Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸನ: ಹಾವು ಕಚ್ಚಿ ಯುವಕ ಸಾವು; ಕೆಣಕಿದವನ ಮೇಲೆ ಸೇಡು ತೀರಿಸಿಕೊಂಡಿತಾ ನಾಗರಹಾವು?

ಹಾಸನ ಜಿಲ್ಲೆಯ ಹೊಳೆನರಸೀಪುರ (Holenarasipura) ತಾಲ್ಲೂಕಿನ ದೇವರಗುಡ್ಡನಹಳ್ಳಿ ಗ್ರಾಮದ ಯುವಕನೋರ್ವ ಹಾವು(Snake) ಕಚ್ಚಿ ಮೃತಪಟ್ಟ ಘಟನೆ ನಡೆದಿದೆ. ಇನ್ನು ಸಾವಿನ ಬಳಿಕ ಇತನ ಮೊಬೈಲ್​ ನೋಡಿದಾಗ ಅಚ್ಚರಿ ಸಂಗತಿಯೊಂದು ಬಯಲಾಗಿದ್ದು, ಅದು ಎನು ಅಂತೀರಾ? ಇಲ್ಲಿದೆ ನೋಡಿ.

ಹಾಸನ: ಹಾವು ಕಚ್ಚಿ ಯುವಕ ಸಾವು; ಕೆಣಕಿದವನ ಮೇಲೆ ಸೇಡು ತೀರಿಸಿಕೊಂಡಿತಾ ನಾಗರಹಾವು?
ಮೃತ ಯುವಕ
Follow us
ಮಂಜುನಾಥ ಕೆಬಿ
| Updated By: ಕಿರಣ್ ಹನುಮಂತ್​ ಮಾದಾರ್

Updated on:Nov 02, 2023 | 6:58 PM

ಹಾಸನ, ನ.02: ಹಾವು(Snake) ಕಚ್ಚಿ ಯುವಕನೋರ್ವ ಸಾವನ್ನಪ್ಪಿದ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ (Holenarasipura) ತಾಲ್ಲೂಕಿನ ದೇವರಗುಡ್ಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ಅ.29 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಭಿಲಾಷ್ (30) ಮೃತ ವ್ಯಕ್ತಿ. ಇತ ಸಂಜೆ ಏಳು ಗಂಟೆ ಸಮಯದಲ್ಲಿ ನೀರು ಹಾಯಿಸಲು ತೆರಳಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಮಗನನ್ನು ಕಳೆದುಕೊಂಡು ತಾಯಿಯ ಗೋಳಾಟ ಮುಗಿಲುಮುಟ್ಟಿದೆ.

ತನ್ನನ್ನು ಕೆಣಕಿದವನ ಮೇಲೆ ಸೇಡು ತೀರಿಸಿಕೊಂಡಿತಾ ನಾಗರಹಾವು?

ಅಭಿಲಾಷ್ ಮೃತಪಟ್ಟ ಬಳಿಕ ಆತನ ಮೊಬೈಲ್​ನ್ನು ಸ್ನೇಹಿತರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಭಿಲಾಷ್ ಮೊಬೈಲ್​ನಲ್ಲಿ  ನಾಗರ ಹಾವಿನ ವೀಡಿಯೋ ಪತ್ತೆಯಾಗಿದೆ. ಹೌದು, ಪೈಪ್‌ನಿಂದ ನಾಗರಹಾವನ್ನು ಕೆಣಕಿರುವ ದೃಶ್ಯವನ್ನು ಅಭಿಲಾಷ್ ತನ್ನ ಮೊಬೈಲ್‌ನಲ್ಲಿ‌ಯೇ​ ಸೆರೆ ಹಿಡಿದಿದ್ದಾನೆ. ಪೈಪ್‌‌ನಿಂದ ಕೆಣಕುತ್ತಿದ್ದಂತೆ ಹೆಡೆ ಹೆತ್ತಿ ಬುಸುಗುಟ್ಟಿರುವ ನಾಗರಹಾವಿನ ವಿಡಿಯೋ ಇದೀಗ ವೈರಲ್​ ಆಗಿದೆ. ಇನ್ನು ಈ ಘಟನೆ ಬಳಿಕ ಹಾವು ಕಚ್ಚಿ ಮೃತಪಟ್ಟಿದ್ದಾನೆ. ತನಗೆ ಹಿಂಸೆ ನೀಡಿದ ಅಭಿಲಾಷ್‌ನನ್ನು ಅದೇ ಹಾವು ಕಚ್ಚಿ ಸಾಯಿಸಿರುವ ಬಗ್ಗೆ ಅನುಮಾನ ಮೂಡಿದ್ದು, ಘಟನೆ ಬಗ್ಗೆ ದೇವರಗುಡ್ಡ ಗ್ರಾಮದಲ್ಲಿ ಬಿಸಿ ಬಿಸಿ ಚರ್ಚೆ ಶುರುವಾಗಿದೆ.

ಇದನ್ನೂ ಓದಿ:ವೀಡಿಯೊ ವೀಕ್ಷಿಸಿ: ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ಮಹಿಳೆಯ ಬಾಯಿಂದ ಹೊರಬಿತ್ತು ಉದ್ದನೆಯ ಜೀವಂತ ಹಾವು!

ಬ್ಯಾಂಕ್ ಸಿಬ್ಬಂದಿಯಿಂದ ರೈತನಿಗೆ ಕಿರುಕುಳ; ಹೆದರಿ ಮೂರ್ಛೆ ಬಂದು ಆಸ್ಪತ್ರೆಗೆ ದಾಖಲಾಗಿದ್ದ ರೈತ ಸಾವು

ಧಾರವಾಡ: ಬೆಳೆ ಸಾಲ ಪಾವತಿಸುವಂತೆ ಬ್ಯಾಂಕ್ ಸಿಬ್ಬಂದಿಯಿಂದ ರೈತನಿಗೆ ಕಿರುಕುಳ ನೀಡಲಾಗಿದ್ದು, ಇದರಿಂದ ಹೆದರಿ ಮೂರ್ಛೆ ಬಂದು ಬಿದ್ದಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಇದೀಗ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ರೈತ ಮಹಾದೇವಪ್ಪ ಜಾವೂರ(75) ಎಂಬಾತ ಕೊನೆಯುಸಿರೆಳೆದಿದ್ದಾನೆ. 1 ವಾರದ ಹಿಂದೆ ಹುಬ್ಬಳ್ಳಿ ಕಿಮ್ಸ್‌ಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ.

2015ರಲ್ಲಿ ಕೆವಿಜಿ ಬ್ಯಾಂಕ್‌ನಲ್ಲಿ 14.5 ಲಕ್ಷ ಬೆಳೆ ಸಾಲ ಮಾಡಿದ್ದ. ಆದ್ರೆ, ಮಹಾದೇವಪ್ಪ ಜಾವೂರ ಸಕಾಲದಲ್ಲಿ ಸಾಲ ಮರುಪಾವತಿ ಮಾಡಿರಲಿಲ್ಲ. ಮತ್ತೊಂದು ಖಾತೆಯಲ್ಲಿದ್ದ 1.4 ಲಕ್ಷ ರೂ. ಮುಟ್ಟುಗೋಲು ಹಾಕಿಕೊಂಡಿದ್ರು, ಅಲ್ಲದೆ ನಿತ್ಯ ಜಾವೂರ ಮನೆಗೆ ತೆರಳಿ ಸಾಲ ಕಟ್ಟುವಂತೆ ಕಿರುಕುಳ ನೀಡುತ್ತಿದ್ದರು. ಅದರಂತೆ ಅ.28 ರಂದು ಬ್ಯಾಂಕ್ ಸಿಬ್ಬಂದಿ ಜತೆ ಮಾತನಾಡುತ್ತಿರುವಾಗಲೇ ದುರ್ಘಟನೆ ನಡೆದಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:45 pm, Thu, 2 November 23