Wolf Snake: ಕಾರವಾರದಲ್ಲಿ ಅಪರೂಪದ ತೋಳ ಹಾವು ರಕ್ಷಣೆ! ಅದಕ್ಕೆ ಆ ಹೆಸರು ಯಾಕೆ? ವಿವರ ಇಲ್ಲಿದೆ
ಕಾರವಾರ ನಗರದಲ್ಲಿ ಅಪರೂಪದ ತೋಳ ಹಾವು ರಕ್ಷಣೆ ಮಾಡಲಾಗಿದೆ. ಮನೆಯ ಹೊರಗಿನ ಗೋಡೆಯ ಮೇಲೆ ಹರಿದಾಡುತ್ತಿದ್ದ ಕಾಳಿಂಗ ಸರ್ಪದ ಮರಿಯಂತಹ ಕಪ್ಪು ಬಣ್ಣದ ಹಾವನ್ನ ಕಂಡ ಮನೆಯವರು ಆತಂಕಗೊಂಡು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಹಾವನ್ನ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ( Karwar, Uttara Kannada) ಆಶ್ರಮ ರಸ್ತೆಯ ಮನೆಯೊಂದರಲ್ಲಿ ಅಪರೂಪದ ತೋಳ ಹಾವು (wolf snake) ರಕ್ಷಣೆ (Rescue) ಮಾಡಲಾಗಿದೆ. ಮನೆಯ ಹೊರಗಿನ ಗೋಡೆಯ ಮೇಲೆ ಹರಿದಾಡುತ್ತಿದ್ದ ಕಾಳಿಂಗ ಸರ್ಪದ ಮರಿಯಂತಹ ಕಪ್ಪು ಬಣ್ಣದ ಹಾವನ್ನ ಕಂಡ ಮನೆಯವರು ಆತಂಕಗೊಂಡು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಈ ವೇಳೆ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಎಚ್ಚರಿಕೆಯಿಂದ ಹಾವನ್ನ ಡಬ್ಬವೊಂದರಲ್ಲಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ತೋಳದ ಹಲ್ಲಿನಂತೆ ಹಲ್ಲುಗಳನ್ನ ಹೊಂದಿರುವುದರಿಂದ ಇವುಗಳನ್ನ ಉಲ್ಫ್ ಸ್ನೇಕ್ ಎಂದು ಕರೆಯಲಾಗುತ್ತದೆ. ಕೇವಲ ಒಂದು- ಒಂದೂವರೆ ಅಡಿ ಮಾತ್ರ ಬೆಳೆಯುವ ಇವು ಕಾಂಪೌಂಡ್ ಗೋಡೆಯ ಸಂದಿಗಳಲ್ಲಿ ಆಶ್ರಯ ಪಡೆದುಕೊಳ್ಳುತ್ತವೆ. ಇವು ನಿಶಾಚರಿಯಾಗಿದ್ದು ವಿಷಕಾರಿಯಲ್ಲದಿದ್ದರೂ ಇವುಗಳ ದೇಹದ ಮೇಲಿನ ಬಿಳಿಯ ಪಟ್ಟಿಯಂತಹ ರಚನೆಯಿಂದ ವಿಷಕಾರಿಯಂತೆ ಕಂಡುಬರುತ್ತವೆ ಎಂದು ಅರಣ್ಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ