ಬಿಬಿಎಂಪಿ ಕೇಂದ್ರ ಕಚೇರಿಗೆ ಹಾವುಗಳ ಕಾಟ; ದಿಢೀರ್​ ಎಂಟ್ರಿಕೊಟ್ಟ ನಾಗಪ್ಪನನ್ನ ಕಂಡು ಸಿಬ್ಬಂದಿ ಗಾಬರಿ

Edited By: ಕಿರಣ್ ಹನುಮಂತ್​ ಮಾದಾರ್

Updated on: Dec 05, 2023 | 2:50 PM

ಬಿಬಿಎಂಪಿ ಆಯುಕ್ತರ ಕೊಠಡಿ ಬಳಿ ಒಂದಲ್ಲ, ಎರಡು ನಾಗರಹಾವುಗಳು ಪ್ರತ್ಯಕ್ಷವಾಗಿದೆ. ದಿಢೀರ್​ ಎಂಟ್ರಿಕೊಟ್ಟ ನಾಗಪ್ಪನನ್ನು ಕಂಡು ಸಿಬ್ಬಂದಿಗಳು ಗಾಬರಿಯಾಗಿದ್ದು, ವಿಷಯ ತಿಳಿದು ಸ್ಥಳಕ್ಕೆ ಬಂದ ಉರಗತಜ್ಞ ಮಂಜುನಾಥ್​ ಎಂಬುವವರು ರಕ್ಷಣೆ ಮಾಡಿದ್ದಾರೆ. ಇನ್ನು ಕಳೆದ ಬಾರಿ ಕೂಡ ಪಿಆರ್​ಓ ಕಚೇರಿ ಬಳಿ ಹಾವು ಪ್ರತ್ಯಕ್ಷವಾಗಿತ್ತು.

ಬೆಂಗಳೂರು, ಡಿ.05: ಬಿಬಿಎಂಪಿ(BBMP) ಕೇಂದ್ರ ಕಚೇರಿಯಲ್ಲಿ ಹಾವು(Snake)ಗಳ ಕಾಟ ಹೆಚ್ಚಾಗಿದ್ದು, ಪದೇ ಪದೇ ಕಾಣಿಸಿಕೊಳ್ಳುತ್ತಿವೆ. ಅದರಂತೆ ಇಂದು(ಡಿ.05) ಕೂಡ ಬಿಬಿಎಂಪಿ ಆಯುಕ್ತರ ಕೊಠಡಿ ಬಳಿ ಒಂದಲ್ಲ, ಎರಡು ನಾಗರಹಾವುಗಳು ಪ್ರತ್ಯಕ್ಷವಾಗಿದೆ. ದಿಢೀರ್​ ಎಂಟ್ರಿಕೊಟ್ಟ ನಾಗಪ್ಪನನ್ನು ಕಂಡು ಸಿಬ್ಬಂದಿಗಳು ಗಾಬರಿಯಾಗಿದ್ದು, ವಿಷಯ ತಿಳಿದು ಸ್ಥಳಕ್ಕೆ ಬಂದ ಉರಗತಜ್ಞ ಮಂಜುನಾಥ್​ ಎಂಬುವವರು ರಕ್ಷಣೆ ಮಾಡಿದ್ದಾರೆ. ಇನ್ನು ಕಳೆದ ಬಾರಿ ಕೂಡ ಪಿಆರ್​ಓ ಕಚೇರಿ ಬಳಿ ಹಾವು ಪ್ರತ್ಯಕ್ಷವಾಗಿತ್ತು. ಇದೀಗ ಒಂದು ನಾಗರಹಾವು, ಒಂದು ಕೇರೇಹಾವು ಒಟ್ಟಿಗೆ ಎಂಟ್ರಿಕೊಟ್ಟಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
TV9 Web

TV9 Kannada

Read More