ಇತರ ಶೋಷಿತ ಸಮುದಾಯಗಳ ಜನರಿಗೂ ನನ್ನಂಥ ಅವಕಾಶ ಸಿಗಬೇಕು: ಮಣಿಕಂಠ, ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿಯಿಂದ ಆಹ್ವಾನಿತ ಚಮ್ಮಾರ
ಪ್ರಧಾನಿ ಮೋದಿ ತನ್ನನ್ನು ಆಹ್ವಾನಿಸಿರೋದು ಇಡೀ ಸಮುದಾಯಕ್ಕೆ ಸಂದ ಗೌರವ ಎನ್ನುವ ಅವರು, ಹಿಂದುಳಿದ, ಶೋಷಿತ ಮತ್ತು ಕಡೆಗಣನೆಗೆ ಗುರಿಯಾಗಿರುವ ಇನ್ನೂ ಆನೇಕ ಸಮುದಾಯಗಳ ಜನ ತನ್ನಂತೆ ಕಷ್ಟಪಟ್ಟು ಸ್ವಾಭಿಮಾನದಿಂದ ಬದುಕು ನಡೆಸುತ್ತಿದ್ದಾರೆ, ಅವರಿಗೂ ಇಂಥ ಅವಕಾಶಗಳು ಸಿಗಬೇಕೆಂದು ಸಮಾಜಮುಖಿ ಕಳಕಳಿಯನ್ನು ಪ್ರದರ್ಶಿಸುತ್ತಾರೆ.
ಉಡುಪಿ: ಹಾಗೆ ನೋಡಿದರೆ, ಕುಂದಾಪುರದ ಮಣಿಕಂಠ (Manikantha of Kundapura) ದೇಶದ ಅನೇಕ ಚಮ್ಮಾರರ (cobblers) ಹಾಗೆ ತನ್ನನ್ನು ವೃತ್ತಿಯಲ್ಲಿ ತೊಡಗಿಸಿಕೊಂಡು ಸ್ವಾವಲಂಬಿ ಮತ್ತು ಸ್ವಾಭಿಮಾನದ ಬದುಕು ನಡೆಸುತ್ತಿರುವ ಒಬ್ಬ ಸಾಮಾನ್ಯ ವ್ಯಕ್ತಿ. ಆದರೆ ಈಗ ಅವರು ಸಾಮಾನ್ಯ ವ್ಯಕ್ತಿ ಖಂಡಿತ ಅಲ್ಲ ಮಾರಾಯ್ರೇ. ಯಾಕೆ ಅಂತೀರಾ? ದೆಹಲಿಯಲ್ಲಿ ನಡೆಯಲಿರುವ 2024 ರ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗಿಯಾಗಲು ವಿಶೇಷ ಆಹ್ವಾನ ಅವರಿಗೆ ಸಿಕ್ಕಿದೆ. ಯಾರಿಂದ ಗೊತ್ತಾ? ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendra Modi) ಅವರಿಂದ! ಮಣಿಕಂಠ ಅವರ ಖುಷಿಗೆ ಪಾರವೇ ಇಲ್ಲ. ಅವರ ಕುಟುಂಬ ಸುಮಾರು 7 ದಶಕಕಗಳಿಂದ ಚಮ್ಮಾರಿಕೆ ವೃತ್ತಿ ಮಾಡಿಕೊಂಡು ಬಂದಿದೆ. ತಮ್ಮ ಸಂತೋಷವನ್ನು ಟಿವಿ9 ವರದಿಗಾರನೊಂದಿಗೆ ಹಂಚಿಕೊಂಡಿರುವ ಮಣಿಕಂಠ ತನಗೆ ಸಿಕ್ಕಿರುವ ಗೌರವದ ಬಗ್ಗೆ ರೋಮಾಂಚಿತರಾಗಿದ್ದಾರೆ. ಕುಂದಾಪುರದಲ್ಲಿ ಅವರಿಗೆ ಒಳ್ಳೇ ಹೆಸರಿದೆ, ಸ್ಥಳೀಯ ಸಂಘಸಂಸ್ಥೆಗಳು ಅವರಿಗೆ ಸತ್ಕರಿಸಿದ್ದೂ ಉಂಟು. ದೆಹಲಿಯಿಂದ ಬಂದಿರುವ ಆಹ್ವಾನ ಅವರಿಗೆ ಕುಂದಾಪುರ ಪುರಸಭಾ ಅದಿಕಾರಿಯೊಬ್ಬರಿಂದ ಗೊತ್ತಾಗಿದೆ. ಪ್ರಧಾನಿ ಮೋದಿ ತನ್ನನ್ನು ಆಹ್ವಾನಿಸಿರೋದು ಇಡೀ ಸಮುದಾಯಕ್ಕೆ ಸಂದ ಗೌರವ ಎನ್ನುವ ಅವರು, ಹಿಂದುಳಿದ, ಶೋಷಿತ ಮತ್ತು ಕಡೆಗಣನೆಗೆ ಗುರಿಯಾಗಿರುವ ಇನ್ನೂ ಆನೇಕ ಸಮುದಾಯಗಳ ಜನ ತನ್ನಂತೆ ಕಷ್ಟಪಟ್ಟು ಸ್ವಾಭಿಮಾನದಿಂದ ಬದುಕು ನಡೆಸುತ್ತಿದ್ದಾರೆ, ಅವರಿಗೂ ಇಂಥ ಅವಕಾಶಗಳು ಸಿಗಬೇಕೆಂದು ಸಮಾಜಮುಖಿ ಕಳಕಳಿಯನ್ನು ಪ್ರದರ್ಶಿಸುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ