ಮಜಾ ಟಾಕೀಸ್​ನಲ್ಲಿ ಉಗ್ರಂ ಮಂಜು ಇಂಗ್ಲಿಷ್ ಕೇಳಿ ಬಿದ್ದು ಬಿದ್ದು ನಕ್ಕ ಗೌತಮಿ

Updated on: Feb 09, 2025 | 2:49 PM

ಉಗ್ರಂ ಮಂಜು ಅವರು ‘ಬಿಗ್ ಬಾಸ್ ಕನ್ನಡ ಸೀಸನ್​ 11’ ಶೋನಲ್ಲಿ ಆಗಾಗ ಇಂಗ್ಲಿಷ್ ಮಾತನಾಡಿ ಟ್ರೋಲ್ ಆಗಿದ್ದರು. ಅದನ್ನು ಸೃಜನ್ ಲೋಕೇಶ್ ಅವರು ಮಜಾ ಟಾಕೀಸ್​ನಲ್ಲಿ ನೆನಪು ಮಾಡಿಕೊಂಡಿದ್ದಾರೆ. ಮತ್ತೊಮ್ಮೆ ಇಂಗ್ಲಿಷ್​ನಲ್ಲಿ ಮಾತನಾಡುವಂತೆ ಮಂಜುಗೆ ಸೂಚಿಸಲಾಗಿದೆ. ಅವರ ಮಾತುಗಳನ್ನು ಕೇಳಿದ ಎಲ್ಲರಿಗೂ ಸಿಕ್ಕಾಪಟ್ಟೆ ನಗು ಬಂದಿದೆ.

ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಉಗ್ರಂ ಮಂಜು ಅವರು ಇಂಗ್ಲಿಷ್ ಮಾತನಾಡಿದ್ದು ಸಖತ್ ಟ್ರೋಲ್ ಆಗಿತ್ತು. ಈಗ ಅವರು ಮಜಾ ಟಾಕೀಸ್​ ವೇದಿಕೆಯಲ್ಲೂ ಇಂಗ್ಲಿಷ್ ಡೈಲಾಗ್ ಹೇಳಿ ಎಲ್ಲರನ್ನೂ ನಗಿಸಿದ್ದಾರೆ. ಹೊಸ ಸಂಚಿಕೆಗೆ ಅತಿಥಿಯಾಗಿ ಬಂದಿದ್ದ ಗೌತಮಿ ಜಾದವ್, ತ್ರಿವಿಕ್ರಮ್, ಭವ್ಯಾ ಗೌಡ ಕೂಡ ಬಿದ್ದು ಬಿದ್ದು ನಕ್ಕಿದ್ದಾರೆ. ಬಿಗ್ ಬಾಸ್ ಶೋನಿಂದ ಉಗ್ರಂ ಮಂಜು ಅವರ ಜನಪ್ರಿಯತೆ ಹೆಚ್ಚಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More