ್ಪಾದಕರು ಮತ್ತು ಸುರಂಗಗಳನ್ನು ಪತ್ತೆಹಚ್ಚಿ ನಾಶಪಡಿಸಲಾಗಿದೆ ಎಂದು ಐಡಿಎಫ್ ಹೇಳಿದೆ.ಮೃತ ಬಶರ್ ಥಾಬೆಟ್ ಹಮಾಸ್‌ನ ಶಸ್ತ್ರಾಸ್ತ್ರ ಉತ್ಪಾದನಾ ಪ್ರಧಾನ ಕಚೇರಿಯಲ್ಲಿ ಅಭಿವೃದ್ಧಿ ಮತ್ತು ಯೋಜನೆಗಳ ವಿಭಾಗದ ಕಮಾಂಡರ್ ಆಗಿದ್ದರು.

ಅಲ್ ಜಜೀರಾ ವರದಿಯ ಪ್ರಕಾರ, ಇಸ್ರೇಲಿ ಸೇನೆಯು ಕನಿಷ್ಠ 115 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದೆ. ಕಳೆದ 24 ಗಂಟೆಗಳ ವರದಿ ಅವಧಿಯಲ್ಲಿ 18 ಜನರು ಹಸಿವಿನಿಂದ ಸಾವನ್ನಪ್ಪಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ.

ಇಸ್ರೇಲಿ ವಾಯುಪಡೆ (ಐಎಎಫ್) ಗಾಜಾದಲ್ಲಿ ಮಿಲಿಟರಿ ಕಾಂಪೌಂಡ್‌ಗಳು ಮತ್ತು ಸೆಲ್ ಸೈಟ್‌ಗಳು ಸೇರಿದಂತೆ ಸುಮಾರು 75 ಗುರಿಗಳನ್ನು ಯಶಸ್ವಿಯಾಗಿ ಹೊಡೆದುರುಳಿಸಿದೆ ಎಂದು ಐಡಿಎಫ್ ತಿಳಿಸಿದೆ. ಗಾಜಾದಲ್ಲಿ ಇಸ್ರೇಲ್‌ನ ಕ್ರಮಗಳನ್ನು ಖಂಡಿಸಿ, ಟುನೀಶಿಯಾ, ಇರಾಕ್, ಟರ್ಕಿ, ಲೆಬನಾನ್ ಮತ್ತು ಮೊರಾಕೊ ಸೇರಿದಂತೆ ಹಲವಾರು ದೇಶಗಳಲ್ಲಿ ಪ್ರದೇಶದಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿವೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ