ಕುಮಾರಸ್ವಾಮಿ ಹೇಳಿದಕ್ಕೆಲ್ಲ ಸೊಪ್ಪು ಹಾಕುವ ಅವಶ್ಯಕತೆ ಸರ್ಕಾರಕ್ಕಿಲ್ಲ: ಡಿಕೆ ಶಿವಕುಮಾರ್

ಕುಮಾರಸ್ವಾಮಿ ಹೇಳಿದಕ್ಕೆಲ್ಲ ಸೊಪ್ಪು ಹಾಕುವ ಅವಶ್ಯಕತೆ ಸರ್ಕಾರಕ್ಕಿಲ್ಲ: ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 21, 2023 | 5:03 PM

ಕುಮಾರಸ್ವಾಮಿಗೆ ರೈತರ ಬಗ್ಗೆ ಕಾಳಜಿ ಇದ್ದಿದ್ದರೆ, ರೈತರಿಗಾಗಿ ಏನಾದರೂ ಮಾಡಿದ್ದರೆ ಪರಿಸ್ಥಿತಿಯ ಅರಿವು ಇರುತಿತ್ತು, ರೈತರಿಗೆ ಅವರೇನೂ ಮಾಡಿಲ್ಲ ಎಂದು ಶಿವಕುಮಾರ್ ಹೇಳಿದರು. ಸರ್ಕಾರ ಲೂಟಿ ಮಾಡುತ್ತಿದೆ ಅಂತ ಅವರಿಗೆ ಅನಿಸಿದ್ದರೆ ಮೇಲೆ ದೆಹಲಿಯಲ್ಲಿ ಅವರ ಸರ್ಕಾರವೇ ಇದೆಯಲ್ಲ ತನಿಖೆ ಮಾಡಿಸಲಿ ಎಂದು ಅವರು ವ್ಯಂಗ್ಯವಾಗಿ ಹೇಳಿದರು.

ಬೆಂಗಳೂರು: ಡಿಕೆ ಶಿವಕುಮಾರ್ (DK Shivakumar) ಮತ್ತು ಹೆಚ್ ಡಿ ಕುಮಾರಸ್ವಾಮಿ (HD Kumaraswamy) ನಡುವಿನ ಹೇಳಿಕೆ-ಪ್ರತಿಹೇಳಿಕೆಗಳ ಕಾಳಗ ಈ ದಶಕದಲ್ಲಂತೂ ಕೊನೆಗೊಳ್ಳಲಾರದು. ವಿದ್ಯುತ್ ಕೃತಕ ಅಭಾವ ಸೃಷ್ಟಿಸಿ ಲೂಟಿ ಮಾಡುವ ಹೊಂಚು ಹಾಕುತ್ತಿದೆ ಕಾಂಗ್ರೆಸ್ ಸರಕಾರ (Congress government) ಎಂದು ಕುಮಾರಸ್ವಾಮಿ ಮಾಡಿರುವ ಅರೋಪಕ್ಕೆ ಶಿವಕುಮಾರ ನೇರವಾದ, ಖಾರವಾದ ಪ್ರತಿಕ್ರಿಯೆ ಏನೂ ನೀಡಲಿಲ್ಲ. ಹಿಂದಿನ ಬಿಜೆಪಿ ಸರ್ಕಾರ ಹೆಚ್ಚುವರಿ ವಿದ್ಯುತ್ ಉತ್ಪಾದನೆಗೆ ಒತ್ತು ನೀಡದ ಕಾರಣ ಈ ಪರಿಸ್ಥಿತಿ ಬಂದೊದಗಿದೆ, ನೀರಿನ ಅಭಾವದ ಕಾರಣ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ, ವೃಥಾ ಆರೋಪಗಳನ್ನು ಮಾಡುವ ಬದಲಿಗೆ ಕುಮಾರಸ್ವಾಮಿ ರೈತರೊಂದಿಗೆ ಮಾತಾಡಲಿ ಎಂದರು. ಕುಮಾರಸ್ವಾಮಿ ಶ್ವೇತಪತ್ರ ಹೊರಡಿಸಲಿ ಅಂತ ಹೇಳಿತ್ತಿದ್ದಾರೆ ಅಂತ ಹೇಳಿದ್ದಕ್ಕೆ ಸಿಡಿಮಿಡಿಗೊಂಡ ಶಿವಕುಮಾರ್, ಅವರು ಹೇಳಿದ್ದನ್ನೆಲ್ಲ ಕೇಳುತ್ತಾ ಕೂರಕ್ಕಾಗಲ್ಲ, ಅದಕ್ಕೆಲ್ಲ ಸೊಪ್ಪು ಹಾಕುವ ಅಗತ್ಯವೂ ಸರ್ಕಾರಕ್ಕಿಲ್ಲ, ಅವರಿಗೆ ರೈತರ ಬಗ್ಗೆ ಕಾಳಜಿ ಇದ್ದಿದ್ದರೆ, ರೈತರಿಗಾಗಿ ಏನಾದರೂ ಮಾಡಿದ್ದರೆ ಪರಿಸ್ಥಿತಿಯ ಅರಿವು ಇರುತಿತ್ತು, ರೈತರಿಗಾಗಿ ಅವರೇನೂ ಮಾಡಿಲ್ಲ ಎಂದು ಶಿವಕುಮಾರ್ ಹೇಳಿದರು. ಸರ್ಕಾರ ಲೂಟಿ ಮಾಡುತ್ತಿದೆ ಅಂತ ಅವರಿಗೆ ಅನಿಸಿದ್ದರೆ ಮೇಲೆ ದೆಹಲಿಯಲ್ಲಿ ಅವರ ಸರ್ಕಾರವೇ ಇದೆಯಲ್ಲ ತನಿಖೆ ಮಾಡಿಸಲಿ ಎಂದು ಅವರು ವ್ಯಂಗ್ಯವಾಗಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ