‘ಇಷ್ಟು ಗಲೀಜು ಆಟ ಆಡಬೇಡಿ’; ಕಾವ್ಯಾಗೆ ನೇರವಾಗಿ ಹೇಳಿದ ಗಾನವಿ

Updated on: Oct 01, 2026 | 1:00 PM

ಬಿಗ್ ಬಾಸ್ ಮನೆಗೆ ಗಾನವಿ ಅವರು ಎಂಟ್ರಿ ಕೊಟ್ಟ ಕ್ಷಣದಿಂದ ಆಟದ ದಿಕ್ಕು ಬದಲಾಗಿದೆ. ಎಲ್ಲರೂ ತಮ್ಮ ಸಾಮರ್ಥ್ಯವನ್ನು ತೋರಿಸುವ ಪ್ರಯತ್ನದಲ್ಲಿ ಇದ್ದಾರೆ. ಆದರೆ, ಇದಕ್ಕೆ ಗಾನವಿ ಅವರು ಅವಕಾಶ ನೀಡುತ್ತಿಲ್ಲ. ಈಗ ಕಾವ್ಯಾ ಹಾಗೂ ಗಾನವಿ ಮಧ್ಯೆ ಕಿರಿಕ್ ಆಗಿದೆ. ಇಬ್ಬರೂ ಕಿತ್ತಾಡಿಕೊಂಡಿದ್ದಾರೆ.

ಗಾನವಿ ಗೌಡ ಅವರು ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಬಳಿಕ ಆಟದ ದಿಕ್ಕು ಬದಲಾಗಿದೆ. ಸ್ಪರ್ಧಿಗಳ ಮಧ್ಯೆ ಕಿರಿಕ್ ಹೆಚ್ಚಿದೆ. ಅದರಲ್ಲೂ ಮಹಿಳಾ ಸ್ಪರ್ಧಿಗಳು ಕಿತ್ತಾಡಿಕೊಳ್ಳದೆ ಹಾಯಾಗಿದ್ದರು. ಅವರ ಮಧ್ಯೆಯೇ ಕಿಚ್ಚು ಹೆಚ್ಚಾಗುತ್ತಿದೆ. ಸೆಪ್ಟೆಂಬರ್ 30ರ ಎಪಿಸೋಡ್​​ನಲ್ಲಿ ಸೌಂದರ್ಯಾ ಹಾಗೂ ಗಾನವಿ ಅವರು ಕಿತ್ತಾಡಿಕೊಂಡಿದ್ದರು. ಈಗ ಗಾನವಿ vs ಕಾವ್ಯಾ ಗೌಡ ಎಂಬಂತಾಗಿದೆ. ಅಡುಗೆ ಮನೆಯಲ್ಲಿ ಹತ್ತಿದ ಕಾಡ್ಗಿಚ್ಚು ಇಡೀ ಮನೆಯನ್ನು ಆವರಿಸಿದೆ. ‘ಇಷ್ಟು ಗಲೀಜು ಆಟವನ್ನು ಆಡಬೇಡಿ’ ಎಂದು ಗಾನವಿ ಅವರು ಕಾವ್ಯಾಗೆ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More